ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಪೂವನಡ್ಕದ ಪರಮೇಶ್ವರ ನಾಯ್ಕ ಮತ್ತು ಕುಟುಂಬ..

 


ಪೆರ್ಲ :   ಪೂವನಡ್ಕ ನಿವಾಸಿ ಪರಮೇಶ್ವರ ನಾಯ್ಕ ಎಂಬವರು ಕಳೆದ ಸುಮಾರು 8 ತಿಂಗಳಿನಿಂದ ಮಾರಣಾಂತಿಕ ಬ್ಲಡ್ ಕ್ಯಾನ್ಸರ್'ನಿಂದ ಬಳಲುತ್ತಿದ್ದು ಈಗಾಗಲೇ ಪುತ್ತೂರು ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೂ ಚಿಕಿತ್ಸೆಗಾಗಿ ಸುಮಾರು 4 ಲಕ್ಷಕ್ಕಿಂತಲೂ ಹೆಚ್ಚಿನ ಮೊತ್ತ ಖರ್ಚಾಗಿದ್ದು, ಇನ್ನು ಕೂಡ ಇವರ ಚಿಕಿತ್ಸೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ.

ಇವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರ ಪೈಕಿ ಓರ್ವ ಮಗನಿಗೆ ಆರೋಗ್ಯದ ಸಮಸ್ಯೆಯಿದೆ, ಇನ್ನೋರ್ವ ಪುತ್ರ ಕೂಲಿ ಕೆಲಸ ಹಾಗೂ ಪತ್ನಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಕುಟುಂಬ ತೀರಾ ಕಷ್ಟದಲ್ಲಿದ್ದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ಮಹಾದಾನಿಗಳಾದ ತಾವೆಲ್ಲರೂ ತಮ್ಮಿದಾಂಗುವ ಧನಸಹಾಯವನ್ನು ನೀಡಿ, ಅತೀವ ಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವಿನ ಹಸ್ತಚಾಚಬೇಕಾಗಿ ವಿನಯಪೂರ್ವಕ ವಿಜ್ಞಾಪಿಸುತ್ತಿದ್ದೇವೆ..

*ಬ್ಯಾಂಕ್ ಖಾತೆ ವಿವರ*

ಬ್ಯಾಂಕ್ ಖಾತೆ ಸಂಖ್ಯೆ- 42132200080895

Ifsc Code - CNRB0014213

ಶಾಖೆ - ಪೆರ್ಲ

ರಾಜೇಶ್ - 9496491367
S/o ಪರಮೇಶ್ವರ ನಾಯ್ಕ
ಕಲ್ಲರೋಡಿ, ಪೂವನಡ್ಕ, ಪೆರ್ಲ- 671552

Post a Comment

0 Comments