ಕರ್ನಾಟಕ ಪ.ಪಂ.ಮರಾಟಿ ವಧುವಿಗೆ ಕೇರಳದಲ್ಲಿ ಜನನಿ ಜನ್ಮರಕ್ಷಾ ಯೋಜನೆ ವಿತರಣೆಗೆ ಶ್ರಮಿಸಿದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘಕ್ಕೆ ಅಭಿನಂದನೆ



ಪೆರ್ಲ: ಕೇರಳ ರಾಜ್ಯದ ಪರಿಶಿಷ್ಟ ಪಂಗಡದ ಮರಾಟಿ ಗರಲ್ಲಿ ಕರ್ನಾಟಕ ದಿಂದ ಕೇರಳದ ಹುಡುಗನನ್ನು ಮದುವೆಯಾದ  ಮರಾಟಿ ಹುಡುಗಿಗೂ ಜನನಿ ಜನ್ಮ ರಕ್ಷಾ ಸವಲತ್ತು ಗಳು ಲಭ್ಯವಾಗುವಂತೆ ಕೇರಳ ರಾಜ್ಯದ SC/ST ಕಮಿಷನ್ ನಿಂದ ಮಹತ್ವದ ತೀರ್ಪು ಕಲ್ಪಿಸಲು ಪ್ರಯತ್ನ ನಡೆಸಿದ ಪೆರ್ಲದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘಕ್ಕೆ ಸಮಾಜ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ. 

ಕೇರಳ ರಾಜ್ಯ ಸರಕಾರವು ಪರಿಶಿಷ್ಟ ಪಂಗಡದ ಗರ್ಭಿಣಿ  ಹೆಂಗಸು ಮತ್ತು ಹೊಟ್ಟೆಯಲ್ಲಿರುವ ಮಗುವಿನ ಆರೈಕೆಗಾಗಿ ಪೌಷ್ಟಿಕ ಆಹಾರ ವನ್ನು ಒದಗಿಸಿ ಅಮ್ಮ ಮತ್ತು ಮಗುವಿನ ಆರೋಗ್ಯ ಕಾಪಾಡಲು ಆರ್ಥಿಕ ಧನ ಸಹಾಯ. ಪೌಷ್ಟಿಕಾಂಶ ಹೊಂದಿದ ವಸ್ತುಗಳ ವಿತರಣೆ ಇತ್ಯಾದಿಗಳನ್ನು  'ಜನನಿ ಜನ್ಮ ರಕ್ಷಾ" ಕಾರ್ಯಕ್ರಮದಂತೆ ವಿತರಿಸುತ್ತಿದ್ದೂ ಇದಕ್ಕೆ ಕೇರಳಕ್ಕೆ ಮದುವೆಯಾಗಿ ಬರುವ ಕರ್ನಾಟಕ ಮರಾಟಿ ಹುಡುಗಿಯನ್ನು ಪರಿಗಣಿಸುತ್ತಿರಲಿಲ್ಲ  ಸಾಮಾಜಿಕ ಕಾರ್ಯಕರ್ತ ಪೆರ್ಲದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಣ ಪುಟ್ಟ ನಾಯ್ಕ್  ಪೆರಿಯಾಳ್ತಡ್ಕ ಅವರು ಕೇರಳದ ಎಸ್.ಸಿ.ಎಸ್.ಟಿ ಕಮಿಷನ್  ಗೆ 2017 ರಲ್ಲಿ ಮನವಿ ಸಲ್ಲಿಸಿದ್ದರು. ಆ ಮನವಿಗೆ  5 ವರ್ಷ ಗಳ ನಂತರ ಸ್ಪಂದಿಸಿದ ಕೇರಳದ SC/ST ಕಮಿಷನ್ 27.5.2022 ರಂದು ಕಾಸರಗೋಡಿನಲ್ಲಿ ಅದಾಲತ್ ನಡೆಸಿತ್ತು.ಈ ಸಂದರ್ಭದಲ್ಲಿ ಪುಟ್ಟ ನಾಯ್ಕ್ ರ ಅಸೌಖ್ಯ ದ ಕಾರಣ  ಪ್ರಸ್ತುತ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡ್ , ಡಾ. ಶಿವ ನಾಯ್ಕ್.ಪುಟ್ಟ ನಾಯ್ಕ್ ಪೆರಿಯಲ್ತಡ್ಕ  ಬಾಲಕೃಷ್ಣ ನಾಯ್ಕ್ ಏಳ್ಕಾನ ಮತ್ತು  ಪುಷ್ಪ ಅಮ್ಮೆಕ್ಕಳ ಅವರು ಅದಾಲತ್ ನಲ್ಲಿ ಭಾಗವಹಿಸಿ ಈ ಬಗ್ಗೆ ಸಮಗ್ರ ವಾದ ಮಂಡಿಸಿತ್ತು. ಇದರಂತೆ   ಕಮಿಷನ್ ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ 13.10.2022 ರಂದು ಕೇರಳ ಸರಕಾರದ ಪರಿಶಿಷ್ಟ ಪಂ.ಇಲಾಖೆಗೆ ಆರ್ಥಿಕ ವಾಗಿ ಹಿಂದುಳಿದ ಪರಿಶಿಷ್ಟ ಪಂಗಡದ ಕರ್ನಾಟಕ ದಿಂದ ಮದುವೆ ಯಾಗಿ ಬಂದ ಮರಾಟಿ ಹುಡುಗಿಯರಿಗೂ ಜನನಿ ಜನ್ಮ ರಕ್ಷಾ ಪದ್ದತಿಯ  ಸೌಲಭ್ಯ ಗಳನ್ನು ನೀಡುವಂತೆ  ಆದೇಶ ಹೊರಡಿಸಿದೆ.ಇದಕ್ಕಾಗಿ ಹೋರಾಟ ನಡೆಸಲು ಮೆಮೆರೊಂಡಮ್ ತಯಾರಿಸಿದ ಡಾ.ಬಿ.ಜಿ.ನಾಯ್ಕ್ ಅವರನ್ನು ಅಭಿನಂದಿಸಲಾಗಿದೆ.



ಜಾಹೀರಾತು


Post a Comment

0 Comments