ಪೇಟೆ ವೆಂಕಟ್ರಮಣ ದೇವಸ್ಥಾನದಲ್ಲಿ ಭಜನಾ ಕಮ್ಮಟದ ಸಭೆ


ಕಾಸರಗೋಡು : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಪೂರ್ವಭಾವಿ ಸಭೆಯು ಇಂದು ಬೆಳಿಗ್ಗೆ 10 ಗಂಟೆಗೆ ಪೇಟೆ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.

     ಈ ಸಭೆಯಲ್ಲಿ ಧರ್ಮಸ್ಥಳ  ಭಜನಾ ಪರಿಷತ್ ಕಾಸರಗೋಡು  ಅಧ್ಯಕ್ಷರಾದ ವೆಂಕಟ್ರಮಣ ಹೊಳ್ಳರು ಹಾಗೂ ಮಂಜೇಶ್ವರ ತಾಲೂಕಿನ  ಅಧ್ಯಕ್ಷರಾದ ದಿನೇಶ್ ಚಿರುಗೋಳಿ ಇವರು ಭಜನಾ ಕಮ್ಮಟದ ಬಗ್ಗೆ  ಮಾತನಾಡಿದರು

   ಕೇಂದ್ರ ಕಛೇರಿ ಧರ್ಮಸ್ಥಳ  ಯೋಜನಾಧಿಕಾರಿ ಶ್ರೀನಿವಾಸ್ ಸರ್ ಮಾತನಾಡಿ ಭಜನಾಕಮ್ಮಟದ ಪಾಲ್ಗೊಳುವ ತಂಡಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.

      ವಲಯಾಧ್ಯಕ್ಷರಾದ ಪುರುಷೋತ್ತಮ ಬಂದಡ್ಕ ಭಜನಾ ಸಾಮ್ರಾಟ್ ಮೋಹನ ಆಚಾರ್ಯ ಪುಳ್ಕೂರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. 

 ಯೋಜನಾಧಿಕಾರಿ ಮುಖೇಶ್ ಸರ್  ಎಲ್ಲರನ್ನು ಸ್ವಾಗತಿಸಿ ಮೀರ ಹರೀಶ್ ಗಟ್ಟಿ ಉಳಿಯ  ಕಾರ್ಯಕ್ರಮ ನಿರೂಪಿಸಿದರು

 


 ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

0 Comments