ನಿವೃತ್ತ ಗ್ರಾಮಾಧಿಕಾರಿ ಕೃಷ್ಣ .ಡಿ.ದರ್ಬೆತ್ತಡ್ಕರಿಗೆ 75ನೇ ಜನುಮ ದಿನ | ಅಭಿನಂದನೆ

 


ಬದಿಯಡ್ಕ : ಸಾಮಾಜಿಕ , ಧಾರ್ಮಿಕ ಮುಂದಾಳು, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ .ಡಿ.ದರ್ಬೆತ್ತಡ್ಕ ಅವರ 75ನೇ ಜನುಮ ದಿನದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಕಾಸರಗೋಡು ಜಿಲ್ಲೆಯ ವಿವಿಧ ಗ್ರಾಮ ಕಚೇರಿಗಳಲ್ಲಿ ಗ್ರಾಮಾಧಿಕಾರಿಯಾಗಿ ದುಡಿದು ಜನಾನುರಾಗಿಯಾಗಿರುವ ಕೃಷ್ಣ ಧರ್ಬೆತ್ತಡ್ಕ ಅವರು ತನ್ನ‌ ಸಮಾಜದ ಹಾಗೂ ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಆಸ್ಥೆ ವಹಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಸ್ಟೇಂಡಿಗ್ ಕಮಿಟಿ ಚೆಯರ್ ಮೆನ್ ಗಂಗಾಧರ ಗೋಳಿಯಡ್ಕ , ಪ್ರಗತಿ ಸ್ಪೆಷಲ್ ಸ್ಕೂಲ್ ಡೈರೆಕ್ಟರ್ ಉದಯ ಕುಮಾರ್ ಮುಂಡೋಡು , ಜಾನಪದ ಕಲಾವಿದ ಶಂಕರ ಸ್ವಾಮಿಕೃಪ ಸನ್ಮಾನಿಸಿದರು. ಹರೀಶ್ಚಂದ್ರ ಪುತ್ತಿಗೆ , ರಾಮ ಪಟ್ಟಾಜೆ , ಸುಂದರ ಬಾರಡ್ಕ ಮೊದಲಾದವರು  ಉಪಸ್ಥಿತರಿದ್ದರು.

Post a Comment

0 Comments