ದುಬೈ ಕರ್ನಾಟಕ ಸಂಘದ ಹೊಸ ಕಾರ್ಯ ಯೋಜನೆಯೊಂದಿಗೆ ನೂತನ ಸಮಿತಿ ಘೋಷಣೆ


 ದುಬೈ : 1985 ರಲ್ಲಿ ಸ್ಥಾಪನೆಯಾದ ದುಬೈನಲ್ಲಿ ಮೊಟ್ಟಮೊದಲ ಕರ್ನಾಟಕ ಸಂಘ ದುಬೈಯು ದುಬೈನಲ್ಲಿರುವ ಕನ್ನಡಿಗ ಸಮುದಾಯಕ್ಕೆ ತನ್ನ ಸೇವೆಯನ್ನು ಮುಂದುವರಿಸಲು ನೂತನ ಸಮಿತಿಯೊಂದಿಗೆ ಸಿದ್ಧವಾಗಿದೆ. 2023 ರಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸಲು 18 ಸದಸ್ಯರ ಹೊಸ ಕಾರ್ಯಕಾರಿ ಸಮಿತಿಯ ಸಭೆಯು  ದುಬೈನಲ್ಲಿ ಜರಗಿತು.

    ನೂತನ ಅಧ್ಯಕ್ಷರಾದ  ಶಶಿಧರ್ ನಾಗರಾಜಪ್ಪ ಅವರು ಕರ್ನಾಟಕ ಸಂಘ ದುಬೈನ ಎಲ್ಲಾ ಮಾಜಿ ಸಂಸ್ಥಾಪಕರಿಗೆ, ಸದಸ್ಯರಿಗೆ ಮತ್ತು ಮಾಜಿ ಅಧ್ಯಕ್ಷರಾದ ಗಿರೀಶ್ ಶೆಟ್ಟಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಶಶಿಧರವರು ಮಾತನಾಡುತ್ತಾ  ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಂಸ್ಥೆಯ ದೃಷ್ಟಿಕೋನ ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸಿದರು. ಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಒಳಿತಿಗಾಗಿ ವಿವಿಧ ಕನ್ನಡಿಗರನ್ನು ಒಗ್ಗೂಡಿಸುವುದು ಏಕೈಕ ಗುರಿಯಾಗಿದೆ ಎಂದು ಹೇಳಿದರು.



      ಉಪಾಧ್ಯಕ್ಷರಾದ  ದಯಾ ಕಿರೋಡಿಯನ್ ಅವರು ಕರ್ನಾಟಕ ಸಂಘ ದುಬೈ ಪ್ರಾರಂಭದಿಂದಲೂ ಅದರ ಇತಿಹಾಸವನ್ನು ವಿವರವಾಗಿ ನೀಡಿದರು, ಪ್ರಧಾನ ಕಾರ್ಯದರ್ಶಿ ಮನೋಹರ ಹೆಗ್ಡೆ ಅವರ ಕರ್ನಾಟಕ ಸಂಘ ದುಬೈಯನ್ನು ಬಲಪಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಅವರು ದುಬೈನಲ್ಲಿ 12ನೇ ನವೆಂಬರ್ 2023 ರಂದು ಕರ್ನಾಟಕ ರಾಜ್ಯೋತ್ಸವದ ಪ್ರಮುಖ ಆಚರಣೆಯ ಕಾರ್ಯಕ್ರಮಗಳ ಉತ್ತಮ ವಿವರವನ್ನು ನೀಡಿದರು. ಕೋಶಾಧಿಕಾರಿ ನಾಗರಾಜ್ ರಾವ್ ಉಡುಪಿ ಅವರು ತಮ್ಮ ಭಾಷಣದಲ್ಲಿ ಕರ್ನಾಟಕ ಸಂಘ ದುಬೈಗೆ ಕೃತಜ್ಞತೆ ಸಲ್ಲಿಸಿದರು.


ಕರ್ನಾಟಕ ಸಂಘ ದುಬೈನ ಪೋಷಕತ್ವ ಮತ್ತು ಸಲಹಾ ಜವಾಬ್ದಾರಿಯನ್ನು  ಮಾಜಿ ಅಧ್ಯಕ್ಷರಾದ  ಬಿ ಕೆ ಯೂಸುಫ್ ಮತ್ತು  ಗಿರೀಶ್ ಶೆಟ್ಟಿ ಮತ್ತು ಶ್ರೀ ಹರೀಶ್ ಬಂಗೇರ ಅವರು ವಹಿಸಲಿದ್ದರೆ.

       ಕರ್ನಾಟಕ ಸಂಘ ದುಬೈನ ಮಾಜಿ ಅಧ್ಯಕ್ಷರು ಹಾಗೂ ಮಹಾ ಪೋಷಕರಾದ ಡಾ.ಬಿ.ಕೆ.ಯೂಸುಫ್ ಅವರು ನೂತನ ಸಮಿತಿಗೆ ಸಂಪೂರ್ಣ ಬೆಂಬಲ ಮತ್ತು ಹಾರೈಕೆಗಳನ್ನು ವ್ಯಕ್ತಪಡಿಸಿ ಶುಭಹಾರೈಸಿದ್ದರು.

ಹರೀಶ್ ಬಂಗೇರ ಅವರು ತಮ್ಮ ಪೋಷಕ ಭಾಷಣದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿ, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿ 38 ವರ್ಷಗಳ ಸೇವಾ ಪರಂಪರೆಯಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.

    ಮಾಜಿ ಕೋಶಾಧಿಕಾರಿ ಜಯಂತ್ ಶೆಟ್ಟಿ ಯವರು ಸಲಹೆಗಾರರಾಗಿ ಕಾರ್ಯಕಾರಿ ಸಮಿತಿಯನ್ನು ಮುನ್ನಡೆಸಲಿದ್ದಾರೆ. ಹರೀಶ್ ಕೋಡಿ ಮತ್ತು ಸತೀಶ್ ಅವರು ಜಂಟಿಯಾಗಿ ಕ್ರೀಡೆ ಮತ್ತು ಸಂಬಂಧಿತ ಕಾರ್ಯಕ್ರಮಗಳನ್ನು ಮುನ್ನಡೆಸಲಿದ್ದರೆ. ಹಿದಾಯತ್ ಅಡ್ಡೂರು ಮತ್ತು ಸಿದ್ದಲಿಂಗೇಶ್ ಬಿ.ಆರ್ ಸಮುದಾಯ ಸೇವೆ ಮತ್ತು ತುರ್ತು ಸಹಾಯವನ್ನು ಮುನ್ನಡೆಸಲಿದ್ದರೆ. ರವಿ ಕೋಟ್ಯಾನ್ ಮತ್ತು ಯುವರಾಜ್ ದೇವಾಡಿಗ ಸಾಂಸ್ಕೃತಿಕ ಮತ್ತು ಮನರಂಜನೆಯ ಕಾರ್ಯಕ್ರಮದ ಜವಾಬ್ದಾರಿಯನ್ನು ಮುನ್ನಡೆಸುತ್ತಾರೆ. ಸುನಿಲ್ ಗವಾಸ್ಕರ್ ಮತ್ತು  ಲಾರೆನ್ಸ್ ನಜ್ರೆತ್ ಅವರು ವೇದಿಕೆ ಮತ್ತು ಕಾರ್ಯಕ್ರಮದ ಸ್ಥಳದ ಮಾಹಿತಿಯನ್ನು ನಿರ್ವಹಿಸುತ್ತಾರೆ. ಕೆ. ಎಂ ಅಶ್ರಫ್ ಅತಿಥಿ ಸಂಬಂಧ ಮತ್ತು ಸದಸ್ಯತ್ವದ ನಿರ್ವಹಣೆಯನ್ನು ಮುನ್ನಡೆಸಲಿದ್ದಾರೆ. ಪೀಟರ್ ಜಾಯ್ಸನ್ ಅವರು ವಿದೇಶಾಂಗ ವ್ಯವಹಾರಗಳು ಮುನ್ನಡೆಸಲಿದ್ದಾರೆ.


ಕರ್ನಾಟಕ ಸಂಘ ದುಬೈ ಮಹಿಳಾ ವಿಭಾಗದ ಮಹಿಳಾ ಕಾರ್ಯಕಾರಿ ಸಮಿತಿಯ ಸದಸ್ಯೆಯಾರಾಗಿ ಶ್ರೀಮತಿ ರಾಧಿಕಾ ಸತೀಶ್ ಮತ್ತು ಶ್ರೀಮತಿ ಮಮತಾ ಸೆಂಥಿಲ್ ನೇತೃತ್ವ ವಹಿಸಿ ಸಂಘದ ವಿವಿಧ ಚಟುವಟಿಕೆಗಳಲ್ಲಿ ಸಹಕರಿಸಲಿದ್ದಾರೆ.

Post a Comment

0 Comments