ದುಬೈ : ಯು.ಎ.ಇ.ಥ್ರೋಬಾಲ್ ಗ್ರೂಪ್ ಆಯೋಜಿಸಿದ "ಥ್ರೋಬಾಲ್ ಪ್ರೀಮಿಯರ್ ಲೀಗ್ -2023" (TPL-2023) ನ ಪಂದ್ಯಾಟವು ಫೆಬ್ರವರಿ 5 ರಂದು ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಜರಗಿತು.
ನಗರದ ಮಮ್ಜಾರ್ ಅಲ್ ಇತಿಹಾದ್ ಸ್ಕೂಲ್ ಸ್ಟೇಡಿಯಂನಲ್ಲಿ ಏರ್ಪಡಿಸಿದ್ದ ಪಂದ್ಯಾಟದ ಉದ್ಘಾಟನೆಯನ್ನು ಭಾರತ ಕಬಡ್ಡಿ ತಂಡದ ಆಟಗಾರ ಪ್ರಶಾಂತ್ ರೈ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಬಾಗವಹಿಸಿದ ತಂಡಗಳ ಮಾಲಕರು,ಸಂಘಟನೆಯ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಸರ್ವೋತ್ತಮ ಶೆಟ್ಟಿಯವರು ಥ್ರೋಬಾಲ್ ಎಸೆಯುವುದರ ಮೂಲಕ ಥ್ರೋಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಪ್ರದೀಪ್ ಶೆಟ್ಟಿಯವರ ಕಾನ್ಸೆಪ್ಟ್ ವಾರಿಯರ್ಸ್, ಸಂದೀಪ್ ರೈಯವರ ನಂಜೆ ಯಾಚ್ಟ್ಸ್ ಆಲ್ ಸ್ಟಾರ್ಸ್ಜ್,ಮೈಕಲ್ ಡಿ.ಸೋಜಾರವರ ಐವೋರಿ ಟಸ್ಕರ್ಸ್, ಸೆಬಾಸ್ಟಿಯನ್ ಪಾಯಿಸ್ ರವರ ಬ್ರೈಟ್ ವೈಂಡರ್ಸ್,ಹರೀಶ್ ಶೇರಿಗಾರ್ ರವರ ಆಕ್ಮೆ ಫವರ್ ಹೌಸ್, ಲ್ಯಾನ್ಸಿ ಡಿ.ಸೋಜಾರವರ ಲೈಟಾನ್ ಟೈಗರ್ಸ್ ಮಹಿಳೆಯರ ಮತ್ತು ಪುರುಷರ ಒಟ್ಟು ಹನ್ನೆರಡು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದರು.
ವಿಜೇತ ತಂಡಗಳು :
ಮಹಿಳೆಯರ ಎರಡನೇ ರನ್ನರ್ ಅಫ್ ಆಗಿ ನಂಜೆ ಯಾಚ್ಟ್ಸ್ ಆಲ್ ಸ್ಟಾರ್ಸ್ಜ್,ಒಂದನೇ ರನ್ನರ್ ಅಪ್ ಆಗಿ ಐವೋರಿ ಟಸ್ಕರ್ಸ್, ವಿನರ್ಸ್ ಆಗಿ ಬ್ರೈಟ್ ವೈಂಡರ್ಸ್.ಪುರುಷರ ಎರಡನೇ ರನ್ನರ್ಸ್ ಅಪ್ ಆಗಿ ಆಕ್ಮೆ ಫವರ್ ಹೌಸ್, ಒಂದನೇ ರನ್ನರ್ಸ್ ಅಪ್ ಆಗಿ ನಂಜೆ ಯಾಚ್ಟ್ಸ್ ಆಲ್ ಸ್ಟಾರ್ಸ್ಜ್, ವಿನ್ನರ್ಸ್ ಆಗಿ ಐವೋರಿ ಟಸ್ಕರ್ಸ್. ಮಹಿಳೆಯರ ಅತ್ಯುತ್ತಮ ಸ್ಟೈಕರಾಗಿ ಶ್ರೀಮತಿ ಸಲೀಕಾ ಶಾಮ (ಬ್ರೈಟ್ ವೈಂಡರ್ಸ್) ,ಅತ್ಯುತ್ತಮ ರಕ್ಷಕರಾಗಿ ಶ್ರೀಮತಿ ಇಷ್ಟ ಶೆಟ್ಟಿ (ಐವೋರಿ ಟಸ್ಕರ್ಸ್) , ಅಲ್ ರೌಂಡರಾಗಿ ಶ್ರೀಮತಿ ಶುಭ ಕಲ್ಕುರ (ಬ್ರೈಟ್ ವೈಂಡರ್ಸ್).ಪುರುಷರ ಅತ್ಯುತ್ತಮ ಸ್ಟ್ರೈಕರಾಗಿ ಜೈಸನ್ ಲೈವನ್ ಡಿ.ಸೋಜಾ (ಐವೋರಿ ಟಸ್ಕರ್ಸ್), ಅತ್ಯುತ್ತಮ ರಕ್ಷಕರಾಗಿ ಇಷಾನ್ ಮಂತೋರೊ (ಐವೋರಿ ಟಸ್ಕರ್ಸ್), ಅಲ್ ರೌಂಡರಾಗಿ ಅಲನ್ ಮೆಂಡೊನ್ಸ (ನಂಜೆ ಯಾಚ್ಟ್ಸ್ ಆಲ್ ಸ್ಟಾರ್ಸ್ಜ್).
ಗಿರೀಶ್ ನಾರಯಣ್ ನೇತೃತ್ವದ ಹುಲಿ ವೇಷ ತಂಡದ ಹುಲಿ ಕುಣಿತದೊಂದಿಗೆ ರೂಪೇಶ್ ಶೆಟ್ಟಿಯವರನ್ನು ವೇದಿಕೆ ಬರಮಾಡಿಕೊಳ್ಳಲಾಯಿತು.ನಂತರ ವೇದಿಕೆಯಲ್ಲಿ ಹುಲಿ ವೇಷಧಾರಿಗಳೊಂದಿಗೆ ತಾನು ಹೆಜ್ಜೆ ಹಾಕಿ ಕುಣಿದು ಸಭಿಕರನ್ನು ಮನರಂಜಿಸಿದ್ದರು.
ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಟ,ನಿರ್ದೇಶಕ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟ,ಬಾರತ ತಂಡದ ಕಬಡ್ಡಿ ಆಟಗಾರ ಪ್ರಶಾಂತ್ ರೈ,ಪಂದ್ಯಾಟದ ಮಾಹ ಪೋಷಕರಾದ ಪ್ರೆಮ್ ನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಸುಂದರ ಶೆಟ್ಟಿ ಅಬುಧಾಬಿ, ಜಯರಾಮ ರೈ ಅಬುಧಾಬಿ, ತಾರನಾಥ ರೈ,ವಾಸು ಶೆಟ್ಟಿ,ರಮಾನಂದ ಶೆಟ್ಟಿ, ಹರ್ಷ ರೈ,ಶ್ರೀಮತಿ ಜಯಶ್ರೀ ಸಂತೋಷ್ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತು ತಂಡಗಳ ಮಾಲೀಕರು ಉಪಸ್ಥಿತರಿದ್ದರು.ರೂಪೇಶ್ ಶೆಟ್ಟಿ ಮತ್ತು ಪ್ರಶಾಂತ್ ರೈ ರವರನ್ನು ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸರ್ವೋತ್ತಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದ್ದರು.ಪಂದ್ಯಾಟದ ಮಾಹ ಪೋಷಕರನ್ನು,ಮಾದ್ಯಮ ಮಿತ್ರರನ್ನು ಮತ್ತು ತಿರ್ಪುಗಾರರಾಗಿ ಸಹಕರಿಸಿದ ಶ್ರೀಮತಿ ದೀಪ್ತಿ ದಿನ್ ರಾಜ್,ಶಿವ ಶೆಟ್ಟಿ,ಕಿಶೋರ್ ರವರನ್ನು ಗೌರವಿಸಲಾಯಿತು.
ಪಂದ್ಯಾಟದ ಆಯೋಜಕರಾದ ಸಂತೋಷ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ,ಶ್ರೀಮತಿ ಜಯಶ್ರೀ ಸಂತೋಷ್ ಶೆಟ್ಟಿಯವರ ಈ ತಂಡದಲ್ಲಿ ಡೊರೆನ ಆಳ್ವರೀಸ್,ವಿನೋದ್ ಶೆಟ್ಟಿ,ಲೈನೆಲೊ ಮಂತೊರೋ,ರಂಜಿತ್ ಶೆಟ್ಟಿ,ಅಲೆನ್ ಮಂಡೆನ್ಸೊ,ಜೈಸನ್ ಡಿ.,ಕಿಶೋರ್ ಶೆಟ್ಟಿ,ಶಿವಪ್ರಸಾದ್ ಶೆಟ್ಟಿ, ಅನ್ವಿ ಶೆಟ್ಟಿಯವರು ಈ ಪಂದ್ಯಾಟದ ಯಶಸ್ವಿಗೆ ಸಾಥ್ ನೀಡಿದ್ದರೆ.
ಹೆಚ್ಚಿನ ಪೋಟೋಸ್ ಗೆ ಈ ಕೆಳಗಿನ ಲಿಂಕ್ ಒಪನ್ ಮಾಡಿ
https://drive.google.com/drive/folders/1m7FX0qAyaN_Wq1Bd86Ru22NknictBH4L?usp=share_link
ವರದಿ ✒️ ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ ಮಜಿಬೈಲ್ (ದುಬೈ)
ವರದಿ ✒️ ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ ಮಜಿಬೈಲ್ (ದುಬೈ)












0 Comments