ಮಂಜೇಶ್ವರ: ನಾಡಿನ ಸುಭಿಕ್ಷೆ ಹಾಗೂ ಆರೋಗ್ಯ ಅಭಿವೃದ್ಧಿ ಅಪೇಕ್ಷಿಸಿ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಮೊರತ್ತಣೆಯ ಸದಸ್ಯರು ಹಾಗೂ ಊರವರು ನಡೆಸಿದ ಧರ್ಮಸ್ಥಳ ಕ್ಷೇತ್ರ ಪಾದ ಯಾತ್ರೆಯಲ್ಲಿ ಅಚ್ಚರಿಯ ವಿದ್ಯಾಮಾನವೊಂದು ಭಕ್ತಿ ಸಂಚಲತೆಗೆ ಕಾರಣವಾಗಿದೆ.
ಗಂಗು ಹಾಗೂ ಜಯರಾಮ ಮೊರತ್ತಣೆ ಅವರ ನೇತೃತ್ವದಲ್ಲಿ ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಶ್ರೀಮಹಾಬಲೇಶ್ವರ ಸ್ವಾಮೀಜಿ ಹಾಗೂ ಉದ್ಯಾವರ ಮಾಡ ಶ್ರೀರಾಜ ಬೆಳ್ಚಪ್ಪಾಡರ ಶುಭಾರ್ಶೀವಾದದಲ್ಲಿ ಮೊರತ್ತಣೆ ಶ್ರೀಮಂತ್ರ ದೇವತೆ ಸನ್ನಿಧಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದ ಯಾತ್ರೆ ಆರಂಭಿಸಿದ್ದರು.
ಪೊಯ್ಯತ್ತಬೈಲ್ ದರ್ಗಾ, ವರ್ಕಾಡಿ ಇಗರ್ಜಿಗೆ ಭೇಟಿ ನೀಡಿದ ಪಾದ ಯಾತ್ರ ತಂಡ ಉಜಿರೆಗೆ ತಲುಪುವಾಗ ಕಪ್ಪಿನ ಶ್ವಾನವೊಂದು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.
ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ತಂಡವು ಅಲ್ಪ ವಿರಾಮಕ್ಕಾಗಿ ತಂಗಿದ ಸ್ಥಳದಲ್ಲೆಲ್ಲಾ ಜತೆಗೆ ಇರುತ್ತಿದ್ದ ಶ್ವಾನ ತಂಡದ ಭಕ್ತಿಯನ್ನು ಪರೀಕ್ಷಿಸುವಂತಿತ್ತು. ನೇತ್ರಾವತಿ ಸ್ನಾನ ಘಟ್ಟದಲ್ಲಿ ಮಿಂದು ಶುರ್ಚೀಭೂತರಾದ ಈ ತಂಡ ಬಳಿಕ ಶ್ರೀಮಂಜುನಾಥನ ದೇವಸ್ಥಾನದ ಮಹಾದ್ವಾರಕ್ಕೆ ತಲುಪುವಾಗ ಇದ್ದಕ್ಕಿದ್ದಂತೆ ಎಲ್ಲೋ ಮಾಯವಾಗಿತ್ತಂತೆ. ಈ ಅಪರೂಪದ ವಿದ್ಯಾಮಾನವನ್ನು ಹಲವರಲ್ಲಿ ತಿಳಿಸಿದಾಗ ಸಾಕ್ಷತ್ ಶ್ರೀಮನ್ನಾರಾಯಣನೇ ಶ್ವಾನದ ರೂಪದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ನಿದರ್ಶನ ಎಂಬುದಾಗಿ ಸೂಚಿಸಿದ್ದಾರೆ. ಪಾದ ಯಾತ್ರೆಯಲ್ಲಿ ಮುರತ್ತಣೆಯ ಗಂಗು,ಜಯರಾಮ, ಲೋಕೇಶ್ ಗಣೇಶ್, ಕಿರಣ್,ಬಟ್ಟಿಪದವಿನ ಶರಣ್, ಶಿವ,,ಯತೀಶ್, ಆಶೋಕ್,ಶ್ರವಣ್,ಕಿಶನ್ ಅರಿಂಗುಲ,ಶಶೀಂದ್ರ,ಸುರೇಶ್ ಅರಿಬೈಲು ಭಾಗವಹಿಸಿದ್ದರು.






0 Comments