ಬೆಂಗಳೂರಿನಲ್ಲಿ ತೀಯ ಸಮಾಜದಿಂದ ಗುರು ಪೂಜೆ- ಭಗವತಿ ಪೂಜೆ ಮತ್ತು ವಾರ್ಷಿಕ ಮಹಾಸಭೆ


ಬೆಂಗಳೂರು : ಬೆಂಗಳೂರಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ತೀಯ ಸಮಾಜ ಬೆಂಗಳೂರು (ರಿ) ಇತ್ತೀಚೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಕ್ಲಬ್‌ನಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗುರು ಪೂಜೆ ಮತ್ತು ಭಗವತಿ ಪೂಜೆ ಮತ್ತು ವಾರ್ಷಿಕ ಮಹಾಸಭೆವು ಯಶಸ್ವಿಯಾಗಿ ಜರುಗಿತು.


ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಕುಮಾರ್ ಎನ್. ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸದಾನಂದ ಕೆ. ಸಮಾಜದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ವಾರ್ಷಿಕ ಆರ್ಥಿಕ ವರದಿಯನ್ನು ಖಜಾಂಚಿ ಹರೀಶ ಜಿ. ಮಂಡಿಸಿದರು.

     ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವೀಂದ್ರನಾಥ ಬಳ್ಳೂರು, ಸದಾಶಿವ ಉಳ್ಳಾಲ್, ರಮೇಶ್ ಬಂಗೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದಯ ದೀಪ ಬೆಳಗಿಸಿ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.

    ಆರ್ಯಭಟ ಪ್ರಶಸ್ತಿ ಪುರಸ್ಕೃತ, ಕಲಾ ಸಾರಥಿ ತೋನ್ಸೆ ಪುಷ್ಕಲ್ ಕುಮಾರ್ ಅವರಿಂದ ಹರಿಕಥಾ ಸತ್ಸಂಗ “ಶ್ರೀಕೃಷ್ಣ ತುಲಾಭಾರ” ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

     



ಸಮಾಜದ ಹಿರಿಯ ಸದಸ್ಯೆ ಚಂದ್ರಾವತಿ ಭೋಜ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ತೀಯಾ ಸಮುದಾಯದ ಪ್ರತಿಭಾವಂತರಾದ ಕುಮಾರಿ ಹೇಮಾ ಸುವರ್ಣ (ಕನ್ನಡ ಚಲನಚಿತ್ರೋದ್ಯಮದಲ್ಲಿ ಸೌಂಡ್ ಇಂಜಿನಿಯರ್) ಅವರ ಪ್ರತಿಭೆಯನ್ನು ಗುರುತಿಸಿ ತೀಯ ಸಮಾಜ ಬೆಂಗಳೂರು ಇವರನ್ನು ಸನ್ಮಾನಿಸಿತು.

   


 2022 ರಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 




2022 ರಲ್ಲಿ ನಡೆದ ಕ್ರೀಡಾಕೂಟದ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಲಾಯಿತು.

   ಸಮಾಜದ ಬಾಂಧವರು ಹಾಗೂ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದವು.

    ಕಾರ್ಯಕ್ರಮದ ಕೊನೆಗೆ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತೀಯ ಸಮಾಜ ಬೆಂಗಳೂರು ಅಧ್ಯಕ್ಷ ಸುಕುಮಾರ್ ಧನ್ಯವಾದ ಸಲ್ಲಿಸಿದರು.

Post a Comment

0 Comments