ಮಂಜೇಶ್ವರ: ಉತ್ತರ ಮಲಬಾರಿನ ಪ್ರಸಿದ್ಧ ಜಮಾಅತ್ ಗಳಲ್ಲಿ ಒಂದಾದ ಉದ್ಯಾವರ ಸಾವಿರ ಜಮಾತ್ ಕಮಿಟಿಯ ಅಧ್ಯಕ್ಷರಾಗಿ ಸೈಯದ್ ಸೈಫುಲ್ಲಾ ತಂಗಲ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಟರ್ ಫ್ಲೈ, ಕೋಶಾಧಿಕಾರಿಯಾಗಿ ಅಹ್ಮದ್ ಬಾವ ಹಾಜಿ ಆಯ್ಕೆಯಾದರು. ಜಮಾಅತ್ ಅಧೀನದ ಹದಿಮೂರು ಮಹಲ್ ಗಳಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆಯಾದ ನಲವತ್ತೊಂದು ಸದಸ್ಯರು ಸೇರಿ ನೂತನ ಸಮಿತಿಯನ್ನು ಆಯ್ಕೆ ಮಾಡಿದರು. ನೂತನ ಉಪಾಧ್ಯಕ್ಷರಾಗಿ ಅಬೂಬಕರ್ ಮಾಹಿನ್ ಹಾಜಿ, ಸೈಯದ್ ಮುಹಮ್ಮದ್ ಅತ್ತಾವುಲ್ಲಾ ತಂಗಳ್ ಹಾಗೂ ಕಾರ್ಯದರ್ಶಿಗಳಾಗಿ ಎಸ್.ಎಂ. ಬಶೀರ್, ಬಾಪ್ಪನ್ ಕುಂಜಿ ತೂಮಿನಾಡು, ಎಂ.ಎಫ್ ಮೊಯ್ದೀನ್ ಫಾರೂಕ್, ಮುಸ್ತಫಾ ಉದ್ಯಾವರ್, ಬಶೀರ್ ಕರೋಡ ಮುಂತಾದವರು ಆಯ್ಕೆಯಾದರು ಕಳೆದ ಸಾಲಿನ ಸೈಫುಲ್ಲ ತಂಗಳವರ ನೇತೃತ್ವದ ಸಮಿತಿಯು ಅನೇಕ ಶ್ಲಾಘನೀಯ ಪ್ರಗತಿಪರ ಕಾರ್ಯಗಳನ್ನು ಪೂರ್ಣಗೊಳಿಸಿದೆ ರೆಂದು ಸಭೆಯಲ್ಲಿ ಸದಸ್ಯರುಗಳು ಒಕ್ಕೊರಲಿನ ಅಭಿಪ್ರಾಯ ತಿಳಿಸಿದರು.
0 Comments