ಮಂಗಳೂರು: ತುಳುನಾಡಿನ ಜನ ಸಾಮಾನ್ಯರ ಆರಾಧ್ಯ ದೈವ ಎಂಬ ಪ್ರಸಿದ್ಧಿಗೆ ಪಾತ್ರವಾದ ಕೊರಗಜ್ಜ ದೈವದ ತುಳು ಭಕ್ತಿಗೀತೆಯೊಂದು ಖ್ಯಾತ ಸಾಹಿತಿ ಸುಧಾಕರ್ ಸಸಿಹಿತ್ಲು ರಾಗ ಸಂಯೋಜನೆ ಮತ್ತು ಸಾಯಿತ್ಯ ರಚಿಸಿ ಮತ್ತು ನಿರ್ದೇಶಿಸಿದ "ಕೊರಗಜ್ಜನ ಕರಿಗಂಧ" ಎಂಬ ತುಳು ಭಕ್ತಿಗೀತೆಯ ಆಲ್ಬಂ ಸಾಂಗ್ ಬಿಡುಗಡೆ ಜುಲೈ 23ಕ್ಕೆ ಸಂಜೆ 6 ಗಂಟೆಗೆ ಆರ್ ಎಮ್ ಕ್ರಿಯೇಶನ್ ( R.M Creation ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ನಮ್ಮ ತುಳುನಾಡಿನ ಖ್ಯಾತ ಗಾಯಕರಲ್ಲಿ ಒಂದಾದ ರಂಜಿತ್ ಮೊಗರು ಇವರ ಕಂಠ ಸ್ವರದಿಂದ ಮೂಡಿ ಬರಲಿರುವ ಈ ಹಾಡಿಗೆ ಗುರು ಬಾಯಾರು ಸಂಗೀತ ಸಂಯೋಜಿಸಿದ್ದಾರೆ. ಲತೇಶ್ ಸುರತ್ಕಲ್, ಮಹೇಶ್ ಒಡಿಯೂರು,ವಿನಿತ್ ರಾಜ್ ಕೊಟ್ಯಾನ್ ಅಂಬಾರ್, ಯತೀಶ್ ಕುಂಞಹಿತ್ತಿಲು ನಿರ್ಮಾಪರಾಗಿದ್ದು ಹಿತೇಶ್ ಸುರತ್ಕಲ್ ಡಿಒಪಿ ನಿರ್ವಹಿಸಿದ್ದಾರೆ. ಗಝಲ್ ಬಿಟ್ಸ್ ದುಬೈ ಸ್ಟುಡಿಯೋದಲ್ಲಿ ರೇಕಾರ್ಡಿಂಗ್ ನಡೆಸಲಾಗಿದ್ದು ಪ್ರಚಾರ ವಿನ್ಯಾಸ ಕಲೆಯಲ್ಲಿ ಸಂತೋಷ್ ಪೂಚೇರ್ ಸಹಕರಿಸಿದ್ದಾರೆ.
ಸಾಹಿತಿ ಸುಧಾಕರ ಸಸಿಹಿತ್ಲು ಅವರು ಈ ಮೊದಲೇ ಸಾನ್ವಿ ಭಟ್ ಹಾಡಿದ "ಗುಳಿಗಜ್ಜೆ" ಹಾಗೂ ಪೊಳಲಿ ಶ್ರೀರಾಜರಾಜೇಶ್ವರೀ ಕ್ಷೇತ್ರದ ಬಗ್ಗೆ ಬರೆದ "ಅಪ್ಪೆ ರಾಜರಾಜೇಶ್ವರೀ" ಅಲ್ಬಂ ಸಾಂಗ್ ಜನಪ್ರಿಯತೆ ಗಳಿಸಿದ್ದು ಇದೀಗ ಅವರದೆ ಸಾಹಿತ್ಯ ಮತ್ತು ರಾಗ ಸಂಯೋಜನೆಯಲ್ಲಿ ಮೂಡಿ ಬರಲಿರುವ "ಕೊರಗಜ್ಜನ ಕರಿಗಂಧ" ಎಂಬ ಅಲ್ಬಂ ಸಾಂಗ್ ಬಹು ನಿರೀಕ್ಷೆ ಮೂಡಿಸಲಿಕ್ಕಿದೆ.
0 Comments