ಮೊಗವೀರ ಫ್ಯಾಮಿಲಿ ದುಬೈಯಿಂದ 17 ನೇ ವರ್ಷದ ಸತ್ಯನಾರಾಯಣ ಪೂಜೆ ಸಂಪನ್ನ


ದುಬೈ : ಮೊಗವೀರ ಫ್ಯಾಮಿಲಿ ದುಬೈಯ ವತಿಯಿಂದ 17 ನೇ ವರ್ಷದ ಸತ್ಯನಾರಾಯಣ ಪೂಜೆ ಇತ್ತೀಚೆಗೆ ದುಬೈನಲ್ಲಿ ಭಕ್ತಿ ಸಡಗರದಿಂದ ಅದ್ದೂರಿಯಾಗಿ ಜರುಗಿತು. 

ಯುಎಇಯಲ್ಲಿ ಇರುವ ಮೊಗವೀರ ಸಮಾಜ ಬಾಂದವರು ಮತ್ತು ಇನ್ನಿತರ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡು ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು.


ಶ್ರೀ ರಘು ಭಟ್ ಮತ್ತು ಶ್ರೀ ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಇತ್ತೀಚೆಗೆ ದುಬೈನ ಅಲ್ ಸಫಾದ ಜೆ.ಎಸ್.ಎಸ್.ಸ್ಕೂಲ್ ನ ಸಭಾಂಗಣದಲ್ಲಿ ಜರಗಿದ ಸತ್ಯನಾರಾಯಣ ಪೂಜೆಯಲ್ಲಿ   ಮೊಗವೀರ್ಸ್ ನ ಪ್ರಮೋದ್ ಕುಂದರ್ ಮತ್ತು ಶ್ರೀಮತಿ ಉಷ ಕುಂದರ್ ದಂಪತಿಗಳು ಪೂಜಾ ವಿದಿ ವಿಧಾನ ನೆರೆವೇರಿಸಿದರು.


ಮೊಗವೀರ ಫ್ಯಾಮಿಲಿ ದುಬೈ ಇದರ ಸದಸ್ಯ ಸದಸ್ಯೆಯರಿಂದ  ಭಜನೆ ಕಾರ್ಯಕ್ರಮ ಹಾಗೂ ನೃತ್ಯ ಭಜನೆಯು ಸೇರಿರುವ ಆಸ್ತಿಕರಿಗೆ ಇನ್ನಷ್ಟೂ ಭಕ್ತಿ ಭಾವೈಕ್ಯತೆ ಸೃಷ್ಟಿಸಿತು.


ಮೊಗವೀರ್ಸ್ ದುಬೈಯ ಅಧ್ಯಕ್ಷರಾದ CA ಲೋಕೇಶ್ ಪುತ್ರನ್ ಮತ್ತು ಉಪಾಧ್ಯಕ್ಷರಾದ ಬಾಲಕೃಷ್ಣ ಸಾಲಿಯಾನ್ ಪೂಜೆಗೆ ಆಗಮಿಸಿದ ಕರ್ನಾಟಕ ಪರ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಭಕ್ತಾದಿಗಳನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.

ಉಪಾಧ್ಯಕ್ಷರಾದ ವಿನೋದ್ ಕಾಂಚನ್,ಸಾಂಸ್ಕೃತಿಕ ಕಾರ್ಯದರ್ಶಿ ಸಚಿನ್ ಸಮಿತಿಯ ಪದಾಧಿಕಾರಿಗಳು ಮತ್ತು ಮೊಗವೀರ್ಸ್ ದುಬೈಯ ಎಲ್ಲಾ ಸದಸ್ಯರು ಪೂಜೆಯ ಯಶಸ್ವಿಗೆ ಶ್ರಮಿಸಿದರು. ಕಾರ್ಯದರ್ಶಿ ಗೋವರ್ಧನ್ ಸಾಲಿಯಾನ್ ಧನ್ಯವಾದವಿತ್ತರು.ಮಾಹ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

ಪೋಟೋ : ವಿವೇಕ್ ಆನಂದ್ ದುಬೈ

Add



Post a Comment

0 Comments