ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಂಚಾಯತು ಮಟ್ಟದ ಸಭೆ ಜರಗಿತು.
ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ಪಂ.ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.ಬದಿಯಡ್ಕ ಠಾಣಾ ಪೋಲಿಸ್ ಅಧಿಕಾರಿ ವಿನೋದ್ ಕುಮಾರ್, ಅಬಕಾರಿ ಇಲಾಖೆಯ ಬದಿಯಡ್ಕ ವಲಯಾಧಿಕಾರಿ ವಿನು ಎಚ್ ಪ್ರಧಾನ ಉಪನ್ಯಾಸಗೈದರು.
ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ ಮೊದಲಾದವರು ಮಾತನಾಡಿದರು.ಪಂಚಾಯತು ಸದಸ್ಯರು, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ,ಕುಟುಂಬಶ್ರೀ
ಸದಸ್ಯರು, ಆರೋಗ್ಯ ಹಾಗೂ ಶಾಲಾ ಮುಖ್ಯ ಶಿಕ್ಷಕರು,ಅಂಗನವಾಡಿ ಅಧ್ಯಾಪಿಕೆಯರು,ಹರಿತ ಕರ್ಮ ವಿವಿಧ ಸಾಮಾಜಿಕ ಮುಖಂಡರು ಪಾಲ್ಗೊಂಡರು. ಬಳಿಕ ಅಬಕಾರಿ ಸಿವಿಲ್ ಆಫೀಸರ್ ಜನಾರ್ಧನನ್ ತರಗತಿ ನಡೆಸಿದರು. ಪಂ.ಹೆಡ್ ಕ್ಲಾರ್ಕ್ ಪಿ.ಎಸ್.ಪ್ರೇಂ ಚಂದ್ ಸ್ವಾಗತಿಸಿದರು.





0 Comments