ದುಬೈ : ವರಮಹಾಲಕ್ಷ್ಮಿ ಸಮಿತಿ (VML) ದುಬೈ ಇವರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ವರಮಹಾಕ್ಷ್ಮಿ ಪೂಜೆಯು ಭಕ್ತಿ ಸಡಗರದಿಂದ ಜರುಗಿತು.
ನಗರದ ವುಡ್ ಲ್ಯಾಂಡ್ ಶಾಲೆಯ ಸಭಾಂಗಣದಲ್ಲಿ ಅಗಸ್ಟ್ 27 ರಂದು ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಸಂಜೆ 4.30 ರಿಂದ ರಾತ್ರಿ 10 ರವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರುಗಿತು.
ಯುಎಇಯ ಎಲ್ಲಾ ರಾಜ್ಯದ ಸಾವಿರಾರು ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಪುನಿತರಾದರು.
ಸಂಜೆ 4.30 ಕ್ಕೆ ಸುಮಂಗಲಿಯರಿಂದ ದೀಪ ಪ್ರಜ್ವಲನೆ ಗೊಂಡು ಲಲಿತ ಸಹಸ್ರ ನಾಮಾರ್ಚನೆ,ಭಜನೆ ಸಂಕೀರ್ತಣೆ,,ಪ್ರಾರ್ಥನೆ, ಪೂಜಾ ಸಂಕಲ್ಪ,
ಗುರು ಗಣಪತಿ ಪೂಜೆ,ಕಲ್ಪೊಕ್ತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ,ನೃತ್ಯ ಭಜನೆ,ಸುಮಂಗಲಿ ಆರಾಧನೆ,ಕನ್ನಿಕಾ ಆರಾಧನೆ,ಬ್ರಾಹ್ಮಣ ಆರಾಧನೆ,
ಮಹಾ ಮಂಗಳಾರತಿ ಕೊನೆಗೆ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಸಂಪ್ರದಾಯಿಕವಾಗಿ ಮುಕ್ತಾಯಗೊಂಡಿತು.
ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಸಾರ್ವಜನಿಕರ ಪ್ರತಿನಿದಿಯಾಗಿ ಶ್ರೀಮತಿ ರಜನಿ ಜಗದೀಶ್ ಪಡಿಲ್ ಮತ್ತು ಶ್ರೀಮತಿ ನೀತಾ ಗುಣಕಾರ ಸುವರ್ಣ ದಂಪತಿಗಳು ಕುಳಿತುಕೊಂಡಿದ್ದರು.
ಮಹಾ ಮಂಗಳಾರತಿಯ ನಂತರ ಒಂದು ವಾರದ ಮುಂಚೆ ಸಮಿತಿಯು ಮಕ್ಕಳಿಗಾಗಿ ಏರ್ಪಾಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಮತ್ತು ವಿಜೇತ ಮಕ್ಕಳಿಗೆ ನೆನಪಿನ ಕಾಣಿಕೆ ಮತ್ತು ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು.
ಚಿತ್ರ : ವಿವೇಕ್ ಆನಂದ್ ದುಬೈ
ವರದಿ : ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಂಜೇಶ್ವರ (ದುಬೈ)
Add











0 Comments