ದುಬೈ ಮಾರ್ಗದೀಪ 9 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಪೂರ್ವಭಾವಿ ಸಭೆ


ದುಬೈ : ದುಬೈ ಮಾರ್ಗದೀಪ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವ ಸಿದ್ದತೆ ಸಭೆ 03.09.2023ಕೆ ದುಬೈಯಲ್ಲಿರುವ ರಾಜೇಶ್ ರಾವ್ ಪುಣೆ ಅವರ ಪುಣೆ ರೆಸಿಡೆನ್ಸಿಯಲ್ಲಿ ಜರಗಿತು.

ಅಧ್ಯಕ್ಷರಾದ ಅಜಿತ್ ಕೊರಕೋಡು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಪದಾಧಿಕಾರಿಗಳು ಸದಸ್ಯರ ಸಹಿತ ಅನೇಕ ಮಂದಿ ಬಾಗವಹಿಸಿದರು.

ಗಣೇಶೋತ್ಸವಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರುಗಳಾದ ಶ್ರೀ ಕೃಷ್ಣ ಜೆ ಪಾಲೆಮಾರ್ ಮಾಜಿ ಉಡುಪಿ ಶಾಸಕರಾದ ರಘುಪತಿ ಭಟ್ ಪಾಲ್ಗೊಳ್ಳಲಿದ್ದಾರೆಂದು ಸಭೆಯಲ್ಲಿ ಅಧಿಕೃತವಾಗಿ ತಿಳಿಸಲಾಯಿತು .


ಮಾರ್ಗದೀಪ ಸಾಂಸ್ಕೃತಿಕ ಸಮಿತಿಯಲ್ಲಿ ಸುದೀರ್ಘ ಸೇವೆ ನೀಡಿದ ಈಗಾಗಲೇ ತನ್ನ ತಾಯಿನಾಡಿಗೆ ಹಿಂತಿರುಗಿ ಹೋಗುತ್ತಿರುವ ಸಕ್ರಿಯ ಸದಸ್ಯರಾದ ಶ್ರೀ ಧೀರು ಮಲ್ಲಿಗೆ ಮಾಡು ಅವರಿಗೆ ಸಮಿತಿಯ ಕಡೆಯಿಂದ ಗೌರವಾನಿತ ಬೀಳ್ಕೊಡುಗೆ ಸಮಾರಂಭ ಸಭೆಯಲ್ಲಿ ನಡೆಸಲಾಯಿತು .ಅವರು ಮಾಡಿದ ಪ್ರಾಮಾಣಿಕ ಸೇವೆಯನ್ನು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ನೆನಪಿನ ಕಾಣಿಕೆನೀಡಿ ಫಲ ಪುಷ್ಪ ದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು .ಶ್ರೀ ಧೀರು ಅವರ ಪ್ರಾಮಾಣಿಕ ಸೇವೆ ಸರ್ವರಿಗೂ ಮಾದರಿ ಆಗಿರಲೆಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ್ ಅಂಬಲತೆರೆ ಹಾಗು ಸುಗಂದ್ ರಾಜ್ ಬೇಕಲ್ ತಮ್ಮ ಬಾಷಣಗಳಲ್ಲಿ ಹೇಳಿದರು.

ಅಧ್ಯಕ್ಷರಾದ ಅಜಿತ್ ಕೊರಕೋಡು ಶಾಲು ಹೊದ್ದಿಸಿ ಮುಖ್ಯ ಕಾರ್ಯಧರ್ಶಿಗಳಾದ ಮಹೇಶ್ ಚಂದ್ರಗಿರಿ ಫಲ ಪುಷ್ಪ ನೀಡಿ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಅಂಬಲತೆರೆ ಹಾಗು ಮಂಜುನಾಥ್ ಹೊನ್ನೆಮೂಲೆ ಸ್ಮರಣಿಕೆ ನೀಡಿ ಗೌರವಿಸಲಾಯಿತು .

 


ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನೆಡಿಸಿ ಮುಂದಿನ ಸಾರ್ವಜನಿಕ ಗಣೇಶೋತ್ಸವ ಅತ್ಯಂತ ವಿಜೃಂಬಣೆಯಿಂದ ಯಶಸ್ವಿ ಗೊಳ್ಳಿಸಲು ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರುಗಳಿಗೂ ಮನವಿ ಮಾಡಿದರು .ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ್ ಅಂಬಲತೆರೆ ಸುಗಂದ್ ರಾಜ್ ಬೇಕಲ್ ರಾಜೇಶ್ ರಾವ್ ಪುಣೆ , ದಿನೇಶ್ ಬೇಕಲ್ ,ಶ್ರೀನಿವಾಸ್ ಕೃಷ್ಣಾಪುರ, ಮಂಜುನಾಥ್ ಹೊನ್ನೆಮೂಲೆ , ಆರ್ ಕೆ ಎಸ್ ಅಧ್ಯಕ್ಷರಾದ ಸತೀಶ್ ಹಂಗಳೂರು ಮಾಜಿ ಅಧ್ಯಕ್ಷರಾದ ನಾಗೇಶ್ ನೀರಂಬಳ್ಳಿ,ಉಪಾಧ್ಯಕ್ಷರಾದ ಸಂದೀಪ್ ರಾವ್ ಮುಂಬಯಿ, ಪ್ರದಾನ ಕಾರ್ಯಧರ್ಶಿಗಳಾದ ಶ್ರೀಮತಿ ಸವಿತ ಪ್ರವೀಣ್ ಉಪ್ಪೂರ್  ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Add


Post a Comment

0 Comments