ಅಬುಧಾಬಿ : ಕಳೆದ ನಾಲ್ಕು ದಶಕಗಳಿಂದ ಯುಎಇಯ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿದ್ದ ಶ್ರೀ ಯೋಗಿಶ್ ಪ್ರಭು ಮತ್ತು ಶ್ರೀಮತಿ ಚೇತನಾ ಯೋಗೀಶ್ ಪ್ರಭುರವರು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹೊಂದಿ ತಾಯಿ ನಾಡಿಗೆ ಹೊರಡಲು ಸಿದ್ದರಾದ ದಂಪತಿಗಳಿಗೆ ಅಬುಧಾಬಿಯ ತುಳು-ಕನ್ನಡಿಗರ ಪರವಾಗಿ ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತ್ತು.
ಸನ್ಮಾನ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಉದ್ಯಮಿ ಸುಂದರ ಶೆಟ್ಟಿ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮನೋಹರ ತೊನ್ಸೆ,ಸುಧೀರ್ ಶೆಟ್ಟಿ, Benet Dmello,ಅಲ್ತಾಫ್ M.S,ವಿಜಯ ರಾವ್,ಈಶ್ವರ್ ಉಣಕಲ್ಲ್,ಯತಿರಾಜ್ ಶೆಟ್ಟಿ, ಕೃಷ್ಣರಾಜ್ ರಾವ್ ಚೇತನ್,ಅಬುಧಾಬಿ ಕರ್ನಾಟಕ ಸಂಘದ ಥ್ರೋಬಾಲ್ ಆಟಗಾರರಾದ ಶ್ರೀಮತಿ ಸಂಗೀತ ಶೆಟ್ಟಿ, ಶ್ರೀಮತಿ ಸ್ಮಿತ ಚೌಟ,ಶ್ರೀಮತಿ ಸುಪ್ರೀಯ ರೈ,ಶ್ರೀಮತಿ ವಿಜಯ ತಂತ್ರಿ,ಶ್ರೀಮತಿ ಅನುಶ್ರೀ,ಶ್ರೀಮತಿ ಕೃಪರವರು ಶಾಲು ಹೊದಿಸಿ ಸನ್ಮಾನ ಪತ್ರ,ಸ್ಮರಣಿಕೆ ನೀಡಿ ಸನ್ಮಾನಿಸಿದರು.ಶ್ರೀಮತಿ ಸೌಮೀಣಿ ಸುಂದರ ಶೆಟ್ಟಿ,ಶ್ರೀಮತಿ ಉಷ ಸರ್ವೋತ್ತಮ ಶೆಟ್ಟಿ, ಶ್ರೀಮತಿ ಪೂರ್ಣಿಮ ಮನೋಹರ ತೋನ್ಸೆ ಉಪಸ್ಥಿತರಿದ್ದರು.ಯೋಗಿಶ್ ಪ್ರಭುವರ ಬಗ್ಗೆ ಸರ್ವೋತ್ತಮ ಶೆಟ್ಟಿ, ಮನೋಹರ ತೋನ್ಸೆ,ಕೃಷ್ಣರಾಜ್ ರವರು ಮತ್ತು ಶ್ರೀಮತಿ ಚೇತನ ಯೋಗಿಶ್ ರವರ ಬಗ್ಗೆ ಶ್ರೀಮತಿ ಸ್ಮಿತ,ಶ್ರೀಮತಿ ಸುಪ್ರೀಯರವರು ಮಾತನಾಡಿದ್ದರು. ಮನೋಹರ ತೋನ್ಸೆ ಸನ್ಮಾನಿತರ ಪರಿಚಯಿಸಿದರು, ಸರ್ವೋತ್ತಮ ಶೆಟ್ಟಿ ಸ್ವಾಗತಿಸಿ ಧನ್ಯವಾದವಿತ್ತರು.
ಸಂತೃಪ್ತ ಸಂಸಾರದ ಸಣ್ಣ ಪರಿಚಯ:
ಉಡುಪಿ ಜಿಲ್ಲೆಯ ಕಾರ್ಕಳದ ಶ್ರೀ ಕೃಷ್ಣ ಪ್ರಭು ಮತ್ತು ಭಾರತಿ ಪ್ರಭುಗಳ ಪುತ್ರರಾದ ಯೋಗಿಶ್ ರವರು ವಿದ್ಯಾಭ್ಯಾಸವನ್ನು ಉಡುಪಿಯ ಭುವನೆಂದ್ರ ಕಾಲೇಜಿನಲ್ಲಿ ಮುಗಿಸಿದರು.ವೃತ್ತಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಫಸ್ಟ್ ಅಬುಧಾಬಿ ಬ್ಯಾಂಕ್(NBAD) ವೈಸ್ ಪ್ರೆಸಿಡೆಂಟ್ (ಗ್ರೂಪ್ ಫೈನಾನ್ಸ್ ಟ್ರಸರಿ) ಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರವೃತ್ತಿಯಲ್ಲಿ ವಿವಿಧ ಸಂಘ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅಬುಧಾಬಿ ಕರ್ನಾಟಕ ಸಂಘ,ಅಮ್ಚಿಗಲೆ ಸಮಾಜ ಯುಎಇ,ವಿಶ್ವ ತುಳು ಸಮ್ಮೇಳ ದುಬೈ, ವಾಕಿಂಗ್ ಕ್ಲಬ್ ಅಬುಧಾಬಿ, ಭಜನಾ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಇವರು ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವದಿಯಲ್ಲಿ ವಿವಿಧ ಸೇವಾ ಕಾರ್ಯದೊಂದಿಗೆ ಕೋವಿಡ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2021ರಲ್ಲಿ ಸಂಸ್ಥೆಗೆ "ಮಹಾತ್ಮ" ಪ್ರಶಸ್ತಿ ದೊರಕಿದೆ.
ಯೋಗಿಶ್ ರವರ ಶ್ರೀಮತಿಯಾದ ಚೇತನ ಯೋಗಿಶ್ ಪ್ರಭುರವರು ಅಬುಧಾಬಿ ಮಹಿಳಾ ಥ್ರೋಬಾಲ್ ತಂಡದ ಪ್ರಮುಖ ಆಟಗಾರರಾಗಿದ್ದರು. ISC ಅಬುಧಾಬಿ ಮಹಿಳಾ ವಿಭಾಗದಲ್ಲಿ ಮಹಿಳಾ ಘಟಕದ ಕನ್ವಿನರ್ ಆಗಿ ಸೇವೆ ಸಲ್ಲಿಸಿದರು.
ಪುತ್ರಿ ಆರತಿ ಪ್ರಭು ಅಳಿಯ ದರ್ಶನ್ ರೆಡ್ಡಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಪುತ್ರ ಅಜಿತ್ ಪ್ರಭು ಮೆಕಾನಿಕಲ್ ಇಂಜಿನಿಯರಾಗಿ ಯುಕೆಯಲ್ಲಿ ವೃತ್ತಿಯಲ್ಲಿದ್ದಾರೆ.
✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ: ಶಿವು ಗೌಡ







0 Comments