ಪೆರ್ಲ : ಎಣ್ಮಕಜೆ ಗ್ರಾಮಪಂಚಾಯತ್‌ನ 2022-23ನೇ ಸಾಲಿನ ವಾರ್ಷಿಕ ಯೋಜನೆಗೊಳಪಡಿಸಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಜನಕೀಯ ಹೋಟೆಲ್ ಪಂಚಾಯತ್ ಸಮೀಪದಲ್ಲಿರುವ ನೂತನ ಕಟ್ಟಡದಲ್ಲಿ ಕಾರ್ಯರಂಭಗೊಂಡಿದೆ.
ಪೆರ್ಲ ಪೇಟೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಕೆ ಎಂ ಆಶ್ರಫ್ ಪಂಚಾಯತ್ ನ ಕುಟುಂಬಶ್ರೀಯ ಜನಕೀಯ ಹೋಟೆಲ್ ನ ಕೀಲಿಕೈ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಅಧ್ಯಕ್ಷತೆಯಲ್ಲಿ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದು ಇದೀಗ ಸೋಮವಾರದಿಂದ ಸ್ವಂತ ಕಟ್ಟಡದಲ್ಲಿ ಕಾರ್ಯರಂಭಗೊಂಡಿದೆ. 20ರೂ.ಗೆ ಊಟ,8 ರೂ.ಗೆ ಚಾ ಹೋಟೆಲ್ ನ ವಿಶೇಷತೆಯಾಗಿದ್ದು ಹೆಚ್ಚುವರಿ ಆರ್ಡರ್ ಹಾಗೂ ಮನೆ ಊಟ, ತಿಂಡಿ ತಿನಸುಗಳ ವಿತರಣೆಗೆ ಮುತುವರ್ಜಿವಹಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




0 Comments