ಉದ್ಯಾವರ ಸಾವಿರ ಜಮಾತ್ ನೇತೃತ್ವದಲ್ಲಿ ಸಾವಿರಾರು ಜನರು ಪಾಲ್ಗೊಂಡ ರಾಲಿಯೊಂದಿಗೆ ಸಂಭ್ರಮದ ಪ್ರವಾದಿ ದಿನಾಚರಣೆ


ಮಂಜೇಶ್ವರ: ಉದ್ಯಾವರ ಸಾವಿರ ಜಮಾತ್ ಕಮಿಟಿ ನೇತೃತ್ವದಲ್ಲಿ ಪ್ರವಾದಿ ದಿನಾಚರಣೆಯ ಅಂಗವಾಗಿ ನಡೆದ ರಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಉದ್ಯಾವರ ಸಾವಿರ ಜಮಾತ್ ಮಸೀದಿ ಆವರಣದಲ್ಲಿರುವ ಅಸೈಯದ್ ಶಹೀದ್ ವಲಿಯುಲ್ಲಾಹಿಯವರ ದರ್ಗಾ ಶರೀಫ್‌ನಿಂದ ಆರಂಭವಾದ ರಾಲಿಯು ಜೆ.ಎಂ. ರಸ್ತೆ ಮಾರ್ಗವಾಗಿ ಕರೋಡ ಜಂಕ್ಷನ್ ತಲುಪಿ ಅಲ್ಲಿಂದ ಕುಂಜತ್ತೂರು ಜಂಕ್ಷನ್ ಗೆ ತೆರಳಿ ನಂತರ ಹಿಂತಿರುಗಿ ಮಾಡ ಕಮಾನದ ಬಳಿಯಿಂದ  ಜುಮಾ ಮಸೀದಿ ರಸ್ತೆಯಲ್ಲಿ ಪ್ರವೇಶಿಸಿ ಬಿ.ಎಸ್. ನಗರ ದಾಟಿ ಸಾವಿರ ಜಮಾತ್ ಪರಿಸರದಲ್ಲಿ  ಸಮಾರೋಪಗೊಂಡಿತು. 

ಉದ್ಯಾವರ ಸಾವಿರ ಜಮಾತ್ ಅಧ್ಯಕ್ಷರಾದ ಯು.ಕೆ. ಸೈಫುಲ್ಲಾ ತಂಗಳ್, ಪ್ರ ಕಾರ್ಯದರ್ಶಿ ಇಬ್ರಾಹಿಂ ಬಟರ್‌ಫ್ಲೈ, ಉಪಾಧ್ಯಕ್ಷರಾದ ಸೈಯದ್ ಮುಹಮ್ಮದ್ ಅತ್ತಾವುಲ್ಲ ತಂಗಳ್, ಅಬೂಬಕರ್ ಮಾಹಿನ್ ಹಾಜಿ, ಕೋಶಾಧಿಕಾರಿ ಅಹ್ಮದ್ ಬಾವ ಹಾಜಿ, ಕಾರ್ಯದರ್ಶಿಗಳಾದ ಎಸ್.ಎಂ.ಬಶೀರ್, ಮುಸ್ತಾಫ ಉದ್ಯಾವರ್, ಫಾರೂಕ್ ಮೌಲವಿ ಮೊದಲಾದವರು ನೇತೃತ್ವ ನೀಡಿದರು.

 ನಂತರ ನಡೆದ ಮಿಲಾದ್ ಸಭೆಯನ್ನು ಮಂಜೇಶ್ವರ ಸಂಯುಕ್ತ  ಜಮಾಅತ್ ಅಧ್ಯಕ್ಷರಾದ ಸಯ್ಯದ್ ಅತ್ತಾವುಳ್ಳ ತಂಗಲ್ ಉಧ್ಘಾಟಿಸಿದರು, ಖತೀಬ್ ಅಬ್ದುಲ್ ಕರೀಂ ಮೌಲವಿ ಆಶೀರ್ವಚನ ನೀಡಿದರು, ಮುದರಿಸ್ ಅಬ್ದುಲ್ ಖಾದರ್ ಮೌಲವಿ ಪ್ರಾರ್ಥಿಸಿದರು.

Post a Comment

0 Comments