ಕಾನಕ್ಕೋಡು ಶ್ರೀ ವನ ಶಾಸ್ತಾರ ಕ್ಷೇತ್ರದ ಬೃಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ನಿಧಿ ಸಂಗ್ರಹಕ್ಕೆ ಚಾಲನೆ


ಮುಳ್ಳೇರಿಯ: ಪ್ರತಿಫಲಾಪೇಕ್ಷೆಯಿಲ್ಲದೆ ನಿತ್ಯ ನಿರಂತರ ಭಗವಂತನ ನಾಮಸ್ಮರಣೆಯೊಂದಿಗೆ ತೊಡಗಿಸಿಕೊಂಡಾಗ ನಮ್ಮ ಜೀವನ  ಪಾವನ ಎಂದು ಧಾರ್ಮಿಕ ಮುಂದಾಳು ಕೊಡುಗೈದಾನಿ ಉದ್ಯಮಿ ವಸಂತ ಪೈ ಹೇಳಿದರು. ಅವರು ಕಾನಕ್ಕೋಡು ಶ್ರೀ ವನ ಶಾಸ್ತಾರ  ಕ್ಷೇತ್ರದಲ್ಲಿ ದಶಂಬರ 23 ರಿಂದ 25 ರ ವರೆಗೆ ನಡೆಯುವ ಬೃಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮವನ್ನ ನೆರವೇರಿಸಿ ಮಾತನಾಡುತ್ತಿದ್ದರು ಸಮಾರಂಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಕೋಳಿಕ್ಕಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು 

     ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ರಾವ್, ಶ್ರೀಶ ಭಟ್, ದೇವಾನಂದ ಶೆಟ್ಟಿ, ಗಂಗಾಧರ ರಾವ್ ಭಾವನ ಕೊಚ್ಚಿ, ಸೇವಾ ಸಮಿತಿ ಕಾಯ೯ದರ್ಶಿ ಬಾಲಕ್ಕಷ್ಟ ಮೀತಲೆವೀಡ್ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ಪತಿ  ಮೊದಲಾದವರು ಶುಭಾಶಂಸನೆ ಗೈದರು ನಾರಾಯಣ ಇತ್ತಿಕಾಲಮೂಲೆ ಸ್ವಾಗತಿಸಿ ಬೇಬಿ ಟೀಚರ್ ವಂದಿಸಿದರು

Post a Comment

0 Comments