ಎಣ್ಮಕಜೆ ಗ್ರಾಮ ಪಂ.ವ್ಯಾಪ್ತಿಯಲ್ಲಿ ವೈಲ್ಡ್ ಲೈಫ್ ವಾರ್ಡನ್ (ಹಾನರಿ) ಭೇಟೆಗೆ ತಂಡದ ಕಾರ್ಯಚರಣೆ ಆರಂಭ


ಪೆರ್ಲ: ಕಾಡು ಹಂದಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸರಕಾರ ಪಂಚಾಯತು ಅಧ್ಯಕ್ಷರಿಗೆ  ಅನುಮತಿಸಲ್ಪಟ್ಟ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 5(2) ಪ್ರಕಾರ ಡೆಲಿಕೇಟ್ ಮಾಡಿ ಲಭಿಸಿದ ವೈಲ್ಡ್ ಲೈಫ್ ವಾರ್ಡನ್ (ಹಾನರಿ) ಅಧಿಕಾರ ಬಳಸಿಕೊಂಡು ಅಂಗೀಕೃತ ಶೂಟರ್ ಗಳಿಗೆ ಎಣ್ಮಕಜೆ ಗ್ರಾ.ಪಂ‌.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಆದೇಶ  ನೀಡಿದ್ದಾರೆ.ಇದರಂತೆ ತಂಡವು ಇದೀಗ ಪಂಚಾಯತ್ ಗೆ ಆಗಮಿಸಿ ಹಂದಿಗಳ ಅವಾಸ ತಾಣವನ್ನು ಪರಿಶೋಧಿಸಿ  ಬೇಟೆಗಿಳಿದಿದೆ. ತಂಡದಲ್ಲಿ ಬೇಟೆ ನಾಯಿ ಸಹಿತ  ಐವರು ಶೂಟರ್ ಗಳು ಹಾಗೂ ಹತ್ತು ಮಂದಿ ಸಹಾಯಕರನ್ನೊಳಗೊಂಡಿದ್ದು .ಗುರವಾರದಿಂದ ತಂಡವು ಹಗಲು ಮತ್ತು ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ನಡೆಸಲಿದ್ದು ಈ ಬಗ್ಗೆ ನಾಗರಿಕರು ಸಹಕಾರ ನೀಡಬೇಕೆಂದು ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.



Post a Comment

0 Comments