ದುಬೈ ಗಡಿನಾಡ ಉತ್ಸವದಲ್ಲಿ ನೆರೆದವರ ಮಂತ್ರ ಮುಗ್ಧಗೊಳಿಸಿದ ಗಡಿನಾಡ ಕನ್ನಡಿಗ ಶಾಸಕ ಎಕೆಎಂ ಆಶ್ರಫ್


ಯುಎಇ:  ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ)ಯು.ಎ.ಇ ಘಟಕ ದುಬೈ ಇದರ ವತಿಯಿಂದ ನಡೆದ ಗಡಿನಾಡ ಉತ್ಸವ ಮತ್ತು ಗಡಿನಾಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಂಜೇಶ್ವರದ ಜನಪ್ರಿಯ ಶಾಸಕ ಎಕೆಎಂ ಆಶ್ರಫ್ ಅವರು ಆಡಿದ ಅಚ್ಚಗನ್ನಡದ ಮಾತುಗಳು ಅರಬ್ ರಾಷ್ಟ್ರದ ಅನಿವಾಸಿ ಕನ್ನಡಿಗರನ್ನು ಮಂತ್ರಮುಗ್ದಗೊಳಿಸಿತು.  ನಗರದ ಬ್ಯುಸಿನೆಸ್‌ ಮೆಟ್ರೋ ಸ್ಟೇಷನ್ ಬಳಿ ಇರುವ ಜೆ.ಎಸ್.ಎಸ್‌. ಶಾಲೆಯ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಡುನಾಡ ಉತ್ಸವ ಯಶಸ್ವಿಯಾಗಿ ಜರಗಿತು.

ಕೇರಳ- ಕರ್ನಾಟಕ ಗಡಿಭಾಗವಾದ ಮಂಜೇಶ್ವರದಲ್ಲಿ ಧಾರ್ಮಿಕ,ಸಾಂಸ್ಕೃತಿಕ ಸಾಹಿತ್ಯ ಹಾಗೂ ಸಾಮಾಜಿಕದ ಮೂಲಕ ಮತೀಯ ಸೌಹರ್ದತೆ ಬೆಳೆಸಿಕೊಂಡು ಇಡೀ ದೇಶಕ್ಕೆ ಮಾದರಿಯಾದ ಗಡಿನಾಡ ಸಂಸ್ಕೃತಿಯನ್ನು  ಸಮಗ್ರವಾಗಿ ವಿಶ್ಲೇಷಿಸಿ ಮನದಟ್ಟಾಗುವ ರೀತಿಯಲ್ಲಿ ಅಚ್ಚಗನ್ನಡದಲ್ಲಿ ಮಂಡಿಸಿದ ವಿಚಾರಧಾರೆಗಳನ್ನು ನೆರೆದ ಸಹಸ್ರ ಶೋತೃಗಳು  ಸವಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು  ಗಡಿನಾಡ ಸಂಸ್ಕೃತಿಯಲ್ಲಿ ಒಂದಾದ ದಫ್ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಿನಾಡ ಉತ್ಸವದ ಯು.ಎ.ಇ.ಯ ಅಧ್ಯಕ್ಷರಾದ ಅಮರದೀಪ್ ಕಲ್ಲೂರಾಯ ವಹಿಸಿದರು.ಆಕ್ಮೇ ಸಂಸ್ಥೆ ದುಬೈಯ ಪ್ರಬಂಧಕಾರರಾದ ರಿತೇಶ್ ಕುಂಬಳೆ,ಗಾಯಕ ನವೀದ್ ಮಾಗುಂಡಿ,ರಾಜ್ ಕುಮಾರ್,ಗಡಿನಾಡ ಉತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಇಬ್ರಾಹಿಂ ಕಲೀಲ್ ಉಪಸ್ಥಿತರಿದ್ದರು. ಸಂಚಾಲಕರಾದ ಸಾದನ್ ದಾಸ್ ಸ್ವಾಗತಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕ್ಲಾಸಿಕಲ್ ರೀಥಮ್ ಡ್ಯಾನ್ಸ್ ತಂಡದವರಿಂದ ಸ್ವಾಗತ ನೃತ್ಯ, ರಮಣ ಲಾಸ್ಯ ತಂಡದವರಿಂದ,ಮೇಘನ ಬೆಂಗಳೂರು,ರೇಖ ಶಿವರಾಮ ತಂಡದವರಿಂದ ಹಾಗೂ ಸ್ಮೈಲ್ ಕ್ರಿಯೇಷನ್ ತಂಡದವರಿಂದ ನೃತ್ಯ, ಕೊಲ್ಕಲಿ, ಮಾಪಿಲಪ್ಪಾಟ್,ದಫ್, ಗಿರೀಶ್ ನಾರಾಯಣ ತಂಡದವರಿಂದ ಹುಲಿ ವೇಷ ಮತ್ತು ಹರೀಶ್ ಶೇರಿಗಾರ್, ನವೀದ್ ಮಾಗುಂಡಿ,ಭವ್ಯ ಕುಂಬಳೆ,ಡಾ.ಸಂತೋಷ್,ರಾಮಚಂದ್ರ ಬೆದ್ರಡ್ಕ ತಂಡದವರಿಂದ ಸಂಗೀತ ರಸಮಂಜರಿ ಜರಗಿತು.ಆರತಿ ಅಡಿಗ ಮತ್ತು ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.





      "ಗಡಿನಾಡ ರತ್ನ ಪ್ರಶಸ್ತಿ" ಪ್ರದಾನ :




ಸಮಾರೋಪ ಸಮಾರಂಭ ಮತ್ತು ಗಡಿನಾಡ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಗಡಿನಾಡ ಅಭಿವೃದ್ಧಿ ಅಥೋರಿಟಿಯ‌ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಐ.ಎ.ಎಸ್ ವಹಿಸಿ ಕಾರ್ಯಕ್ರಮದ ಬಗ್ಗೆ ಶ್ಲಾಘನೀಯ ಮಾತುಗಳನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾದ ಕರ್ನಾಟಕ ವಿಧಾನ ಪರಿಷತ್ ನ ಅಧ್ಯಕ್ಷರಾದ ರಘುನಾಥ ರಾವ್ ಮಲ್ಕಪುರೆ, ಕರ್ನಾಟಕ ವಿಧಾನ ಪರಿಷತ್ತ್ ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಪ್ರಕಾಶ್ ರಾಥೋಡ್,ಮಂಜೇಶ್ವರದ ಜನಪ್ರಿಯ ಶಾಸಕರಾದ ಎ.ಕೆ.ಎಂ.ಅಶ್ರಫ್,ಉದುಮ ಶಾಸಕ ಸಿ.ಎಚ್.ಕುಂಞಿಂಬು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಸುಗಂದರಾಜ್ ಬೇಕಲ್, ವೆಂಕಟೇಶ್ ತುಪ್ಪಿಲ್,ತೆಕ್ಕಾರ ಫರಾಝ್ ತಾಜ್ ದುಬೈ, ದುಬೈ ಫ್ರೈಮ್ ಆಸ್ಪತ್ರೆಯ ಡಾ.ಜಲೀಲ್ ಶುಭ ಹಾರೈಸಿದರು.





ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಜೆ.ಕೃಷ್ಣ ಪಾಲೆಮಾರ್,ಆಕ್ಮೇ ಗ್ರೂಪ್‌ನ ಸಂಸ್ಥೆಯ ಅಧ್ಯಕ್ಷರು ಸಮಾಜ ಸೇವಕರಾದ ಹರೀಶ್ ಶೇರಿಗಾರ್ ಮತ್ತು ಝಯೀದ್ ಫೌಂಡೇಶನ್ ನ ಫೈನಾನ್ಸ್ ಕಂಟ್ರೋಲರಾದ ಗಡಿನಾಡ ಸಮಾಜ ಸೇವಕರಾದ ಅಬ್ದುಲ್ಲಾ ಮದುಮೂಲೆರವರಿಗೆ ಗಡಿನಾಡ ರತ್ನ ಪ್ರಶಸ್ತಿ ನೀಡಿ  ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಅತಿಥಿಗಳಾಗಿ ಅಬ್ದುಲ್ ರಝಕ್, ಗಡಿನಾಡ ಅಭಿವೃದ್ಧಿ ಸಮಿತಿ ಕರ್ನಾಟಕ ಸರಕಾರದ ಪ್ರಕಾಶ್ ಮಾತಹಳ್ಳಿ,ಕೆ.ಎಮ್.ಸಿ.ಸಿ.ನ ಕಾರ್ಯದರ್ಶಿ ನಿಸಾರ್ ತಳಂಗರೆ,ಕರ್ನಾಟಕ ಇತಿಹಾಸ ಅಕಾಡೆಮಿ ಕೇರಳ ಅಧ್ಯಕ್ಷರಾದ ಪ್ರಭಾಕಾರ ಕಲ್ಲೂರಾಯ,ಕನ್ನಡ ಭವನ ಕಾಸರಗೋಡಿನ ಶ್ರೀಮತಿ ಸಂಧ್ಯಾ ರಾಣಿ ಟೀಚರ್,ಗಡಿನಾಡ ಕನ್ನಡ ಪರ ಹೋರಾಟಗಾರ ಎ.ಕೆ .ಸುಬ್ಬಯ್ಯಕಟ್ಟೆ,ಸಾಹಿತಿ ಥೋಮಸ್ ಡಿ.ಸೋಜಾ, ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್,ಉದ್ಯಮಿಗಳಾದ ಸಲಾಂ ಅಟ್ಟೆಗೋಳಿ,ಸಿದ್ದಿಕ್ ಅರೋಸ್ ಅಜ್ಮಾನ್,ಅಬ್ದುಲ್ ಸಲಾಂ ಚೇವರ್,ಅಬ್ದುಲ್ ರಸೀದ್,ಗಡಿನಾಡ ಸಾ.ಸ.ಅ.ಯ ಅಧ್ಯಕ್ಷರಾದ ಎನ್.ಚನಿಯಪ್ಪ ನಾಯ್ಕ,ಕಾರ್ಯದರ್ಶಿ ಅಖಿಲೇಶ್ ನಗುಮುಗಂ,ಕೋಶಾಧಿಕಾರಿ ಝಡ್ ಕಯ್ಯಾರ್ ಉಪಸ್ಥಿತರಿದ್ದರು. ಯು.ಎ.ಇ ಮತ್ತು ಭಾರತದ ರಾಷ್ಟ್ರಗೀತೆ ಹಾಡುವ ಮೂಲಕ ‌ಕಾರ್ಯಕ್ರಮ ಆರಂಭಗೊಂಡಿತು.ಸಾದನ್ ದಾಸ್ ಪ್ರಾಸ್ತಾವಿಕ ಮಾತುಗಳನ್ನು ಹಾಡಿ,ನ್ಯಾಯವಾದಿ ಇಬ್ರಾಹಿಂ ಕಲೀಲ್ ಸ್ವಾಗತಿಸಿ, ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಬಜೋರಿ ಧನ್ಯವಾದವಿತ್ತರು.



✒️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Post a Comment

0 Comments