ಸಾಮಾಜಿಕ-ಧಾರ್ಮಿಕ ಕಾರ್ಯದಲ್ಲಿ ನೆರವಾಗುವ ನಿಡ್ಲೆ ಬರೆಂಗಾಯದ "ನಿಸರ್ಗ ಯುವಜನೇತರ ಮಂಡಲ"


ಸಂಘಟನೆ_ಸಮಾಚಾರ

"ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಸಾಮಾಜಿಕಸೇವೆ ದೇವರಿಗೆ ಸಲ್ಲಿಸುವ ಪೂಜೆಗೆ ಸಮನಾಗಿರುತ್ತದೆ "

"ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಶ್ರೇಷ್ಠ "ಸೇವೆ ಎಂಬುವುದು ಉನ್ನತವಾದ ಮೆಟ್ಟಿಲು.

 " ಜನ ಸೇವೆಯೇ ಜನಾರ್ಧನ ಸೇವೆ " ಎಂಬ ಮಾತಿದೆ.ಸಮಾಜದ ಸಾಮಾಜಿಕ ಸ್ಥಿತಿಗಳನ್ನು ಸುಧಾರಿಸಲು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಸಲ್ಲಿಸುವ ಸೇವೆಯೇ ಸಮಾಜಸೇವೆ.

 


ಯಾವುದೇ ಫಲಾಪೇಕ್ಷೆ ಬಯಸದೆ ಸಮಾಜ ಸೇವೆಗೆಯ್ಯುತ್ತಿರುವ ಸಂಸ್ಥೆಗಳ ಸಾಲಿಗೆ ನಿಸರ್ಗ ಸೌಂದರ್ಯದ ನಡುವಿನಲ್ಲಿ ತಲೆಯೆತ್ತಿ ನಿಂತಿರುವ ಸಂಸ್ಥೆ "ನಿಸರ್ಗ ಯುವಜನೇತರ ಮಂಡಲ (ರಿ )ಬರೆಂಗಾಯ ನಿಡ್ಲೆ ಬೆಳ್ತಂಗಡಿ ತಾಲೂಕು ಕೂಡ ಒಂದು.

        2014 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದೆ.ಈ ಸಂಸ್ಥೆ ಯುವಸಬಲೀಕರಣ ಕ್ರೀಡಾ ಇಲಾಖೆ  ಇಲ್ಲಿ ರಿಜಿಸ್ಟರ್ ಹೊಂದಿದ್ದು, ಪ್ರಸ್ತುತ 100 ಕ್ಕೂ ಮಿಕ್ಕಿ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ನವೀನ್  ಕುಮಾರ್ ಗಾಂತ್ರoಡ ಗೌರವ ಅಧ್ಯಕ್ಷರಾಗಿ,ಪುನೀತ್ ಪೊoರ್ದಿಲ  ಅಧ್ಯಕ್ಷರಾಗಿ,ರುಕ್ಮಯ್ಯ ಪೂಜಾರಿ ಉಪ ಅಧ್ಯಕ್ಷರಾಗಿ,ಶಶಿಕಾಂತ್ ಬದಿಮೆಟ್ಟು ಕಾರ್ಯದರ್ಶಿಯಾಗಿ, ಸುಬ್ಬರತ್ನ ಕಳ್ಳಿಮಾರ್ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಘಟಿತ ಹೆಜ್ಜೆ ಗುರುತು....


ಪ್ರಾರಂಭಿಕ ಕಾರ್ಯದಲ್ಲಿ ಕುದ್ರಾಯ ರಸ್ತೆ ತಿರುವಿನ ಕೆಲಸವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಮೀಯಾರು ಇಲ್ಲಿಯ ಬ್ರಹ್ಮಕಲಸದ ಚಪ್ಪರ ಸೇವೆಗೆ ಮುಖ್ಯವಾಗಿ ಕೈ ಜೋಡಿಸಿದ  ಈ ಸಂಸ್ಥೆ, ಕಾಯರ್ತ್ತಡ್ಕದ ಉಮಾಮೇಶ್ವರ ದೇವಸ್ಥಾನ ದ ಬ್ರಹ್ಮಕಲಸದ ಸಂಧರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ವಾಗತ ಕೋರಲು ಕುದ್ರಾಯ ತಿರುವಿನಲ್ಲಿ ಮಹಾದ್ವಾರದ ಕಾರ್ಯದಲ್ಲಿ ಕೈ ಜೋಡಿಸಿತ್ತು. ಸರಕಾರಿ ಪ್ರೌಢ ಶಾಲೆ ನಿಡ್ಲೆ ಇಲ್ಲಿನ ಸುವರ್ಣಮಹೋತ್ಸವದ ಕೆಲಸದಲ್ಲೂ ಪಾಲುದಾರಿಕೆ  ಪಡೆದಿದ್ದ ಈ ಸಂಸ್ಥೆ, ಪ್ರತಿವರ್ಷ ಅಷ್ಟಮಿಯನ್ನು ಊರಿನವರ ಸಹಕಾರ ದಿಂದ ಅತೀ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ.

ಧಾರ್ಮಿಕ ಕಾರ್ಯದಲ್ಲೂ ಸಕ್ರಿಯ...

ಈ ಸಂಸ್ಥೆ ಪ್ರಮುಖವಾಗಿ ಊರಿನ ವನಸಾಯ ಎಂಬಲ್ಲಿ ಇರುವ ವನದುರ್ಗಾದೇವಿ ಮತ್ತು ಕೊಡಂಗೆ ಯಲ್ಲಿರುವ ಶ್ರೀ ಭಟಾರಿಯಾನೆ ಮಲೆದೇವತೆ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಊರಿನ /ಪರ ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

 ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಈ ಸಂಸ್ಥೆ ವರ್ಷಕ್ಕೆ ಒಂದು ಬಾರಿ ವನಮಹೋತ್ಸವ ಕಾರ್ಯಕ್ರಮವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ.ಮಾತ್ರ ವಲ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರೆಂಗಾಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಿದೆ. ಪ್ರತಿ ವಾರ ಭಜನಾಕಾರ್ಯದಲ್ಲಿ ತೊಡಗುತ್ತಾ ಧಾರ್ಮಿಕ ಮುಂದಾಳತ್ವವನ್ನು ಹೊಂದಿದೆ.

       ಯಾವುದೇ ಪ್ರಚಾರ ಬಯಸದೆ ನಿಸ್ವಾರ್ಥಸೇವೆಯನ್ನು ಸಮಾಜಕಾರ್ಯದಲ್ಲಿ ನಿರ್ವಹಿಸುತ್ತಿರುವುದಲ್ಲದೆ,ಬಡವರ ಪಾಲಿಗೆ ಆಶಾಕಿರಣವಾಗಿ ಹೊರ ಹೊಮ್ಮಿದೆ.

ಸಾಮಾಜಿಕ ಸ್ವಾಸ್ಥ್ಯ ಸಂಕಲ್ಪ: 


ಅನಾರೋಗ್ಯ ಪೀಡಿತರಿಗೆ ಕೈಲಾದಷ್ಟು ಧನ ಸಹಾಯ ಮಾಡುತ್ತಿರುವ ಈ ಸಂಸ್ಥೆ ಕೈರೋಳಿ ಮನೆ ನಿವಾಸಿ ರಾಮಣ್ಣ ಇವರ ಮನೆ ನಿರ್ಮಾಣಕಾರ್ಯವನ್ನು ಯಶಸ್ವಿಯಾಗಿ ಮಾಡಿಕೊಟ್ಟಿರುವುದು ಅಭಿನಂದನಾರ್ಹ.

    ಇತ್ತೀಚೆಗೆ ಅಸ್ತಿಮಚ್ಛೆ ಯಲ್ಲಿ ಬಳಲುತ್ತಿದ್ದ ದೀಪಿಕಾ ಇವರ ಶಸ್ತ್ರ ಚಿಕಿತ್ಸೆಗಾಗಿ ಧನ ಸಹಾಯ ನೀಡಿ ಎಲ್ಲರ  ಮೆಚ್ಚುಗೆಗೆ ಪಾತ್ರವಾಗಿತ್ತು.

ಕೆಸರುಗದ್ದೆ ಕ್ರೀಡೆ ': ಅಂತರ್ ಜಿಲ್ಲಾ ಮಟ್ಟದ ಕಬಡ್ದಿ ಅಯೋಜನೆ ತಮ್ಮ ಊರಿನಲ್ಲಿ ಮಾಡಿಕೊಂಡು ಬಂದಿದ್ದು ಊರಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಜವಾಬ್ದಾರಿ ವಹಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ಊರಿನ ಆರಾಧ್ಯ ದೈವಗಳ ವರ್ಷಾವಧಿ ನೇಮೋತ್ಸವದಲ್ಲಿ ವಿಶೇಷ ಮುತುವರ್ಜಿ ವಹಿಸಿಕೊಂಡು ಅನ್ನದಾನ ಸೇವೆ ,ಸ್ವಯಂ ಸೇವಕರ ಕೆಲಸ ಕಾರ್ಯ ಮಾಡಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ . ಸಮಾಜದ ಎಲ್ಲರ ಕಷ್ಟಗಳಿಗೆ ರಾತ್ರಿಹಗಲು ಎನ್ನದೇ ದುಡಿಯುವ ನಿಸ್ವಾರ್ಥ ಮನೋಭಾವನೆಯ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದಾರೆ.

         ಯಾವುದೇ ಫಲಾಪೇಕ್ಷೆ ಬಯಸದೇ, ತಮ್ಮ ಕಾರ್ಯಕರ್ತರೊಂದಿಗೆ ಎಲೆಮರೆಯ ಕಾಯಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಕಾರ್ಯವೈಖರಿ

 ನಿಜಕ್ಕೂ ಶ್ಲಾಘನೀಯ. ಇನ್ನೂ ಉತ್ತಮ ಸಮಾಜಸೇವಾ ಕಾರ್ಯ ನಿರ್ವಹಿಸುವಂತ ಯೋಜನೆ, ಯೋಚನೆ ಯು ಸಾಕಾರಗೊಳ್ಳಲಿ ಎಂಬ ಆಶಯದೊಂದಿಗೆ, ದೈವ ದೇವರ ಆಶೀರ್ವಾದ ಇರಲಿ ಎಂಬುದು ಎಲ್ಲರ ಹರಕೆ,ಹಾರೈಕೆ

✍️ವಸಂತಿ ಟಿ ನಿಡ್ಲೆ ✍️

ಶಿಕ್ಷಕಿ... ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀಯಾರು

Post a Comment

0 Comments