ಕುವೈಟ್ : ಬಂಟರ ಸಂಘ ಕುವೈಟ್ ನ 2023 ನೇ ಸಾಲಿನ ನೂತನ ಸಾರಥಿಗಳ ಆಯ್ಕೆ ಇತ್ತೀಚೆಗೆ ನಗರದ ಇಂಡಿಯನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಸಾಲ್ಮಿಯಾದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬಂಟರ ಸಂಘ ಕುವೈಟ್ ನ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ಚಂದ್ರ ಶೆಟ್ಟಿ ನಕ್ರೆ,ಉಪಾಧ್ಯಕ್ಷರಾಗಿ ಶೋಧನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿಯಾಗಿ ಸಂದೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಶೆಟ್ಟಿ ಕಿನ್ನಿಗೋಳಿ,ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಶ್ರೀಮತಿ ದೀಪ್ತಿ ಪ್ರಶಾಂತ್ ಶೆಟ್ಟಿ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ದುಷ್ಯಂತ್ ಶೆಟ್ಟಿ ಆಯ್ಕೆಯಾದರು.
ನಿರ್ಗಮಿತ ಅಧ್ಯಕ್ಷರಾದ ಗುರುಪ್ರಸಾದ್ ಹೆಗ್ಡೆಯವರು ಅರೋಗ್ಯ, ಶಿಕ್ಷಣ, ವಿವಾಹ ನೆರವು ಯೋಜನೆಯಡಿಯಲ್ಲಿ ನಿರ್ಗತಿಕರಿಗೆ ಸೇವೆ ಸಲ್ಲಿಸಿದ ತಂಡ ಮತ್ತು ತಂಡದ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಿಯೋಜಿತ ಚುನಾವಣಾ ಅಧಿಕಾರಿ ಸನತ್ ಕುಮಾರ್ ಶೆಟ್ಟಿಯವರು 2023ನೇ ಸಾಲಿನ ಸಂಘದ ಸಮಿತಿಯ ನಾಮನಿರ್ದೇಶನದ ಬಗ್ಗೆ ಮಾಹಿತಿ ನೀಡಿದರು.ಮಾಜಿ ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.ಮಾಜಿ ಕೋಶಾಧಿಕಾರಿ ರವಿರಾಜ್ ಶೆಟ್ಟಿ 2022 ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು.
ಶ್ರೀಮತಿ ಶೃತಿ ರೈ ಪಕ್ಕಳ ಬರೆದು ನಿರ್ದೇಶಿಸಿದ ಸಂಗೀತದ “ಬಂಟಾಟಿಕೆ” ಮತ್ತು ಮನೋಜ್ ಕುಮಾರ್ ಶೆಟ್ಟಿ ಬರೆದು ನಿರ್ದೇಶಿಸಿದ “ಕುಸಲ್ ದ ಎಸಲ್” ಹಾಸ್ಯ ನಾಟಕವು ಮನರಂಜಿಸಿತ್ತು. ಅಲ್ಲದೆ ಮೊಘಲ್ ತಂದೂರಿ ರೆಸ್ಟೋರೆಂಟ್‌ನಿಂದ ಸಾಂಪ್ರದಾಯಿಕ ಊಟವನ್ನು ಸವಿಯನ್ನು ಸವಿದು ರಾಫೆಲ್ ಡ್ರಾದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಜೇತರಿಗೆ ಅದ್ಭುತ ಬಹುಮಾನಗಳನ್ನು ನೀಡಲಾಯಿತು.
ಆಶೀತ್ ಎಚ್. ಶೆಟ್ಟಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.ಶ್ರೀಮತಿ ಪ್ರೇಮ ಶೆಟ್ಟಿಯವರು ಧನ್ಯವಾದವಿತ್ತರು.
✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)+971552032097




0 Comments