ಎಣ್ಮಕಜೆ ಪಂ.ನ್ಯೂ ಇಂಡಿಯಾ ಲಿಟರಸಿ ಸಚೇತಕರಿಗೆ ತರಬೇತು ಕಾರ್ಯಗಾರ


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂ ಇಂಡಿಯಾ ಲಿಟರಸಿ ಪ್ರೋಗ್ರಾಮ್  ನ ಸಚೇತಕರಿಗೆ ತರಬೇತು ಕಾರ್ಯಗಾರ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಎಸ್. ಕಾರ್ಯಗಾರವನ್ನು ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ  ಜಲಜಾಕ್ಷಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ  ಸುನಿಲ್, ಜಿಲ್ಲಾ ಪ್ರೇರಕ್ ಶ್ರೀ ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು.


ಎಂ. ಶಂಕರ ರೈ ಮಾಸ್ತರ್ ಮತ್ತು ವನಜಾಕ್ಷಿ ಪಿ ಚೆಂಬ್ರಕಾನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. 


ಪಂಚಾಯತು ಪ್ರೇರಕ್ ಆನಂದ ಕುಕ್ಕಿಲ ಸ್ವಾಗತಿಸಿ, ಸಿಡಿಎಸ್ ಉಪಾಧ್ಯಕ್ಷೆ  ಶಶಿಕಲಾ ವಂದಿಸಿದರು
.

Post a Comment

0 Comments