ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀ ಉಮೇಶ್ ನಾಥ ಕದ್ರಿ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರ ಪರಮಪೂಜ್ಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿದರು ಕುಕ್ಕಾಜೆ ಕ್ಷೇತ್ರ ದ ಬಗ್ಗೆ ವಿಸ್ತಾರವಾಗಿ ಪ್ರಾಸ್ತಾವಿಕ ಭಾಷಣವನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು ಮಾಡಿದರು
ಮಳಳಿ ಮಟ್ಟಿ ಮಠದ ದ ಶ್ರೀಗಳು ಕುಕ್ಕಾಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಹಾಗೂ ಒಂದು ದಿನದ ಭಜನಾ ಸೇವೆ ಯನ್ನು ಮಾಡುವುದಾಗಿ ಸಹಕರಿಸುವುದಾಗಿ ತಿಳಿಸುವುದರೊಂದಿಗೆ ಆಶಿರ್ವಾದಿಸಿದರು.ಈ ಸಂಧರ್ಭದಲ್ಲಿ ಕ್ಷೇತ್ರ ದ ಪದಾಧಿಕಾರಿಗಳಾದ ಕೆ ಗಂಗಾಧರ ಜೋಗಿ, ವಸಂತ ಪೂಜಾರಿ ಗೌತಮ್, ಶಿವ , ಹರಿಶ್ಚಂದ್ರ, ಅಶೋಕ, ಸಚಿನ್ ಸಾಲ್ಯಾನ್, ಕೃಷ್ಣ, ಹರೀಶ್ ಮಟ್ಟಿ ಮೊದಲಾದವರು ಉಪಸ್ಥಿತರಿದ್ದು ವಲಯ ಸಮಿತಿಯನ್ನು ರಚಿಸಲಾಯಿತು.
ಗುರುಪುರ ಮಳಳಿ ಮಟ್ಟಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠದ ವಲಯ ಸಮಿತಿಯ ವಿವರ
ಗೌರವ ಅಧ್ಯಕ್ಷರು: ಶ್ರೀ ಶ್ರೀ ಉಮೇಶ್ ನಾಥ ಕದ್ರಿ ಸ್ವಾಮೀಜಿ
ಅಧ್ಯಕ್ಷರು: ಕೆ ಗಂಗಾಧರ ಜೋಗಿ ಮಟ್ಟಿ
ಉಪಾಧ್ಯಕ್ಷರು : ಶಿವರಾಮ ಮಟ್ಟಿ
ಕಾರ್ಯದರ್ಶಿ: ಹರೀಶ್ ಮಟ್ಟಿ
ಜತೆ ಕಾರ್ಯದರ್ಶಿ: ಹರಿಶ್ಚಂದ್ರ, ವಿಶ್ವನಾಥ, ಅಶೋಕ್
ಕಾರ್ಯಕಾರಿ ಸದಸ್ಯರು: ವಸಂತ ಪೂಜಾರಿ, ಕೃಷ್ಣ ಪೂಜಾರಿ ಗೌತಮ್ ಪೂಜಾರಿ ಹಾಗೂ
ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಕುಕ್ಕಾಜೆ ಕ್ಷೇತ್ರದ ರವಿ ಎಸ್ಎಂ ,ಯೋಗಿಶ್ ಬೊಂಡಾಳ ,ಗಣೇಶ ಬೊಂಡಾಳ ಸತ್ಯ ಪ್ರಸಾದ್ ಕುಕ್ಕಾಜೆ ಉಪಸ್ಥಿತರಿದ್ದರು, ಹರೀಶ್ ಮಟ್ಟಿ ಸ್ವಾಗತಿಸಿ ಶ್ರೀಧರ್ ಪಿಕೆ ಕುಕ್ಕಾಜೆ ವಂದಿಸಿದರು.




0 Comments