ದುಬೈ : ಕಲಾ ಸಂಗಮ ಮಂಗಳೂರು ಇದರ ಕಲಾವಿದರಿಂದ ವಿಜಯಕುಮಾರ್ ಕೊಡಿಯಲ್ ಬೈಲ್ ರಚನೆ ನಿರ್ದೇಶನದ "ಶಿವದೂತೆ ಗುಳಿಗೆ" ನಾಟಕವು ಮಾರ್ಚ್ 19 ರಂದು ದುಬೈನಲ್ಲಿ ಪ್ರದರ್ಶನವಾಗಲಿದ್ದು ಈ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಪೆಬ್ರವರಿ 19 ರಂದು ನಗರದ ಗಿಸೇಸ್ ನ ಫಾರ್ಚೂನ್ ಪ್ಲಾಝದ ಬಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.
ಬಿಡುಗಡೆ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನ ಮಾಲಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ಪ್ರಭಾಕರ ಸುವರ್ಣ,ಬಿಲ್ಲವಾಸ್ ನ ಸತೀಶ್ ಪೂಜಾರಿ,ಕನ್ನಡ ಪಾಠ ಶಾಲೆ ದುಬೈಯ ಶಶಿಧರ್ ನಾಗರಂಜಪ್ಪ,ಮೊಗವೀರ್ಸ್ ಸಮಾಜದ ಬಾಲಕೃಷ್ಣ ಸಾಲಿಯಾನ್,ಉದ್ಯಮಿಗಳಾದ ಗುಣಶೀಲ್ ಶೆಟ್ಟಿ, ಪ್ರೇಮನಾಥ ಶೆಟ್ಟಿ,ಹರೀಶ್ ಬಂಗೆರ, ಪದ್ಮಶಾಲಿ ಸಮಾಜದ ಧನಂಜಯ ಶೆಟ್ಟಿಗಾರ್,ಅಲ್ ಫರ್ದಾನ್ ಎಕ್ಸೆಂಜ್ ನ ಸಿಈಓ ತಾರನಾಥ ರೈ,ಚಿತ್ರ ನಿರ್ಮಾಪಕ ಆತ್ಮನಂದ ರೈ,ಸಂಘಟಕರಾದ ನೊವೆಲ್ ಅಲ್ಮೇಡಾ,ದಯಾ ಕಿರೋಡಿಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾರ್ಚ್ 19 ರಂದು ನಗರದ ಉದುಮೇತದ ಅಲ್ ನಸರ್ ಲ್ಯಾಂಡ್ ನ ಐಸ್ ಲಿಂಕ್ ನಲ್ಲಿ ಮಧ್ಯಾಹ್ನ 2.30 ಕ್ಕೆ ಮತ್ತು ಸಂಜೆ 6 ಗಂಟೆಗೆ ಪ್ರದರ್ಶವಾಗುವ "ಶಿವದೂತೆ ಗುಳಿಗೆ" ನಾಟಕದ ಟಿಕೆಟ್ ಗಳನ್ನು ಗಣ್ಯತಿ ಗಣ್ಯರು ಬಿಡುಗಡೆ ಗೊಳಿಸಿ ತುಳುನಾಡಿನ ದೈವ ದೇವರುಗಳ ಕಥೆಯನ್ನು ಒಳಗೊಂಡ ಈ ನಾಟಕವನ್ನು ಯುಎಇಯಲ್ಲಿ ಇರುವ ಎಲ್ಲಾ ತುಳು ಕನ್ನಡಿಗರು ನೋಡಲೇಬೇಕು. ವಿಶೇಷವಾಗಿ ಈ ನಾಟಕವನ್ನು ನಮ್ಮ ಮಕ್ಕಳಿಗೆ ತೋರಿಸಿ ನಮ್ಮ ಸಂಸ್ಕೃತಿಯನ್ನು ಉಳಿಸುವಂತಹ ಪ್ರಯತ್ನ ಈ ನಾಟಕದ ಮೂಲಕ ಆಗಬಹುದು. ಈಗಾಗಲೇ ಕರ್ನಾಟಕ ಮತ್ತು ಕೇರಳದ ಗಡಿನಾಡಿನಲ್ಲಿ 400 ಕ್ಕೂ ಅಧಿಕ ಪ್ರದರ್ಶನಗೊಂಡ ಈ ನಾಟಕವನ್ನು ದುಬೈನಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಾತನಾಡಿ ನಾಟಕಕ್ಕೆ ಶುಭ ಹಾರೈಸಿದರು.
ನಾಟಕದ ಸಂಚಾಲಕರಾದ ಹರೀಶ್ ಬಂಗೆರ,ದಿನೇಶ್ ಶೆಟ್ಟಿ ಕೊಟ್ಟಿಂಜ,ರಾಜೇಶ್ ಕುತ್ತಾರ್, ಗಿರೀಶ್ ನಾರಯಣ್,ಪ್ರಕಾಶ್ ಪಕಳ,ಶಾನ್ ಪೂಜಾರಿ ಬಂದಂತ ಗಣ್ಯತಿ ಗಣ್ಯರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.
ಗಿರೀಶ್ ನಾರಯಣ್ ಶಿವದೂತೆ ಗುಳಿಗೆ ನಾಟಕದ ಎಲ್ಲೆಲ್ಲಿ ಪ್ರದರ್ಶನವಾಗಿದೆ ಇದರ ಮಾಹಿತಿ ನೀಡಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
2,500 ಆಸನಗಳಿರುವ ಈ ಸಭಾಂಗಣದಲ್ಲಿ ಎರಡು ಪ್ರದರ್ಶನದಲ್ಲಿ 5,000 ಮಂದಿ ತುಳು - ಕನ್ನಡಿಗರು ಈ ನಾಟಕವನ್ನು ನೋಡಲಿದ್ದು ಈಗಾಗಲೇ ನಾಟಕದ ಟಿಕೆಟ್ ಗಾಗಿ ಸಾವಿರಾರು ಕರೆಗಳು ಬಂದಿದ್ದೆ. ಟಿಕೆಟ್ ಗಳನ್ನು ಇವತ್ತಿನಿಂದ ನಿಮ್ಮದಾಗಿಸಿಕೊಂಡರೆ ನಾಟಕ ನೊಡುವ ಅವಕಾಶ ಸಿಗಬಹುದು ಎಂದು ಸಂಚಾಲಕರು ವಿನಂತಿಸಿದ್ದರೆ.
✒️ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಚಿತ್ರ : ವಿವೇಕ್ ಆನಂದ್ ದುಬೈ











0 Comments