ಮುಳ್ಳೇರಿಯ: ನವ್ಯತ ಪ್ರೋಡಕ್ಷನ್ ನಿರ್ಮಾಣದಲ್ಲಿ "ಅಯೋಧ್ಯೆ ವಾಸ ಶ್ರೀರಾಮ" ಎಂಬ ಶ್ರೀರಾಮನ ಹಿಂದೀ ಭಜನೆಗಳನ್ನು ಅಲ್ಬಂ ರೂಪದಲ್ಲಿ ಚಿತ್ರೀಕರಿಸಿ ಇಂದು (ಜುಲೈ 19) ಬಿಡುಗಡೆಗೊಳಿಸಲಾಗುತ್ತಿದೆ.
ರಂಗ ನಟ, ಸಾಹಿತಿ ಎ ಬಿ ಮಧುಸೂದನ ಬಲ್ಲಾಳ್ ಅಡ್ವಳ ಅವರ ಸಾಹಿತ್ಯ ಸಂಯೋಜನೆಯಲ್ಲಿ ಕೇರಳ ರಾಜ್ಯದ ಯುವಜನೋತ್ಸವದ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದ ಬಾಲಪ್ರತಿಭೆ ಮಿಥುಲ್ ಶರಣ್ ಬೆಳ್ಳೂರು ಮುಖ್ಯಗಾಯನದಲ್ಲಿ ಮೂಡಿ ಬರುವ ಅಲ್ಬಂ ಸಾಂಗ್ ನಲ್ಲಿ ಅನುಪಮ ಮುಂಡಿತ್ತಡ್ಕ ಸಹಗಾಯನದಲ್ಲಿ ಸಹಕರಿಸಿದ್ದಾರೆ. ನವ್ಯತಾ ಪ್ರೊಡಕ್ಷನ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳುವ ಹಾಡನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.



0 Comments