ಯುಎಇ : ಪಟ್ಲ ಪೌಂಡೇಶನ್ ದುಬಾಯಿ ಘಟಕ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ಜಂಟಿ ಆಶ್ರಯದಲ್ಲಿ ನಡೆಸುವ "ಪಟ್ಲ ಸಂಭ್ರಮ 2023 ದುಬೈ" ಇದರ ಸಮಾಲೋಚನಾ ಸಭೆಯು ಇತ್ತೀಚಿಗೆ ನಗರದ ಗಿಸಸ್ ನ ಫಾರ್ಚೂನ್ ಪ್ಲಾಝದ ಸಭಾಂಗಣದಲ್ಲಿ ಜರುಗಿತ್ತು.
ಸಭೆಯ ಉದ್ಘಾಟನೆಯನ್ನು ಪಟ್ಲ ಪೌಂಡೇಶನ್ ದುಬೈ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಪಟ್ಲ ಘಟಕದ ಸಂಚಾಲಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಮುಂಬಯಿಯ ಕಲಾ ಸಂಘಟಕರಾ ಕರ್ನೂರು ಮೋಹನ್ ರೈ,ಉದ್ಯಮಿ ಸುಂದರ ಶೆಟ್ಟಿ, ಮನೋಹರ ತೋನ್ಸೆ,ಚಿತ್ರ ನಿರ್ಮಾಪಕ ಈಶ್ವರದಾಸ್ ಶೆಟ್ಟಿ,ಬಿಲ್ಲವಾಸ್ ದುಬೈಯ ಪ್ರಭಾಕರ ಸುವರ್ಣ, ಗಮ್ಮತ್ ಕಲಾವಿದರ ವಾಸು ಶೆಟ್ಟಿ ಮತ್ತು ಯಕ್ಷಗಾನ ಅಭ್ಯಾಸ ಕೆಂದ್ರ ಯುಎಇ ಯ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ರವರು ಸಂಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಪಟ್ಲ ಫೌಂಡೇಶನ್ ದುಬೈ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮಾತನಾಡುತ್ತಾ ದುಬೈನಲ್ಲಿ ಜೂ.11ರಂದು ನಡೆಯುವ ಪಟ್ಲ ಸಂಭ್ರಮ 2023" ಕಾರ್ಯಕ್ರಮವು ವಿಶ್ವ ಮಟ್ಟದ ಪಟ್ಲ ಸಂಭ್ರಮ ಕಾರ್ಯಕ್ರಮವಾಗಿ ಕಾಣಲಿದೆ. ವಿಶ್ವದಲ್ಲಿ ಇರುವ 39 ಪಟ್ಲ ಘಟಕದ ಪದಾಧಿಕಾರಿಗಳು ಬಾಗವಹಿಸಲಿದ್ದರೆ ಹಾಗೂ 300ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಚಾಲಕರಾದ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡುತ್ತಾ ಜೂ.11 ರಂದು ಶೇಖ್ ರಷೀದ್ ಆಡಿಟೋರಿಯಂನಲ್ಲಿ ಬೆಳಿಗ್ಗೆ 11 ರಿಂದ ಸಂಜೆಯ ವರೆಗೆ ಅದ್ದೂರಿಯಾಗಿ ಜರಗಲಿದ್ದು ಇದರ ಯಶಸ್ವಿಗೆ ಎಲ್ಲಾ ಸದಸ್ಯರು ಸಹಕರಿಸಬೇಕಾಗಿ ವಿನಂತಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಮನೋಹರ ತೋನ್ಸೆ,ಕರ್ನೂರು ಮೋಹನ್ ರೈ,ಯಕ್ಷಗಾನ ಗುರು ಶೇಖರ್ ಡಿ ಶೆಟ್ಟಿಗಾರ್,ಪ್ರಭಾಕರ್ ಸುವರ್ಣ,ವಾಸು ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದುಬೈ ಘಟಕದ ಕಾರ್ಯದರ್ಶಿ ವಿಠಲ ಶೆಟ್ಟಿಯವರ ನಿಧನರಾದ ಕಾರಣ ತೆರವಾಗಿದ್ದ ಕಾರ್ಯದರ್ಶಿ ಸ್ಥಾನಕ್ಕೆ ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯಕ್ಷಯೋಧಾಸ್ ನ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಂತರ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಪಟ್ಲ ಘಟಕದ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕೊಟಿಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




0 Comments