ಶರವು ಶ್ರೀ ಮಹಾ ಗಣಪತಿ ಅನುಗ್ರಹದೊಂದಿಗೆ ಅಮ್ಮ ಕಲಾವಿದರ ಅಮ್ಮೆರ್ ನಾಟಕಕ್ಕೆ ಶುಭ ಮುಹೂರ್ತ

 


ಮಂಗಳೂರು: ಶರವು ಶ್ರೀ ಮಹಾ ಗಣಪತಿ ದೇವರ ಅನುಗ್ರಹ ಪ್ರಾರ್ಥನೆಯೊಂದಿಗೆ   ಅಮ್ಮ ಕಲಾವಿದರ ಅಭಿನಯಿಸಲಿರುವ  ಅಮ್ಮೆರ್ ನಾಟಕಕ್ಕೆ ಇಂದು ಕ್ಷೇತ್ರಾಂಗಣದಲ್ಲಿ ಶುಭ ಮುಹೂರ್ತ ನೇರೆವೇರಿತು

 ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶನದಲ್ಲಿ ನೂತನ ನಾಟಕವನ್ನು ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿದ್ದು ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸಲಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ತಂಡದ ಯಜಮಾನ ಶಿವಾನಂದ ಶೆಟ್ಟಿ , ನಿರ್ದೇಶಕ ಸುಂದರ್ ರೈ ಮಂದಾರ , ಲಕುಮಿ ತಂಡದ ಕಿಶೋರ್ ಡಿ ಶೆಟ್ಟಿ , ವಸಂತ ವಿ ಅಮೀನ್ .ಕಾಂತಾರ ಚಿತ್ರ ನಟ ನವೀನ್ ಬೋಂದೇಲ್ 


ಹಾಗೂ ಅಮ್ಮ ತಂಡದ ಕಲಾವಿದರು ಉಪಸ್ಥಿತರಿದ್ದರು. ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಈ ಭಾರಿ ಅಮ್ಮ ಕಲಾವಿದರ ತಂಡಕ್ಕೆ ಸೇರ್ಪಡೆಯಾಗುವುದರೊಂದಿಗೆ ಇನ್ನಷ್ಟು ಹೊಸತನದೊಂದಿಗೆ ಸಾಮಾಜಿಕ ಸಂದೇಶವನ್ನು ಹಾಸ್ಯಮಯವಾಗಿ ಪ್ರೇಕ್ಷಕರಿಗೆ ನೀಡುವುದನ್ನು ನಿರೀಕ್ಷಿಸಬಹುದಾಗಿದೆ ಎಂದು ನಾಟಕ ಕತೃ ಸೋಮನಾಥ ಶೆಟ್ಟಿ ಮಂಗಲ್ಪಾಡಿ ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ.

ಜಾಹೀರಾತು


Post a Comment

0 Comments