ಮಾತಾ ಪಿತರ ವಿವಾಹ ವಾರ್ಷಿಕೋತ್ಸವಕ್ಕೆ ದುಬೈಯಲ್ಲಿ ರಕ್ತದಾನ ಶಿಬಿರ ನಡೆಸಿ ಮಾದರಿಯಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ


ದುಬೈ : ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸ್ಥಾಪಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರು ತಮ್ಮ ಮಾತಾ ಪಿತರಾದ ಶ್ರೀಮತಿ ಸರೋಜಿನಿ‌ ಶೆಟ್ಟಿ - ಶ್ರೀ ನಾರಾಯಣ ಶೆಟ್ಟಿ ಯವರ 57 ನೇ ವಿವಾಹ ವಾರ್ಷಿಕೋತ್ಸವದ ಸಂತೋಷದಾಯಕ ಸಂದರ್ಭದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರವು ಅಭೂತಪೂರ್ವ ಸ್ಪಂದನೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಈ ಬಾರಿ ಯಶಸ್ವಿ 11 ನೇ ವರ್ಷದ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಕುಟುಂಬ ಸದಸ್ಯರು ಸಮಾಜಕ್ಕೆ ಮಾದರಿ ಕೊಡುಗೆ ನೀಡಿದ್ದಾರೆ.

 


   ದುಬೈನ ಅಲ್ ಗೀಸಸ್ ನ ಫಾರ್ಚೂನ್ ಪ್ಲಾಜಾದಲ್ಲಿ ಮೇ 22, 2023 ರಂದು ನಡೆಯಿತು.

      ಈ ಸಂದರ್ಭದಲ್ಲಿ  ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ "ನಮ್ಮ ರಕ್ತದಾನ ಶಿಬಿರಕ್ಕೆ ಒಳ್ಳೆಯ ಪ್ರತಿಕ್ರಿಯೆಯಿಂದ ನಾವು ರೋಮಂಚನಗೊಂಡಿದ್ದೇವೆ. ರಕ್ತದಾನ ಎಂದರೆ ನಮಗೆ ಕೆಲವೇ ನಿಮಿಷಗಳು ಆದರೆ ಬೇರೆಯವರಿಗೆ ಜೀವಮಾನ, ಇದು ನಮ್ಮ ಸಮಾಜಕ್ಕೆ ಕೊಡುಗೆ ನೀಡಲು ನಮಗೆ ಅಪಾರವಾದ ತೃಪ್ತಿಯನ್ನು ನೀಡುತ್ತದೆ. ಅಗತ್ಯವಿರುವವರಿಗೆ ರಕ್ತದಾನ ಮಾಡುವ ಎಲ್ಲಾ ತಂಡದ ಸದಸ್ಯರು, ಫಾರ್ಚೂನ್ ಕುಟುಂಬದ ರಕ್ತದಾನಿಗಳು ಮತ್ತು ಯುಎಇಯ ತುಳು-ಕನ್ನಡ ಸಂಘ ಸಂಸ್ಥೆಗಳ ಸ್ನೇಹಿತರು ತಮ್ಮ ಜೀವ ಉಳಿಸುವ ರಕ್ತಕ್ಕಾಗಿ ರಕ್ತದಾನಕ್ಕಾಗಿ ಆಗಮಿಸಿದ ಗಣ್ಯರಿಗೆ ವಂದನೆಗಳನ್ನು ಅರ್ಪಿಸುತ್ತೇನೆ" ಎಂದರು.

 


  ರಕ್ತದಾನ ಶಿಬಿರ 2023 DHA - ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ರಕ್ತನಿಧಿಯ ಸಹಯೋಗದೊಂದಿಗೆ ನಡೆದಿದ್ದು ಹೋಟೆಲ್ ಸಿಬ್ಬಂದಿಗಳು ಮತ್ತು ಯುಎಇಯ ತುಳು- ಕನ್ನಡ ಸಂಘ ಸಂಸ್ಥೆಗಳ ಸದಸ್ಯರಿಂದ ಅಗಾಧ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು.

 




   ಮೊಗವೀರ ಸಮಾಜ ಯುಎಇಯ ಬಾಲಕೃಷ್ಣ ಸಾಲಿಯಾನ್ ಮತ್ತು ಫಾರ್ಚೂನ್ ಗ್ರೂಪ್ ನ ಉದ್ಯೋಗಿ ವಸಂತ ಶೆಟ್ಟಿ ರಕ್ತದಾನ ಮಾಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಮುಲಕ ಅಭಿನಂದನೆ ಸಲ್ಲಿಸಿದರು. 150 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ತಮ್ಮ ತಮ್ಮ ಮಾನವೀಯತೆಯನ್ನು ಎತ್ತಿ ಹಿಡಿದರು.

✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Post a Comment

0 Comments