ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷ ಬಾಲಕೃಷ್ಣರಿಗೆ ಜಿಲ್ಲಾ ಮಟ್ಟದ ಪುರಸ್ಕಾರ


ಪೆರ್ಲ: ಕಾಸರಗೋಡು ಜಿಲ್ಲೆಯ ಚಿಮೇನಿ ಸಮೀಪ ನಂದಾಡಿ ಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಹಾಲುತ್ಪಾದಕರ ಸಂಗಮ* ಸಮಾರಂಭದಲ್ಲಿ ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಎನ್ ಇವರಿಗೆ ಜಿಲ್ಲಾ ಮಟ್ಟದ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


2021-22 ನೇ ಸಾಲಿನ ಪರಿಶಿಷ್ಟ ವರ್ಗ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹಾಲು ಸಂಘಕ್ಕೆ ನೀಡಿದ ಇವರನ್ನು ಹಾಲುತ್ಪಾದಕರ ಸಂಗಮ ಸಮಾರಂಭದಲ್ಲಿ ರಾಜ್ಯ ಕ್ಷೀರ ಅಭಿವೃದ್ಧಿ ಮತ್ತು ಮೃಗ ಸಂರಕ್ಷಣಾ ಇಲಾಖೆ ಸಚಿವೆ  ಚಿಂಜು ರಾಣಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಶಾಸಕ ರಾಜ ಗೋಪಾಲ್ ಎಂ, ಡೈರಿ ಡೆಪ್ಯೂಟಿ ಡೈರೆಕ್ಟರ್ ಮಹೇಶ್ ನಾರಾಯಣನ್ ಮೊದಲಾದವರು ಉಪಸ್ಥಿತರಿದ್ದರು
.

ಜಾಹೀರಾತು


Post a Comment

0 Comments