ಪೆರ್ಲ : ಗ್ರಾಮೀಣ ಪ್ರದೇಶವಾದ ಸ್ವರ್ಗ - ವಾಣಿನಗರ ರಸ್ತೆಗಳಲ್ಲಿ ರಾತ್ರಿ ಪ್ರೇತ ಕಂಡಿದೆ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ವಿಕೃತ ಮನೋರಂಜನೆ ಸೃಷ್ಢಿಸಿದ ವ್ಯಕ್ತಿ ಬಗ್ಗೆ ತಿಳಿದು ಬಂದಿದ್ದು ಇದು ಆರ್ಲಪದವಿನ ಬಾಬಾ ಎಂಬ ಕಾರು ಮಾಲಕನ ಮೊಬೈಲ್ ಸೃಷ್ಠಿ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ.
ಕಳೆದೊಂದು ವಾರದಿಂದ ಇಲ್ಲಿನ ವಾಣಿನಗರ, ಸ್ವರ್ಗದ ಗೋಳಿಕಟ್ಟೆ ಮೊದಲಾದೆಡೆ ಮಧ್ಯ ರಾತ್ರಿ ಪ್ರೇತ ಸಂಚಾರ ಇರುವುದಾಗಿ ಕಂಡು ಬಂದಿದ್ದು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಊರಿನ ಸಾಮಾಜಿಕ ಜಾಲತಾಣಗಳಾದ ವಾಟ್ಸಫ್ ,ಫೆಸ್ಬುಕ್ ನಲ್ಲಿ ಹಂಚಿ ವಿಕೃತ ಮನರಂಜನೆ ಪಡೆಯುತ್ತಿದ್ದ ಈತನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆರ್ಲಪದವಿನ ವ್ಯಕ್ತಿಯಾಗಿರುವ ಈತ ಸ್ವರ್ಗ ಬಳಿಯಲ್ಲಿ ಬೃಹತ್ ಜಾಗ ಖರೀದಿಸಿದ್ದು ಈ ನಡುವೆ ನಕಲಿ ಪ್ರೇತದ ಕಟ್ಟು ಕತೆ ಸೃಷ್ಢಿಸಿದ ಈತನ ಬಗ್ಗೆ ಊರವರು ಗುಮಾನಿ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಕೆಗೋ ಅಥವಾ ಅಕ್ರಮ ವಸ್ತು ಸಾಗಾಟ ದಂಧೆಗೋಸ್ಕರ ಈ ರೀತಿಯ ಕಥೆ ಸೃಷ್ಠಿಸಿರಬಹುದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ನಡುವೆ ಹಲವಾರು ಊಹಪೋಹಗಳಿಗೆ ಕಾರಣವಾಗಿದ್ದ ನಕಲಿ ಸುದ್ದಿಯೊಂದನ್ನು ಕಾರಿನಲ್ಲಿ ಕುಳಿತು ಚಿತ್ರಿಸಿದ್ದ ಈತ ಸ್ವತಃ ಪೋಟೊ ತೆಗೆದಾಗ ತನ್ನ ಕಾರಿನ ಹೆಸರು ಅದರಲ್ಲಿ ನಮೂದಿಸಿರುವುದು ಕಾಣದೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿಸಿದ್ದು "ಬಾಬಾ" ಎಂದು ಬರೆದ ಕಾರನ್ನು ಹುಡುಕಾಡಿದ ಊರವರು ಈತನ ಬಗ್ಗೆ ಸೈಬರ್ ಸೆಲ್ ಗೆ ಮಾಹಿತಿ ನೀಡಿದ್ದಾರೆ. ಇದೀಗ ಅಸಲಿ ವಿಚಾರ ಬೆಳಕಿಗೆ ಬರುವುದರೊಂದಿಗೆ ಊರವರು ನಿಟ್ಟುಸಿರು ಬಿಡುವಂತಾಗಿದೆ.



0 Comments