ಕಾಂತರ...!! ಅಜ್ಜಿ ಹೇಳಿದ ಕಥೆಯೇ.....? ಶಾರ್ಜಾ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗಿಯಾದ ರಿಷಬ್ ಶೆಟ್ಟಿ


ದುಬೈ : "ಕಾಂತರ - ಒಂದು ದಂತ ಕಥೆ " ಹೀಗೆ ಟೈಟಲ್ ನಲ್ಲಿ ಅನಾವರಣಗೊಂಡು ದೇಶ ವಿದೇಶದಲ್ಲಿ ಜನಪ್ರೀತಿ ಗಳಿಸಿದ ಈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ  ಮರಳುಗಾಡಿನಲ್ಲಿ ನಡೆದ ಶಾರ್ಜಾ  ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಮೂಲಕ ಗಲ್ಫ್ ರಾಷ್ಟ್ರದಲ್ಲೂ ಹೊಸ ಸಂಚಲನ ಸೃಷ್ಠಿಸಿದರು. 


"ಸಿನಿಮಾ ಸುಪರ್ ಹಿಟ್ ಆದ ಮೇಲೆ ಯಾವ ಯಾವ ಸಿನಿಮಾ ಎಷ್ಟು ಕಲೆಕ್ಷನ್ ಆಯಿತು ಯಾವ ಯಾವ ಹಿರೋನ ರೆಕಾರ್ಡ್ ಮುರಿದಿದೆ ಅಂತ ಎಲ್ಲಾ ಸೋಷಿಯಲ್ ಮಾಧ್ಯಮ ಮತ್ತು ಮಾಧ್ಯಮದಲ್ಲಿ ಚರ್ಚೆಗಳು ಸುರುವಾದಗ ನನಗೆ ಅನಿಸಿದ್ದು ಹೀಗೆ ಯಾವತ್ತೂ ಯಾವ ಹೀರೊಗೂ ಯಾವ ರೆಕಾರ್ಡ್ ಅಂತ ಇಲ್ಲ ಯಾವ ಸಿನಿಮಾದ್ದೂ ಏನೂ ಯಾವ ಕಲೆಕ್ಷನ್ ಅನ್ನೋದು ಇಲ್ಲ ಯಾಕೆಂದರೆ ಆ ದಾಖಲೆಯನ್ನು ಮುರಿಯಲ್ಲಿಕ್ಕೆ ಜನರೇ ಕಾರಣ. ಹಾಗಾಗಿ ಆ ಎಲ್ಲಾ ದಾಖಲೆಯ ಕ್ರೆಡಿಟ್ ಪ್ರೆಕ್ಷಕರಿಗೆ.ಕಾಂತರವನ್ನು ಜನ ವಿಖ್ಯಾತ ಮಾಡಿದ್ದೆ ನೀವು. ನಾನು ಸಣ್ಣದಿರುವಾಗ ಅಜ್ಜಿ ಕಥೆಯನ್ನು ಕೇಳಿಕೊಂಡು ಬೆಳೆದವನು ಆ ಅಜ್ಜಿ ಕಥೆಯಲ್ಲಿ ಸಮಾಜಕ್ಕೆ ಹಾಗೂ ಜೀವನಕ್ಕೆ ಬೇಕಾದ ಎಲ್ಲಾ ವಿಚಾರಗಳು ಇತ್ತು. ಈಗಿನ ಕಾಲದ ಮೊಮ್ಮಕ್ಕಳಿಗೆ ಅಜ್ಜಿ ಕಥೆ ಕೇಳಿ ಗೊತ್ತಿಲ್ಲ ಯಾಕೆಂದರೆ ಅಜ್ಜಿ ಊರಲ್ಲಿ ಇದ್ದರೆ ಮೊಮ್ಮಕ್ಕಳು ಪರವೂರಲ್ಲಿ ಇದ್ದಾರೆ. ನಮ್ಮ ಊರು, ನಮ್ಮ ಸಂಸ್ಕೃತಿ,ನಮ್ಮ ನಂಬಿಕೆಯ ಆಚಾರ ವಿಚಾರಗಳನ್ನು ಸಿನಿಮಾದ ಮೂಲಕ ತರಬೇಕೆಂಬ ಉದ್ದೆಶ ಇತ್ತು.ಇಂತಹ ಕಥೆಯನ್ನು ಕಾಂತರದ ಮೂಲಕ ಜನರಿಗೆ ಕೊಟ್ಟಿದ್ದೇನೆ. 

ದೈವರಾಧನೆಯು ಮೂಡ ನಂಬಿಕೆ ದೈವರಾದನೆಯ ನರ್ತಕರಿಗೆ 2000 ಮಾಸಾಸನ ಕೊಟ್ಟಿದ್ದು ತಪ್ಪು ಅಂತ ಇತ್ತೀಚೆಗೆ ಒರ್ವ ಹಿರಿಯರು ಮಾತನಾಡಿದರು. ಅದನ್ನು ಕೇಳಿದಾಗ ನನಗೆ ತುಂಬಾ ಬೇಸರ ಆಯಿತು.ಎಷ್ಟೋ ತಲೆಮಾರುಗಳಿಂದ ಕರಾವಳಿ ಕರ್ನಾಟಕ ಅಥವಾ ಕರ್ನಾಟಕದ ಒಂದು ಬಾಗದ ಮೂಲೆಯಲ್ಲಿ ನಡೆಯುವ ಜಾತಿಯನ್ನು ಮೀರಿ ಧರ್ಮವನ್ನು ಮೀರಿ ನಾವು  ನಂಬಿಕೆಯಲ್ಲಿ ಬದುಕುವ ಜನರು ನಾವು ಇಂತಹ ನಂಬಿಕೆಯನ್ನು ಪ್ರಶ್ನೆ ಮಾಡುವುದು ಸರಿವೋ ತಪ್ಪೋ ಅಂತ ಗೊತ್ತಿಲ್ಲ ಆದರೆ ಬೇರೆಯವರ ಭಾವನೆಗೆ ದಕ್ಕೆ ತಂದು ಮಾತನಾಡುವುದು ತಪ್ಪು.ಶಾರ್ಜಾ ಕರ್ನಾಟಕ ಸಂಘ ಎರಡು ವರ್ಷ ಮಗುವಾಗಿದ್ದಾಗ ನಾನು ಸಿನಿಮಾ ರಂಗಕ್ಕೆ ಬಂದವನು ಈಗ ಶಾರ್ಜಾ ಕರ್ನಾಟಕ ಸಂಘಕ್ಕೆ 20 ವರ್ಷ.ಇಪ್ಪತ್ತು ವರ್ಷಗಳಿಂದ ಜಾತಿ ಬೇದ ಮರೆತು ಒಗ್ಗೂಡಿಸಿ ಇಪ್ಪತ್ತನೆಯ ಸಂಭ್ರಮವನ್ನು ಆಚರಿಸುತಿದ್ದೀರಿ ನೀವು ಈ ಜಾತಿ ಬೇದ ಧರ್ಮ ಮರೆತು ಕರ್ನಾಟಕ ರಾಜ್ಯೋತ್ಸವ  ಆಚರಿಸುವ ಹಾಗೆ ನಾನು ಚಿಕ್ಕ ವಿಷಯನಿಟ್ಟು ಕಾಂತರ ಸಿನಿಮಾವನ್ನು ‌ಮಾಡಿದ್ದೆನೆ ಅದನ್ನು ಗೆಲ್ಲಿಸಿದ್ದು ನೀವು ಎಂದು ರಿಷಬ್ ಶೆಟ್ಟಿಯವರು ಶಾರ್ಜಾ ಕರ್ನಾಟಕ ಸಂಘದ ಕನ್ನಡಿಗರ ಜನ ಜಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಅನಿವಾಸಿ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯವನ್ನು ತಿಳಿಸಿದರು.



ಅಜ್ಮಾನ್ ನ ವಿನ್ನಾರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರಗಿದ ಕರ್ನಾಟಕ ಸಂಘ ಶಾರ್ಜಾದ ವತಿಯಿಂದ 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ "ಅನಿವಾಸಿ ಕನ್ನಡಿಗರ ಜನ ಜಾತ್ರೆ" ಇತ್ತೀಚಿಗೆ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಎಂ.ಈ. ಮೂಳೂರು ದೀಪ ಬೆಳಗಿಸಿ ನೆರವೇರಿಸಿದರು.     

ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ರಿಗೆ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ


ವರ್ಷಂಪ್ರತಿ ನೀಡಲಾಗುವ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ರವರನ್ನು ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆಯ ಮೂಲಕ ಕರೆದು ತಂದು ಗೌರವಾದರಗಳೊಂದಿಗೆ ನೀಡಲಾಯಿತು. 

    ಯುಎಇಯಲ್ಲಿ ಕನ್ನಡ ಭಾಷೆ ನಾಡು ನುಡಿಗೆ ಕೆಲಸ ಮಾಡುವ ಸಾಧಕರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ನೋಯಲ್ ಡಿ. ಅಲ್ಮೆಡಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಿತ್ರಂಪಾಡಿ ಜಯರಾಮ್ ರೈ,ನವೀದ್ ಮಾಗುಂಡಿ, ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ. ಗಣೇಶ್ ರೈ. ಮಲ್ಲಿಕಾರ್ಜುನ ಗೌಡ ಸಾಹಿತಿ ಚಿತ್ರ ನಿರ್ಮಾಪಕರಾದ ಯಾಕುಬ್ ಖಾದರ್ ಗುಲ್ವಾಡಿ,ರಾಜೇಶ್ ಸಿಕ್ವೇರಾರವರನ್ನು  ಅಭಿನಂದಿಸಲಾಯಿತು. 










 ರಿಷಭ್ ಶೆಟ್ಟಿಗೆ "ಕರುನಾಡ ವಿಭೂಷಣ" ಪ್ರಶಸ್ತಿ


ಕಾಂತರ ಸಿನಿಮಾದ ರಿಷಭ್ ಶೆಟ್ಟಿಯವರನ್ನು  "ಕರುನಾಡ ವಿಭೂಷಣ" ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಥೆಯ ಮಹಾ ಪೋಷಕರಾದ ಮಾರ್ಕ್ ಡೆನ್ನಿಸ್ ಡಿ.ಸೋಜ, ಗೌರವ ಸಲಹೆಗಾರರಾದ ಹರೀಶ್ ಶೇರಿಗಾರ್,ಜೋಸೆಫ್ ಮಥಾಯಿಸ್,ಸತೀಶ್ ಪೂಜಾರಿ,ಶಾಂತಾರಾಮ ಆಚಾರಿ,ಸುಗಂದರಾಜ್ ಬೇಕಲ್,ಆನಂದ ಬೈಲೂರು,ಅಧ್ಯಕ್ಷರಾದ ಎಂ.ಈ.ಮೂಳೂರು,ಒಮಾನ್ ಕನ್ನಡ ಸಂಘದ ಪ್ರಸನ್ನ, ಬಹರೈನ್ ಬಂಟರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ದಂಪತಿಗಳು ಉಪಸ್ಥಿತರಿದ್ದರು.




        ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ "ಚಿಣ್ಣರ ಚಿಲಿಪಿಲಿ" ಕಾರ್ಯಕ್ರಮದಲ್ಲಿ ಜೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ಛದ್ಮವೇಷ ಸ್ಪರ್ದೆ ನಡೆಯಿತು. ಮಕ್ಕಳಿಂದ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಹಾಗೂ "ಗೆಜ್ಜೆ" ಕಿರು ನಾಟಕ,ಹರೀಶ್ ಶೇರಿಗಾರ್,ನವೀದ್ ಮಾಗುಂಡಿ,ಕು.ಅಕ್ಷತ,ಕು,ಸನ್ನಿಧಿ ಯವರಿಂದ ಸಂಗೀತ ರಸಮಂಜರಿ  ಪ್ರದರ್ಶನಗೊಂಡಿತು.ಸಮಿತಿಯ ಉಪಾಧ್ಯಕ್ಷರಾದ ನೊವೆಲ್ ಅಲ್ಮೆಡಾ,ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಅಮರ್ ಉಮೇಶ್,ಕೋಶಾಧಿಕಾರಿ ಮಹಮ್ಮದ್ ಅಬ್ರಾರ್,ಕ್ರೀಡಾ ಕಾರ್ಯದರ್ಶಿ ಜೀವನ್ ಕುಕ್ಯನ್,ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂದೀಪ್,ಅಬ್ದುಲ್ ರಝಕ್,ವಿಘ್ನೇಶ್ ಕುಂದಪುರ ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು. ಬಿ.ಕೆ.ಗಣೇಶ್ ರೈ,ವಿಘ್ನೇಶ್ ಕುಂದಾಪುರ, ಶ್ರೀಮತಿ ಆರತಿ‌ ಅಡಿಗ,ಶ್ರೀಮತಿ ರೋಹಿಣಿ ಅನಂತ್ ಕಾರ್ಯಕ್ರಮ ನಿರೂಪಿಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್(ದುಬೈ)

ಚಿತ್ರ : ವಿವೇಕ್ ಆನಂದ್ ದುಬೈ

Post a Comment

0 Comments