ದುಬೈ : ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಅಜ್ಮಾನ್ ನ ವಿನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ 67 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ "ಅನಿವಾಸಿ ಕನ್ನಡಿಗರ ಜಾತ್ರೆ" ಕಾರ್ಯಕ್ರಮದಲ್ಲಿ ನಡೆದ "ಚಿಣ್ಣರ ಚಿಲಿಪಿಲಿ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಚಿಕ್ಕ ಮಕ್ಕಳ ಜೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ಜರುಗಿದ "ಚಿಣ್ಣರ ಚಿಲಿಪಿಲಿ" ಕಾರ್ಯಕ್ರಮದಲ್ಲಿ ನಡೆದ ಛದ್ಮವೇಷ ಸ್ಪರ್ದೆ ಅಭೂತಪೂರ್ವವಾಗಿ ಮೂಡಿಬಂತು.
ಜೂ.ಮಟ್ಟದ ಸ್ಪರ್ಧಾ ವಿಜೇತರು:
ಪ್ರಥಮ : ತ್ರೀಷಿಕ ಪ್ರಶಾಂತ್
ದ್ವೀತಿಯ: ಸಾತ್ವೀಕ್ ರಾವ್
ತೃತೀಯ: ಪ್ರಿಷ ಸಂತೋಷ್ ಶೆಟ್ಟಿ
ಸೀನಿಯರ್ ಮಟ್ಟದ ವಿಜೇತರು
ಪ್ರಥಮ : ಶೀಯಾ ಹಿತೇಶ್
ದ್ವಿತೀಯ: ಮಾನ್ವಿಕ್
ತೃತೀಯ: ವಿದಾತ್ರಿ ರಾವ್
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಾಂತರ ಸಿನಿಮಾ ನಿರ್ದೇಶಕ ನಾಯಕ ನಟ ರಿಷಬ್ ಶೆಟ್ಟಿ ಬಹುಮಾನ ವಿವರಿಸಿದರು.
ತೀರ್ಪುಗಾರರಾಗಿ ಶ್ರೀಮತಿ ಶಮ ರಾಣಿ,ಶ್ರೀಮತಿ ದೀಪ್ತಿ ದಿನಕರ್,ಸಚಿನ್ ಮಾಡ ಸಹಕರಿಸಿದರು. ಶ್ರೀಮತಿ ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್(ದುಬೈ)
ಚಿತ್ರ : ವಿವೇಕ್ ಆನಂದ್ ದುಬೈ





0 Comments