ದುಬೈ : ಕರುನಾಡಿನಲ್ಲಿ ಮನೆಮಾತಾದ (KMF) ನಂದಿನಿಯ ಉತ್ಪನ್ನಗಳ ಸ್ವಾದಿಷ್ಟತೆ ಯುಎಇಯ ಜನತೆಗೂ ಒದಗಿಸುವ ನಿಟ್ಟಿನಲ್ಲಿ ದುಬೈಯ ನಗರದ ಹೃದಯ ಬಾಗವಾದ ಕರಾಮದ ಅಹ್ಮಾದ್ ಮೂಸ ಮಸೀದಿಯ ಮುಂಭಾಗದಲ್ಲಿ (KMF) ಸಂಗ್ರಾಹ್ಯ ಮಳಿಗೆ ಲೋಕಾರ್ಪಣೆಗೊಂಡಿದೆ. ನಂದಿನಿ ಉತ್ಪನ್ನಗಳ ಮಳಿಗೆಯು ನಂದಿನಿ ಕಫೆ ಮೋ (NANDINI CAFE MOO) ಎಂಬ ಹೆಸರಿನಲ್ಲಿ ಅಗಸ್ಟ್ 19 ರಂದು ಪ್ರಾರಂಭಗೊಂಡಿದೆ.
ಸಜೀ ನರಿಮುಕ್ಕುಲಿ ಮತ್ತು ರಂಜಿತ್ ಶೆಟ್ಟಿಯವರ ಮಾಲೀಕತ್ವದ ಈ ಮಳಿಗೆಯ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಉದ್ಘಾಟಿಸಿ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆಯ ಉತ್ಪನ್ನಗಳ ಮಳಿಗೆಯನ್ನು ಪ್ರಾರಂಬಿಸಿದ ಮಾಲೀಕರಿಗೆ ಅಭಿನಂದಿಸುತ್ತ
ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿ ಶುಭವನ್ನು ಹಾರೈಸಿದರು.
ಬಿಲ್ಲವಾಸ್ ಮಾಜಿ ಅಧ್ಯಕ್ಷರಾದ ಸತೀಸ್ ಪೂಜಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಳಿಗೆಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಹಮಾನ್ ಅಂಬರಪಲ್ಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕರಾವಳಿಯ ಜನತೆಗೆ ಅತೀ ಹೆಚ್ಚು ಉಪಯೋಗವಿರುವ ನಂದಿನಿಯ ಬೆಣ್ಣೆ, ತುಪ್ಪ,ಗುಡ್ ಲೈಫ್ ಹಾಲು,ಮೊಸರು, ಸಿಹಿತಿಂಡಿಗಳು,ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ ಗಳು ಕೈಗೆಟುಕುವ ದರಗಳಲ್ಲಿ ಈ ಮಳಿಗೆಯಲ್ಲಿ ಸಿಗಲಿದೆ. ಹೆಚ್ಚಿನ ವಿವರಕ್ಕಾಗಿ +971 52 639 1697 ಕರೆಮಾಡಬಹುದು ಎಂದು ಮಾಲೀಕರಾದ ಸಜೀ ನರಿಮಕ್ಕುಲಿ ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಜಾಹೀರಾತು









0 Comments