ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಕೇರಳೋತ್ಸವದಂಗವಾಗಿ ನಡೆಸಲಾಗುವ ಕ್ರೀಡೋತ್ಸವಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.ಮಲಂಗರೆ ಕ್ರೀಡಾಂಗಣದಲ್ಲಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕೇರಳೋತ್ಸವದ ಪಂಚಾಯತು ಮಟ್ಟದ ಉದ್ಘಾಟನೆ ನಡೆಸಿ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂ.ಸದಸ್ಯ ಶಶಿಧರ ಕಾಟುಕುಕ್ಕೆ, ಪಂಚಾಯತು ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ , ಕೇರಳೋತ್ಸವದ ಕೋರ್ಡಿನೇಟರ್ ಫಾರೂಕ್ ಪಳ್ಳಂ,ಜನಾರ್ಧನರೈ ಸೇರಾಜೆ ಮೊದಲಾದವರು ಉಪಸ್ಥಿತರಿದ್ದರು. ಆಶ್ರಫ್ ಮಲಂಗರೆ ಸ್ವಾಗತಿಸಿ ಯೂಸುಫ್ ಮಲಂಗರೆ ವಂದಿಸಿದರು. ನವಾಸ್ ಮರ್ತ್ಯ ನಿರೂಪಿಸಿದರು. ಬಳಿಕ ಮಾಸ್ಕ್ ಮಲಂಗರೆ ನೇತೃತ್ವದಲ್ಲಿ ಆಯೋಜಿಸಿದ ಪಂಚಾಯತು ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿತ್ತು.
ಪಂದ್ಯಾಟದಲ್ಲಿ ಫ್ರೆಂಡ್ಸ್ ಮಲಂಗರೆ ಪ್ರಥಮ ಹಾಗೂ
ನೇತಾಜಿ ಪೆರ್ಲ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕೇರಳೋತ್ಸವ ಕಾರ್ಯಕ್ರಮದ ವಿವರ:
ನ.16ಕ್ಕೆ ಸಂಜೆ 5ಗಂಟೆಯಿಂದ ಬಜಕೂಡ್ಲಿನ ಪಂಚಾಯತ್ ಮಿನಿ ಸ್ಟೇಡಿಯಂನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ನ.17ಕ್ಕೆ ಮಧ್ಯಾಹ್ನ 2.30 ಗಂಟೆಗೆ ಬೆದ್ರಂಪಳ್ಳ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ, ನ.18ಕ್ಕೆ ಮಧ್ಯಾಹ್ನ 1.30 ಗಂಟೆಯಿಂದ ಪಂಚಾಯತ್ ಸಭಾಂಗಣದಲ್ಲಿ ವೇದಿಕೆಯೇತರ ಸ್ಪರ್ಧೆಗಳು, ನ.18ಕ್ಕೆ ಮಧ್ಯಾಹ್ನ 4 ಗಂಟೆಯಿಂದ ಪೆರ್ಲ ಶಂಕರ ಸದನದಲ್ಲಿ ಬ್ಯಾಟ್ ಮಿಂಟನ್ ಹಾಗೂ ಚೆಸ್ ಸ್ಪರ್ಧೆ ನಡೆಯಲಿದೆ. ನ.19ಕ್ಕೆ ಬೆಳಿಗ್ಗೆ 9.30 ಗಂಟೆಯಿಂದ ಕಾಟುಕುಕ್ಕೆ ಶಾಲಾ ಮೈದಾನದಲ್ಲಿ ಆಟೋಟ ಸ್ಪರ್ಧೆ ಹಾಗೂ ಮಧ್ಯಾಹ್ನ 1.30 ಗಂಟೆಯಿಂದ ಪುಟ್ಬಾಲ್ ಸ್ಪರ್ಧೆ ನಡೆಯಲಿದೆ.ನ.20 ರಂದು ಎಣ್ಮಕಜೆ ಪಂಚಾಯತು ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿದೆ. ಅಂದು ಸಂಜೆ 5 ಗಂಟೆಗೆ ಕೇರಳೋತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರಗಲಿದೆ.




0 Comments