ಬದಿಯಡ್ಕ : ಕೇರಳ ರಾಜ್ಯ ಸರ್ವಿಸ್ ಪಿಂಚಣಿದಾರರ ಕಾಸರಗೋಡು ಬ್ಲಾಕ್ ಸಮ್ಮೇಳನ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿತು.ಬೆಳ್ಳಗೆ ಧ್ವಜಾರೋಹಣ ಬಳಿಕ ಪ್ರತಿನಿಧಿ ಸಮ್ಮೇಳನ , ವನಿತಾ ಸಮ್ಮೇಳನ, ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟಕ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ಸಿನ ಹಿರಿಯ ನೇತಾರ ಪಿಜಿ ಚಂದ್ರಹಾಸ ರೈ ವಹಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ, ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆಎಸ್ ಉದ್ಘಾಟಿಸಿದರು. ksspa ಜಿಲ್ಲಾಧ್ಯಕ್ಷ ಪಿಸಿ ಸುರೇಂದ್ರ ನಾಯರ್ ಮುಖ್ಯ ಭಾಷಣ ಮಾಡಿದರು. ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಎಂ, ಸದಸ್ಯ ಶಾಮ್ ಪ್ರಸಾದ್ ಮಾನ್ಯ, ಅನಸೂಯಾ ಮಾನ್ಯ,ಪ್ರೇಮ್ ರಾಜನ್, ಬಲರಾಮನ್ ನಾಯರ್, ಕುಂಞಕಣ್ಣನ್ ಕರಿಚೇರಿ, ಶಶಿಧರನ್ ಮಾಸ್ಟರ್, ಪುರುಷೋತ್ತಮನ ಕಾಡಗo, ಬಾಲಕೃಷ್ಣ, ಮಾಧವನ್, ಕೆ ಕೃಷ್ಣನ್, ಶ್ರೀಮತಿ ಕೆಸಿ ಸುಶೀಲ, ಕಾರ್ಯಕ್ರಮಕ್ಕೆ ಶುಭಸಂಶನೆ ಮಾಡಿದರು, ksspa ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ಸೀತರಾಮ ಮಲ್ಲ ಸ್ವಾಗತಿಸಿದರು. ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಮಂಡಲ ಅಧ್ಯಕ್ಷ ನಾರಾಯಣ ಎಂ ಅಧ್ಯಕ್ಷತೆ ವಹಿಸಿದರು, ಕರಾಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾರಿಜಾಕ್ಸನ್ ಉದ್ಘಾಟಿಸಿದರು.. ಮಹಮ್ಮದ್ ಆಲಿ ಪೆರ್ಲ, ಗೋಪಾಲನ್, ಕೃಷ್ಣದಾಸ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ksspa ಬದಿಯಡ್ಕ ಮಂಡಲ ಕಾರ್ಯದರ್ಶಿ ಇಬ್ರಾಹಿಂ ಕನ್ನೆಪಾಡಿ ಸ್ವಾಗತಿಸಿದರು,ksspa ಕಾಸರಗೋಡು ಬ್ಲಾಕ್ ಖಜಾಂಜಿ ಶ್ರೀ ಕೆ ಶ್ರೀಧರ ಧನ್ಯವಾದಗಳು ಸಮರ್ಪಿಸಿದರು.. ಶ್ರೀ ಮುಕುಂದ ಮಾಸ್ಟರ್, ಸೂಫಿ ಬದಿಯಡ್ಕ, ಕಾಸರಗೋಡು ಬ್ಲಾಕ್ ಅಧ್ಯಕ್ಷ ಶ್ರೀ ಕೆ ಚಂದ್ರಶೇಖರ ನಾಯರ್,ksspa ವಿವಿಧ ಮಂಡಲ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
0 Comments