ಯುಎಇ "ಯಕ್ಷ ಸಂಭ್ರಮ" ಕ್ಕೆ ಸರ್ವ ಸಜ್ಜು

 


ದುಬೈ : ಕರ್ನಾಟಕದ ಶ್ರೀಮಂತ ಜಾನಪದ, ಪುರಾಣ ಮತ್ತು ಸಂಪ್ರದಾಯಗಳಿಗೆ ಕಿಟಕಿಯಾಗಿ ಕಾರ್ಯ ನಿರ್ವಹಿಸುವ, ಮೋಡಿಮಾಡುವ ನೃತ್ಯ, ಆತ್ಮ-ಸ್ಫರ‍್ತಿದಾಯಕ ಸಂಗೀತ ಮತ್ತು ನಾಟಕೀಯ ಕಥೆ ಹೇಳುವಿಕೆಯ ಹೆಮ್ಮೆಯ ಕಲೆ 'ಯಕ್ಷಗಾನ'ದ ಜೋಡಿ ಪ್ರದರ್ಶನ "ಯಕ್ಷ ಸಂಭ್ರಮ " . ದುಬೈ ಮತ್ತು ಅಬುಧಾಬಿಯಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 , 2023ರಂದು ರಂಗವೇರಲಿದೆ. 


ಬಡಗುತಿಟ್ಟಿನ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರಿ ಯವರ ಗಾನ ಸಾರಥ್ಯದಲ್ಲಿ ದಿಗ್ಗಜ ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ "ಚಿತ್ರಾಕ್ಷಿ ಕಲ್ಯಾಣ (ರಾಜ ರುದ್ರ ಕೋಪ) ಎಂಬ ಪ್ರಸಂಗವನ್ನು ಜೆಮ್ಸ್ ನ್ಯೂ ಮಿಲೇನಿಯಂ ಸ್ಕೂಲ್ ಅಲ್ -ಖೈಲ್ ರಸ್ತೆ ದುಬೈ ಯಲ್ಲಿ ಸೆಪ್ಟೆಂಬರ್ 30 ರ ಶನಿವಾರ ಸಂಜೆ 5 ಘಂಟೆಗೆ ಮತ್ತು ಅಬುಧಾಬಿಯಲ್ಲಿ ಚಂದ್ರಹಾಸ ಚರಿತ್ರೆ (ದುಷ್ಟಬುದ್ಧಿ ) ಎಂಬ ಪ್ರಸಂಗವನ್ನು ಜೇಮ್ಸ್ ವರ್ಲ್ಡ್ ಅಕಾಡೆಮಿ ಅಲ ರೀಮ್ ಐಲ್ಯಾಂಡ್ ಅಬುಧಾಬಿಯಲ್ಲಿ ಸೆಪ್ಟೆಂಬರ್1 ಭಾನುವಾರ ಸಂಜೆ 3 ಗಂಟೆಯಿಂದ ಆರಂಭಗೊಳ್ಳಲಿದೆ . 

ಈ ಕಾರ್ಯಕ್ರಮದ ಮುಮ್ಮೇಳದಲ್ಲಿ ಕರ್ನಾಟಕದ ದಿಗ್ಗಜ ಕಲಾವಿದರುಗಳಾದ ಸುಬ್ರಮಣ್ಯ ಚಿಟ್ಟಾಣಿ , ಕಾರ್ತಿಕ್ ಚಿಟ್ಟಾಣಿ , ಸುಧೀರ್ ಉಪ್ಪುರ್ , ಅಶೋಕ್ ಭಟ್ ಸಿದ್ದಾಪುರ , ಎಂ . ಜಿ .ಹೆಗಡೆ , ರವೀಂದ್ರ ದೇವಾಡಿಗ ಹಿಮ್ಮೇಳದಲ್ಲಿ ಗಾನ ಸಾರಥಿ ಜನ್ಸಾಲೆ ರಾಘವೇಂದ್ರ ಆಚಾರಿ , ಸುನೀಲ್ ಭಂಡಾರಿ ಮತ್ತು ಪ್ರಸನ್ನ ಹೆಗ್ಗಾರ್ ಅವರು ಭಾಗವಹಿಸಲಿದ್ದಾರೆ ಇವರ ಜೊತೆ ಸ್ಥಳೀಯ ಕಲಾವಿದರುಗಳಾದ ವಿನಾಯಕ ಹೆಗೆಡೆ , ವಿಶ್ವೇಶ್ವರ ಅಡಿಗ , ಕಿಶೋರ್ ಗಟ್ಟಿ ಮತ್ತು ಅನನ್ಯ ವೇದವ್ಯಾಸ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ . 

ದುಬೈ ಕಾರ್ಯಕ್ರಮದಲ್ಲಿ NRI ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಹಾಗು ಉದ್ಯಮಿ ಶ್ರೀ ಶ್ಯಾಮ್ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು , ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ರ‍್ವೋತ್ತಮ ಶೆಟ್ಟಿ ಯವರು ಅಬುಧಾಬಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಎರಡು ಯಕ್ಷಗಾನ ಪ್ರಸಂಗಗಳಿಗೆ ಉಚಿತ ಪ್ರವೇಶವಿದ್ದು ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕಾರ್ಯಕ್ರಮದ ಆಯೋಜಕರ ಪರವಾಗಿ ಗಣಪತಿ ಭಟ್ ಹಾಗು ಪ್ರಶಾಂತ್ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರೆ.

Add


Post a Comment

0 Comments