ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿಯಿಂದ ಕುಟುಂಬ ಸಮ್ಮಿಲನ ಮತ್ತು ವಿಹಾರ ಕೂಟ


 ದುಬೈ: ಬ್ಯಾರೀಸ್ ವೆಲ್ಫೇರ್ ಫೋರಮ್  ಅಬುಧಾಬಿ ವತಿಯಿಂದ ಇತ್ತೀಚೆಗೆ ದುಬೈ ಸಫಾ ಪಾರ್ಕ್ ನಲ್ಲಿ ಸಂಘಟಿಸಿದ ಕುಟಂಬ ಸಮ್ಮಿಲನ ಮತ್ತು ವಿಹಾರ ಕೂಟದಲ್ಲಿ ಇನ್ನೂರಕ್ಕೂ ಅಧಿಕ ಕುಟುಂಬಗಳು ಪಾಲ್ಗೊಂಡಿದ್ದರು. 


ನೂಹ್ ಅಬ್ದುಲ್ ರಶೀದ್ ರವರ  ಕಿರಾತ್ ಪಠಣದೊಂದಿಗೆ ಪ್ರಾಂಭವಾದ ಕೂಟವನ್ನು ಅಬ್ದುಲ್ಲಾ ಮದುಮೂಲೆ ನೇತೃತ್ವದ ಪಿಕ್ನಿಕ್   ಸಂಘಟನಾ ಸಮಿತಿಯ ಮೊಹಮ್ಮದ್ ಕಲ್ಲಾಪು, ಅಬ್ದುಲ್ ರವೂಫ್, ಇಮ್ರಾನ್ ಅಹ್ಮದ್, ನವಾಜ್ ಉಚ್ಚಿಲ್, ಅಬ್ದುಲ್ ಜಲೀಲ್ ಬಜ್ಪೆ ಮತ್ತು ಮುಜೀಬ್ ಉಚ್ಚಿಲ್ ಅತ್ಯಂತ ಯಶಸ್ವಿಯಾಗಿ ನಡೆಸಿ ಕೊಟ್ಟರು. ಮೊಹಮ್ಮದ್ ಅಲಿ ಉಚ್ಚಿಲ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.



ವಿವಿಧ ಮನೋರಂಜನಾ ಕಾರ್ಯಕ್ರಮಗಳು ಪುರುಷರ,ಮಹಿಳೆಯರ ಮತ್ತು ಮಕ್ಕಳ ವಿವಿಧ ಸ್ಪರ್ಧೆಗಳು ದಿನವಿಡೀ ನಡೆದು ಎಲ್ಲರೂ ಆಸ್ಪಾದಿಸಿದರು.ಸ್ವಾದಿಷ್ಟ ಊಟೋಪಚಾರ ಮತ್ತು ರಾಫಲ್ ಡ್ರಾದ ಪ್ರೈಜ್ ಗಳು ಕೂಟದ ಇನ್ನೊಂದು ಆಕರ್ಷಣೆಯಾಗಿತ್ತು.


ಕೊನೆಯಲ್ಲಿ ಅಬ್ದುಲ್ ಜಲೀಲ್ ಬಜ್ಪೆ ವಂದನಾರ್ಪಣೆಗೈದರು     

ಬಿ ಡಬ್ಲ್ಯೂ ಫ್ ನ ಪದಾಧಿಕಾರಿಗಳಾದ ಹಂಝ ಕಣ್ಣಗಾರ್, ಹಮೀದ್ ಗುರುಪುರ್,ಹನೀಫ್ ಉಳ್ಳಾಲ್, ರಶೀದ್ ವಿಟ್ಲ, ಅಬ್ದುಲ್ ಮಜೀದ್ ಕುತ್ತಾರ್,ಮಜೀದ್ ಆತೂರ್,ಇರ್ಫಾನ್ ಕುದ್ರೋಳಿ, ಮೊಯಿನುದ್ದೀನ್ ಹಂಡೇಲ್, ರಶೀದ್ ಬಿಜೈ  ,  ಬಷೀರ್ ಬಜ್ಪೆ ,ಬಷೀರ್ ಉಚ್ಚಿಲ್ ,ಯಾಹ್ಯಾ ಕೊಡ್ಲಿಪೇಟೆ ,ನಿಜಾಮ್ ವಿಟ್ಲಾ ,ಇಮ್ರಾನ್ ಕೃಷ್ಣಾಪುರ ,ಸಿರಾಜ್ ಪಾರಳಾಡಕ್ಕ , ಮತ್ತು ನಜಿರ್ ಉಬರ್    ಕಾರ್ಯಕ್ರಮ  ಯಶಸ್ವಿಯಾಗಿ ನಡೆಸಿ ಕೊಟ್ಟರು.


ನ್ಯೂಸ್ ಹಾಗೂ ಜಾಹಿರಾತಿಗೆ ಸಂಪರ್ಕಿಸಿ : 0552032097

Post a Comment

0 Comments