ದುಬೈ : ತೀಯಾ ಫ್ಯಾಮಿಲಿ ಯುಎಇ ವತಿಯಿಂದ ದುಬೈನಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಯುಎಇಯಲ್ಲಿ ತೀಯಾ ಸಮಾಜ ಬಾಂಧವರು ಮತ್ತು ಅವರ ಆತ್ಮೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದರು.
ದುಬೈ ಹೆಲ್ತ್ ಕೇರ್ ಅಥಾರಿಟಿಗೆ ಬೆಂಬಲವಾಗಿ ತೀಯಾ ಫ್ಯಾಮಿಲಿ ಯುಎಇ ಏರ್ಪಡಿಸಿದ್ದ ರಕ್ತದಾನ ಶಿಬಿರವು ದುಬೈ ಆರೋಗ್ಯ ಪ್ರಾಧಿಕಾರದ ಪ್ರದಾನ ಕಛೇರಿಯ ರಕ್ತದಾನ ಕೇಂದ್ರ ಅಲ್ ಜದ್ದಾಫ್ ನಲ್ಲಿ ಮಧ್ಯಾಹ್ನ ಎರಡರಿಂದ ಸಂಜೆ ನಾಲ್ಕರ ವರೆಗೆ ಜರುಗಿತು.
ತೀಯಾ ಫ್ಯಾಮಿಲಿ ಯುಎಇಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ವಿಶೇಷ ಚಾನೆಲ್ ನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಪ್ರತಿ ವರ್ಷ ಹಾಗೂ ಇನ್ನೂ ಮುಂದೆ ನಡೆಯುವ ಇಂತಹ ರಕ್ತದಾನ ಶಿಬಿರವು ದಿ. ಉಮೇಶ್ ನಂತೂರುರವರ ಸ್ಮರಣಾರ್ಥವಾಗಿ ನಡೆಸಲಾಗುವುದು ಹಾಗೂ ಇಂದು ನಡೆದ ರಕ್ತದಾನ ಶಿಬಿರದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಉಪಾಧ್ಯಕ್ಷರಾದ ಅಮರ್ ನಂತೂರು, ಕಾರ್ಯದರ್ಶಿ ಶ್ರೀಮತಿ ಜಶ್ಮಿತಾ ವಿವೇಕ್,ಕೋಶಾಧಿಕಾರಿ ಶ್ರೀನಿವಾಸ್ ಕೋಟ್ಯಾನ್, ಜತೆ ಕೋಶಾಧಿಕಾರಿ ಮನೋಹರ್ ಕೋಟ್ಯಾನ್ ಹಾಗು ತೀಯಾ ಫ್ಯಾಮಿಲಿಯ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.
ದಿ.ಉಮೇಶ್ ನಂತೂರು ಸ್ಮರಣೆ :ಜಾತಿ,ಧರ್ಮ ಮತ್ತು ಭಾಷೆಯ ಭೇದವಿಲ್ಲದೆ ಯುಎಇಯ ಎಲ್ಲಾ ಸಮಾಜದ ಜನರಿಂದ ಪ್ರೀತಿಯನ್ನು ಗಳಿಸಿದವರು. ತುಳು ನಾಡಿನ ಸಂಸ್ಕೃತಿಗಳ,ಸಂಪ್ರದಾಯವನ್ನು ಯುಎಇಯಲ್ಲಿ ಪ್ರಚಾರ ಮಾಡಿರುವರಲ್ಲಿ ಒರ್ವರು ಉಮೇಶ್ ನಂತೂರುರವರು.ತುಳು ಕೂಟ ಯುಎಇ,ಕರ್ನಾಟಕ ಸಂಘ ಶಾರ್ಜಾ,ಬಿಲ್ಲವರ ಬಳಗ ದುಬೈ, ತೀಯಾ ಸಮಾಜ ಯುಎಇ ಮತ್ತು ಸಂಗಮ ಕಲಾವಿದರು ದುಬೈ ಇಂತಹ ಅನೇಕ ಸಂಘ ಸಂಸ್ಥೆಗಳ ಸ್ಥಾಪಕ ಸದಸ್ಯರು. ಕೆಲವು ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ತುಳು ಪರ್ಬದ ಮೂಲಕ ಹುಲಿ ನೃತ್ಯ, ಯಕ್ಷಗಾನವನ್ನು ಯುಎಇಯಲ್ಲಿ ಮೊದಲ ಬಾರಿಗೆ ಸಂಘಟನೆ ಮಾಡಿದ ಹೆಸರಲ್ಲಿ ಇವರ ಹೆಸರು ಮೊದಲಾಗಿ ಕೇಳಿ ಬರುತ್ತದೆ.
✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Add
















0 Comments