ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಬಾಕಿಲಪದವಿನ ಸಾಮಾನ್ಯ ಜನರ ಹಲವು ವರ್ಷಗಳ ಬೇಡಿಕೆಯಾದ, ಸೇತುವೆ ನಿರ್ಮಾಣಕ್ಕೆ ದಿ / ಮದನ ಮೂಲ್ಯ ಇವರು ಸ್ಥಳವನ್ನು ನೀಡಿ ಕೇರಳ LDF ಸರಕಾರ 8.5 ಕೋಟಿ ರೂಪಾಯಿ ಮಂಜೂರು ಗೊಳಿಸಿ ಅದರ ನಿರ್ಮಾಣ ಕಾರ್ಯ ತೊಡಗುವ ಸಂದರ್ಭದಲ್ಲಿ, ಅಭಿವೃದ್ಧಿ ವಿರೋಧಿಗಳಾದ ಬಿಜೆಪಿ ನಾಯಕರು ತಡೆಒಡ್ದುವ ಮೂಲಕ ತನ್ನ ನೈಜ ಮುಖ ಬಯಲು ಗೊಳಿಸಿದೆ ಎಂದು ಸಿಪಿಐಎಂ ಸಾಯ ಬ್ರಾಂಚ್ ಸಮಿತಿ ಆರೋಪಿಸಿದೆ.
ಈ ಸೇತುವೆ ನಿರ್ಮಾಣದಿಂದ ಸಾಯ, ಚಾವರ್ಕಡ್ ವಾರ್ಡಿನ ಜನತೆಗೆ ಆಶಾಕಿರಣವಾಗಿತ್ತು,ಇದೀಗ ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುವ ಬಿಜೆಪಿ ಪಕ್ಷದ ನೇತಾರರೇ , ಈ ನಾಡಿನ ಅಭಿವೃದ್ಧಿ ಕಾರ್ಯಕ್ಕೆ ತಡೆಯೋಡ್ದಿದ್ದು ಅ ಪಕ್ಷದ ಅಭಿವೃದ್ಧಿ ವಿರೋಧಿ ಮುಖ ನಾಡಿನ ಜನರೆದುರು ಬೆತ್ತಲಾಗಿದೆ ಎಂದು ಸಿಪಿಐಎಂ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಜೆಪಿ ನಾಯಕರು ಸೃಷ್ಟಿಸಿರುವ ಕಪಟ ನಾಟಕದಿಂದ ಹಿಂದೆ ಸರಿಯದಿದ್ದರೆ ಅಥವ ಅಭಿವೃದ್ಧಿ ಕಾರ್ಯಕ್ಕೆ ಮುಂದೆಯೂ ತಡೆ ಒಡ್ದುವುದಾದರೆ, ಸಿಪಿಐಎಂ ಸಾಯ ಬ್ರಾಂಚ್ ನಾಗರೀಕನ್ನು ಒಟ್ಟುಗೋಡಿಸಿ ಹೋರಾಟಕ್ಕೆ ತಯಾರಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ..

.jpeg)
0 Comments