ಶೇಣಿ ಮಣಿಯಂಪಾರೆ ಶ್ರೀಅಯ್ಯಪ್ಪ ಭಜನಾ ಮಂದಿರ ಪುನಃ ಪ್ರತಿಷ್ಠೆ ಹಾಗೂ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


ಪೆರ್ಲ : ಶೇಣಿ ಮಣಿಯಂಪಾರೆಯ ಶ್ರೀಅಯ್ಯಪ್ಪ ಭಜನಾ ಮಂದಿರದ ಗರ್ಭಗುಡಿ ಪುನರ್ ನಿರ್ಮಾಣ ಕಾರ್ಯದಂಗವಾಗಿ ಪುನಃ ಪ್ರತಿಷ್ಠೆ ಹಾಗೂ ಮಂದಿರದ ವಾರ್ಷಿಕೋತ್ಸವ ಡಿ.25ರಂದು ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಂದಿರದ ಗುರುಸ್ವಾಮಿ ನಾರಾಯಣ ಮೂಲ್ಯ ಬಾರೆದಳ ಅವರ ವಿಶೇಷ ಪ್ರಾರ್ಥನೆಯ ಬಳಿಕ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಆಮಂತ್ರಣಾ ಪತ್ರಿಕೆ ಬಿಡುಗಡೆಗೊಳಿಸಿದರು.  ಮಂದಿರದ ಅಧ್ಯಕ್ಷ ರವೀಂದ್ರನಾಥ ನಾಯಕ್ ತೋಟದಮನೆ,ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ,ಸದಾಶಿವ ಆಚಾರ್ಯ ಶೇಣಿ, ರವೀಂದ್ರ ಪೂಜಾರಿ, ರಘರಾಮ ಬೋರ್ಕರ್,ಶಶಿರೇಖ ಟೀಚರ್, ಆಶಾಲತಾ,ಹೇಮಾವತಿ ಮಣಿಯಂಪಾರೆ,ಅರುಣಾಕ್ಷಿ ಶೇಣಿ,ಶ್ರೀಲೇಖಾ ಮಣಿಯಂಪಾರೆ ಮೊದಲಾದವರು ಭಾಗವಹಿಸಿದ್ದರು.

ಜಾಹೀರಾತು


Post a Comment

0 Comments