ಪೆರ್ಲ: ಇಲ್ಲಿನ ಪೇಟೆಯ ಪಂಚಾಯತು ರಸ್ತೆಯಲ್ಲಿ ಹೋಟೆಲ್ ಕಾರ್ಮಿಕೆಯಾಗಿದ್ದ ಯುವತಿಯೋರ್ವಳು ಮನನೊಂದು ವಿಷ ಪ್ರಾಶನಗೈದು ಜೀವನ್ಮರಣ ಹೋರಾಟದ ನಡುವೆ ಶುಕ್ರವಾರ ಮಧ್ಯಾಹ್ನ ಮೃತಪಟ್ಡಿರುವ ಬಗ್ಗೆ ತಿಳಿದು ಬಂದಿದೆ.
ಕಾಟುಕುಕ್ಕೆ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಈಶ್ವರ ನಾಯ್ಕರ ಪುತ್ರಿ ವಿಜಯಶ್ರೀ (21) ಮೃತ ಯುವತಿ. ಈಕೆ ಪೆರ್ಲದ ಹೊಟೇಲ್ ವೊಂದರಲ್ಲಿ ಕಾರ್ಮಿಕೆಯಾಗಿ ದುಡಿಯುತ್ತಿದ್ದು ವಾರದ ಹಿಂದೆ ರಜೆ ಮಾಡಿದ್ದು ಬಳಿಕ ಮನೆಯಲ್ಲಿ ವಿಷ ಪ್ರಾಶನಗೈದ ಸ್ಥಿತಿಯಲ್ಲಿ ಕಂಡು ಬಂದಿದ್ದಳು. ತಕ್ಷಣ ಪೆರ್ಲ ,ಕಾಸರಗೋಡು ಬಳಿಕ ಪೆರಿಯಾರಂ ಆಸ್ಪತ್ರೆಗೆ ಕೊಂಡೊಯ್ಯೊಲಾಗಿದ್ದು ಬಳಿಕ ಅಲ್ಲಿಯೂ ಚಿಕಿತ್ಸೆ ಫಲಿಸದಿರುವಾಗ ಕೊಝಿಕ್ಕೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.ಮೃತ ಯುವತಿ ತಂದೆ, ತಾಯಿ ಲಲಿತಾ ಸಹೋದರರಾದ ಪ್ರಶಾಂತ್,ಪ್ರವೀಣ ಸಹೋದರಿ ಜಯಶ್ರೀ ಎಂಬವರನ್ನಗಲಿದ್ದಾಳೆ.

.jpeg)


0 Comments