ಶೇಣಿ ಮಂಞಾರೆಯ ಮನೆಯೊಳಗೆ ಮಹಿಳೆಯ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆ- ಪತಿ ನಾಪತ್ತೆ



 ಪೆರ್ಲ: ಬಣ್ಪುತ್ತಡ್ಕ ಸಮೀಪದ ಏಳ್ಕಾನ ಶೇಣಿ ಮಂಞಾರೆಯ ರಬ್ಬರ್ ಎಸ್ಟೆಟ್ ನ ಮನೆಯೊಂದರೊಳಗೆ ಮಹಿಳೆಯೋರ್ವರ ಮೃತದೇಹ ನಿಗೂಢ ಸ್ಥಿತಿಯಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.ಇವರ ಜತೆಗೆ ವಾಸಿಸುತ್ತಿದ್ದ ಇವರ ಪತಿ ಎನ್ನಲಾಗುವ ವ್ಯಕ್ತಿ ಸ್ಥಳದಿಂದ ನಾಪತ್ತೆಯಾಗಿರುವುದು ನಿಗೂಢತೆ ಸೃಷ್ಠಿಸಿದೆ. 


ಘಟನೆಯ ವಿವರ:  ಕೊಲ್ಲಂ ನಿವಾಸಿ ನೀತು ಕೃಷ್ಣ (30) ಎಂಬವರ ಮೃತದೇಹ ಇದಾಗಿದೆ ಎಂದು ದೃಢೀಕರಿಸಲಾಗಿದೆ.   ಇವರ ಪತಿ  ವಯನಾಡ್ ನಿವಾಸಿ ಆಂಡೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ.


ಶೇಣಿ ಮಂಞಾರೆಯ ಸುಮಾರು ಮೂರು ಎಕ್ರೆ ಸ್ಥಳ ಕೊಟ್ಟಾಯಂ ನಿವಾಸಿ ರಿಜೋ ಜೋಸೆಫ್ ಎಂಬವರ ಮಾಲಕತ್ವದಲ್ಲಿದ್ದು ಇಲ್ಲಿಗೆ ಕಳೆದ 45 ದಿವಸಗಳ ಹಿಂದೆ ಈ ದಂಪತಿಗಳು ಇಲ್ಲಿಗೆ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಬಂಗಾಳಿ ಕಾರ್ಮಿಕರಿಬ್ಬರು ವಾಸಿಸುತ್ತಿದ್ದರು. ಇವರು ಕಳೆದ ನಾಲ್ಕು ದಿನಗಳಿಂದ ಮಹಿಳೆಯನ್ನು ಕಾಣದಿರುವಾಗ ಅವರ ಪತಿಯಲ್ಲಿ ಕೇಳಿದ್ದು ಆಕೆ ಊರಿಗೆ ತೆರಳಿರುವುದಾಗಿ ಹೇಳಿದ್ದರು. ಬಳಿಕ ಮೊನ್ನೆ ಆದಿತ್ಯವಾರದಿಂದ ಆಂಡೋ ಸೆಬಾಸ್ಟಿನ್  ನಾಪತ್ತೆಯಾಗಿದ್ದು ಮನೆ ಬೀಗ ಹಾಕಲಾಗಿತ್ತು. ಬುಧವಾರ ಮಧ್ಯಾಹ್ನ ಮನೆಯೊಳಗಿನಿಂದ ಕೊಳೆತ ವಾಸನೆ ಬರ ತೊಡಗಿದ್ದು  ಈ ಇಬ್ಬರು ಕಾರ್ಮಿಕರು ಎಸ್ಟೆಟ್ ಮೇನೆಜರ್ ಶಾಜಿ ಎಂಬವರಿಗೆ ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿ ಮನೆಯ ಹೆಂಚು ಸರಿಸಿ ನೋಡಿದಾಗ ಒಳಗೆ ಮೃತದೇಹ ಕಂಡು ಬಂದಿತ್ತು. ಈ ಬಗ್ಗೆ ಬದಿಯಡ್ಕ ಪೋಲಿಸರು ಕೇಸು ದಾಖಲಿಸಿದ್ದು ಫೋರೆನಿಕ್ಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಮೃತದೇಹದ ಪಂಚೆನಾಮೆ ನಡೆಸಿದೆ.

ಜಾಹೀರಾತು


Post a Comment

0 Comments