ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈಯಿಂದ ಡಿ ಕೆ ಶಿವಕುಮಾರ್ ಗೆ ಹೃದಯ ಸ್ಪರ್ಶಿ ಸನ್ಮಾನ


ಯುಎಇ : ಬ್ಯಾರೀಸ್ ಕಲ್ಚರಲ್ ಫೋರಮ್ ( BCF )ದುಬಾಯಿ ವತಿಯಿಂದ ಇತ್ತೀಚಿಗೆ,  ಕರ್ನಾಟಕದ ಜನಪ್ರಿಯ ರಾಜಕೀಯ ನೇತಾರ, ನಾಗರಾಭಿವೃದ್ಧಿ , ಇಂಧನ ಸಹಿತ ಹಲವಾರು ಮುಖ್ಯ ಇಲಾಖೆಗಳ ಮಂತ್ರಿ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ರಾಜಕೀಯ ಮುತ್ಸದ್ದಿ, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀ  ಡಿ ಕೆ ಶಿವಕುಮಾರ ಅವರನ್ನು ದುಬೈ ಯ ಎಮಿರೇಟ್ಸ್ ಪ್ಯಾಲೇಸ್ ಹೋಟೆಲಿನ ಸಭಾಂಗಣದಲ್ಲಿ ಪೂರ್ವಕವಾಗಿ ಸನ್ಮಾನಿಸಲಾಯಿತು. 


B C F ಸಂಸ್ಥೆಯ ಹಲವಾರು ನಾಯಕರು, ಪದಾಧಿಕಾರಿಗಳು ಮತ್ತು ಜನಾಬ್ U T ಇಫ್ತಿಕಾರ್ ಮೊದಲಾದ  ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಸನ್ಮಾನ ಸಮಾರಂಭಕ್ಕೆ ಪೂರ್ವಭಾವಿಯಾಗಿ ಮಾನ್ಯ ಡಿ ಕೆ ಶಿವಕುಮಾರ್ ರೊಂದಿಗೆ BCF ಅಧ್ಯಕ್ಷರಾದ Dr . ಬಿ ಕೆ ಯೂಸುಫ್ ರವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ Dr . ಕಾಪು ಮಹಮದ್ , ಉಪಾಧ್ಯಕ್ಷರಾದ ಶ್ರೀ ಎಂ ಈ ಮೂಳೂರು, ಶ್ರೀ ಅಬ್ದುಲ್ ಲತೀಫ್ ಮುಲ್ಕಿ , ಶ್ರೀ ಅಫೀಕ್ ಹುಸೈನ್, ಕೋಶಾಧಿಕಾರಿ ಶ್ರೀ ಅಸ್ಲಮ್ ಕಾರಾಜೆ, ಪದಾಧಿಕಾರಿಗಳಾದ,  ಶ್ರೀ ಯಾಕೂಬ್ ದೀವಾ, ಶ್ರೀ ಸಮದ್ ಬೀರಾಲಿ,  ಶ್ರೀ ರಫೀಕ್ ಸತ್ತಿಕಲ್, ಶ್ರೀ ಹುಸೈನ್ ಸತ್ತಿಕಲ್,  ಸಂಸ್ಥೆಯ ಹಿತೈಷಿಗಳಾದ ಶ್ರೀ ಶಾರ್ಫ್ರಾಜ್ ಜುಕಾಕೋ,  ಶ್ರೀ ಯೂಸುಫ್ HMC .,  ಶ್ರೀ ಅಜೀಮ್ ಉಚ್ಚಿಲ್, ಮೊದಲಾದವರು ಉಪಸ್ಥಿತರಿದ್ದರು.  


ಪ್ರಸಕ್ತ ಕರ್ನಾಟಕದ ಸಾಮಾಜಿಕ ಪರಿಸ್ಥಿತಿ, ಮುಖ್ಯವಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮೊದಲಾದ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳನ್ನು ನಡೆಸಲಾಯಿತು ಮತ್ತು ಜಿಜ್ಞಾಸೆಗಳನ್ನು – ಅಹವಾಲುಗಳನ್ನು ಈ ಸಂಧರ್ಭದಲ್ಲಿ    ವ್ಯಕ್ತಪಡಿಸಲಾಯಿತು. 


ಲಕ್ಷಾಂತರ ಸಂಖ್ಯೆಯಲ್ಲಿ ಪರದೇಶಗಳಲ್ಲಿ ವಿಶೇಷತಃ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಂದ ದೇಶಕ್ಕೆ- ರಾಜ್ಯಕ್ಕೆ ಗಣನೀಯವಾದ ವಿದೇಶಿ ವಿನಿಮಯ ಲಭವಾಗುತ್ತಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ರೀತಿಯಲ್ಲಿ ಅನಿವಾಸಿ ಕನ್ನಡಿಗರ ಕಡೆಯಿಂದ ಧನಾತ್ಮಕವಾದ ಉಪಲಬ್ಧಿಗಳು ಆಗುತ್ತಿದ್ದರೂ ಕರ್ನಾಟ್ಟಕದ ಸರಕಾರ ಅನಿವಾಸಿ ಕನ್ನಡಿಗರ ಬಗ್ಗೆ ಯಾವುದೇ ಕಾಳಜಿ ತೋರದೆ ಬರೇ ಮಾತುಗಳ ಭರವಸೆ ಮಾತ್ರ ಕೊಡುತ್ತಾ ಬರುತ್ತಿರುವ ಬಗ್ಗೆ ಶ್ರೀ  ಡಿ ಕೆ ಶಿವಕುಮಾರರ ಗಮನವನ್ನು ಸೆಳೆಯಲಾಯಿತು. ಅನಿವಾಸಿ ಕನ್ನಡಿಗರಿಗೆ ಮತದಾನದ ಹಕ್ಕು, ಅನಿವಾಸಿ ಕನ್ನಡಿಗ ನಿಗಮಕ್ಕೆ ಉಪಾಧ್ಯಕ್ಷರ ನೇಮಕ , ವಾರ್ಷಿಕ ಬಜೆಟ್ ನಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಸಾಕಷ್ಟು  ಮೀಸಲು ಮೊತ್ತ  ಮೊದಲಾದ ವಿಷಯಗಳ ಬಗ್ಗೆ ವಿಸ್ತಾರಿತವಾದ ಚರ್ಚೆ ನಡೆಸಲಾಯಿತು.


BCF ವತಿಯಿಂದ ಬಿಸಿಫ್ ವತಿಯಿಂದ Dr .  ಕಾಪು ಮಹಮದ್ , ಎಂ ಈ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೈನ್, ಯಾಕೂಬ್ ದೀವಾ ಮೊದಲಾದ ನಾಯಕರು ಶ್ರೀ ಡಿ ಕೆ ಶಿವಕುಮಾರ್ ರವರನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. 

ಸೇರಿದ ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿ ಸಂವಹನ ದೊಂದಿಗೆ ಬೆರೆತ ಶ್ರೀ ಡಿ ಕೆ ಶಿವಕುಮಾರ್ ರವರು ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.

Post a Comment

0 Comments