ದುಬೈಯಲ್ಲಿ ಕನ್ನಡ ಪಾಠ ಶಾಲೆಗಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ದ.ರಾ.ಬೇಂದ್ರೆ ಪ್ರಶಸ್ತಿ ಪುರಸ್ಕೃತರಾದ ಸಾಧಕ ಶಶಿಧರ್ ನಾಗರಾಜಪ್ಪ

 


ದುಬೈ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವದಂದು ಕನ್ನಡ ನಾಡು ನುಡಿಗೆ ಕೆಲಸ ಮಾಡುವ ಸಾಧಕರನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ಡಾ. ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಕನ್ನಡ ಪಾಠ ಶಾಲೆ ದುಬೈ ಇದರ ಸಂಚಾಲಕರಾದ ಶಶಿಧರ್ ನಾಗರಾಜಪ್ಪರವರಿಗೆ ನೀಡಿ ಗೌರವಿಸಲಾಯಿತು.

       


ನ.6 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಸಂಫದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮತ್ತು ಯು.ಎ.ಇ.ಯ ಭಾರತೀಯ ರಾಯಭಾರಿಗಳಾದ ಗೌರವಾನ್ವಿತ ಸಂಜಯ್ ಸುಧೀರ್ ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿನ ಅಧ್ಯಕ್ಷರಾದ ಡಾ.ನಟರಾಜನ್,ಇಂಡಿಯನ್ ಎಂಬೆಸಿ ಕಮ್ಯುನಿಟಿ ಅಫೈರ್ಸ್ ಮುಖ್ಯಸ್ಥೆ ರೀಶಾ ಒಬೆರಾಯ್, ಪದ್ಮನಾಭ ಆಚಾರ್ಯ, ಹಾಸ್ಯ ಕಲಾವಿದೆ ಶ್ರೀಮತಿ ಸುದ ಬರಗೂರು, ಉದ್ಯಮಿ ಸುಂದರ ಶೆಟ್ಟಿ ಮತ್ತು ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಯೋಗಿಶ್ ಪ್ರಭು ಕೆ.,ಲೊಯಲೋ ಪಿಂಟೊ, ಬೆನೆಟೆ ಡಿ. ಮೆಲ್ಲೊ,ಪ್ರದೀಪ್ ಕಿರೋಡಿಯನ್,ಸುದೀರ್ ಶೆಟ್ಟಿ, ಅಲ್ತಫ್ ಎಂ.ಎಸ್,ಅಬ್ದುಲ ಮದುಮೂಲೆ,ವಿಜಯ ರಾವ್,ಚೇತನ ಗೋಪಾಲ,ಕೃಷ್ಣ ರಾಜ ರಾವ್,ಸಂದೀಪ್ ರಾವ್,ಶ್ರೀನಿವಾಸ್,ಈಶ್ವರ್,ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು.ದ.ರಾ.ಬೇಂದ್ರೆಯವರ ಬಗ್ಗೆ ಸಂಘದ ಸದಸ್ಯರಾದ ಚೆನ್ನಕೇಶವರವರು  ಮಾತನಾಡಿದರು. ಸನ್ಮಾನ ಪತ್ರವನ್ನು ಶ್ರೀ ಕೃಷ್ಣ ಕುಳಾಯಿ ಮಂಡಿಸಿದರು. ಮನೋಹರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು
.

ಪುರಸ್ಕೃತರ ಪರಿಚಯ


ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜಪ್ಪ ಬಸ್ಸೆಟಪ್ಪ ಮತ್ತು ಶ್ರೀಮತಿ ಸುವರ್ಣ ಜ್ಯೋತಿ ದಂಪತಿಗಳ ಮಗನಾಗಿ 1977 ರಲ್ಲಿ ಜನಿಸಿದ ಇವರು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಸೆಂಟ್ರಲ್ ಕಾಲೇಜಿನಲ್ಲಿ ಎಂ.ಬಿ.ಎ ಪದವಿಯನ್ನು ಮತ್ತು ವಿಶ್ವೇಶ್ವರಯ್ಯ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿಯಾಗಿದ್ದು 2002 ರಲ್ಲಿ ಉದ್ಯೋಗ ನಿಮಿತ್ತ ದುಬೈಗೆ ಬಂದು ಪ್ರಸ್ತುತ ದೇವೊ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ.

       ಸಮಾಜ ಸೇವೆಯಲ್ಲಿ ಹೆಚ್ಚಿನ ಸಮಯವನ್ನು ವಿನಿಯೋಗಿಸಿ ಕೊಂಡಿರುವ ನಾಗರಾಜಪ್ಪರವರು ಕನ್ನಡ ಮಿತ್ರರು ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಸದಸ್ಯರ ತಂಡದೊಂದಿಗೆ ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಅಕ್ಷರಾಭ್ಯಾಸ ಮತ್ತು ಕನ್ನಡ ಕಲಿಯುವ ಮಕ್ಕಳಿಗೆ ಕನ್ನಡ ಪಾಠ ಶಾಲೆಯನ್ನು ಪ್ರಾರಂಭಿಸಿ  ಸಾವಿರಾರು ಮಕ್ಕಳಿಗೆ ಹಲವಾರು ವರ್ಷಗಳಿಂದ ಉಚಿತ ತರಗತಿ ನಡೆಸಿಕೊಂಡು ಬರುತ್ತಿದ್ದಾರೆ.

     ಇಂಡಿಯನ್ ಪೀಪಲ್ಸ್ ಫೋರಂ ಕರ್ನಾಟಕ ಘಟಕದ ಸಂಚಾಲಕರಾಗಿ,ಅಂತರಾಷ್ಟ್ರೀಯ ಕನ್ನಡಿಗರ ಒಕ್ಕೂಟದ ಕಾರ್ಯದರ್ಶಿಯಾಗಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ.ಯ ಜಂಟಿ ಕಾರ್ಯದರ್ಶಿ,ದುಬೈ ಕರ್ನಾಟಕ ಸಂಘದ ಕಾರ್ಯದರ್ಶಿಮತ್ತು ಓವರ್ ಸೀಸ್ ಮೂವೀಸ್ ಗಲ್ಫ್ ನ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಯಿ ನಾಡಿನ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಲ್ಯಾಪ್‌ಟಾಪ್, ಕಂಪ್ಯೂಟರ್,ಪ್ರಿಂಟರ್ ,ಪ್ರೊಜೆಕ್ಟರನ್ನು ಸ್ನೇಹಿತರ ಸಹಕಾರದೊಂದಿಗೆ ನೀಡಿದ್ದಾರೆ. ಹಲಾವರು ಸಂಘ ಸಂಸ್ಥೆಗಳು ಇವರು ಈ ಸಾಧನೆಯನ್ನು ಗುರುತಿಸಿ ಸನ್ಮಾನಗಳು ಲಭಿಸಿದೆ. ಪತ್ನಿ ಶ್ರೀಮತಿ ರೂಪ ಹೆಚ್.ಜಿ ಮತ್ತು ಮಕ್ಕಳಾದ ಚೇತನ್ ,ದಕ್ಷ ರೊಂದಿಗೆ ಸುಖಿ ಸಂಸಾರದಲ್ಲಿ ದುಬೈನಲ್ಲಿ ಜೀವನ ನಡೆಸುತ್ತಿದ್ದಾರೆ.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

ಚಿತ್ರ : ದೀಪಕ್ ರಾಜ್ ಉಪ್ಪಳ (ಅಬುಧಾಬಿ),ಶಿವ ಗೌಡ

Post a Comment

1 Comments

  1. Congratulations and well deserved. Thoughtful of Mr Shashidar Nagarajappa and Roopa Nagarajappa to take that plunge to guide ,support all families who were not well versed in Kannada Language to teach their kids and prepare them for the much needed 4th level Kannada language tesr conducted by State Govt as a requirement to study in the Beautiful home State .Though just 2 months in hand ,they showed confidence to bith parents and student that ,Yes its possible. Assigned a passionate kannada teacher exclusively and shared the contact .The teacher was indeed a blessing for my son .How selflessly and sheer dedication balanced with my sons grade12 extra ordinary hetic schedule and went out of the box to guide my son on days taking into the grade 12 exam dates and was extra caring not to add any type of pressure and taught him much beyond a student .Myself and my husband Mr Nandeeswar Seelavanth Math are ever grateful to all 3 of them specially to Mrs Divya Dubai Kannada patashale Kannada Trainer for their guidance, perseverance and timely help without a second thought. Thank you thank you thank you .Kind Regards Rajeswari Nandeeswar and Nidhish Seelavanth Math

    ReplyDelete