ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸಾರ್ವಜನಿಕ ಗಣೇಶ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ


ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ನಡೆಸಲ್ಪಡುವ  ಸಾರ್ವಜನಿಕ ಗಣೇಶ ಉತ್ಸವ 2023 ರ ಸಭೆಯು ಇತ್ತೀಚೆಗೆ ಜರುಗಿತು.ಸಭೆಯ ಉದ್ಘಾಟನೆಯನ್ನು ಅಧ್ಯಕ್ಷ ರಾದ ಶ್ರೀ ಅಜೀತ್ ಕೊರಕೊಡು ಹಾಗು ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಮಹಿಳಾ ವೃಂದದವರು ದೀಪ ಬೆಳಗಿಸಿ  ದುಬೈಯಲ್ಲಿ  ಚಾಲನೆ ನೀಡಿದರು.

     


ಸಾರ್ವಜನಿಕ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಸುಗಂಧ ರಾಜ್ ಬೇಕಲ್ ರವರು ಬಿಡುಗಡೆಗೊಳಿಸಿದ್ದರು.

 


  2023 ಸೆಪ್ಟಂಬರ್ 24 ನೇ ಆದಿತ್ಯವಾರ  ಬೆಳಗ್ಗೆ 9 ರಿಂದ ಸಂಜೆ 5 ಗಂಟೆತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಅಜಮಾನ್ ಇಂಡಿಯನ್ ಅಸೋಸಿಯೇಷನ್ ನಲ್ಲಿ ಜರಗಲಿರುವುದು.

     ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ  ಸಂದೀಪ್ ರಾವ್,ಕೋಶಾಧಿಕಾರಿ ರಾಜೇಶ್ ರಾವ್ ಹಾಗು ಹಿರಿಯ ಸದಸ್ಯರಾದ ಶ್ರೀನಿವಾಸ್ ಕೃಷ್ಣಾಪುರ , ಶ್ರೀ ಪ್ರಭಾಕರ್ ಅಂಬಲತ್ತರೆ ಮತ್ತು ನಾಗೇಶ್ ರಾವ್ ನೇರಂಬಲಿ ಹಾಗು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಯಾಗಿ ಜರಗಲಿ ಎಂದು ಶುಭ ಸಂದೇಶ ನೀಡಿದರು.

Post a Comment

0 Comments