ದುಬೈ : 1985 ರ ಇಸವಿಯಲ್ಲಿ ಸ್ಥಾಪನೆಯಾದ 2005 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕರ್ನಾಟಕ ಸಂಘ ದುಬೈ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ "ಕರ್ನಾಟಕ ರಾಜ್ಯೋತ್ಸವ 2023" ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮತ್ತು ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆಪ್ಟೆಂಬರ್ 29 ರಂದು ನಗರದ ಕರಮಾದ ಫಾರ್ಚೂನ್ ಅಟ್ರೀಯುಂನ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ (KNRI) ಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ,ಯುಎಇಯ ಪ್ರತಿಷ್ಠಿತ ಉದ್ಯಮಿಗಳಾದ ರೊನಾಲ್ಡೊ ಮಾರ್ಟಿಸ್,ಫ್ರಾಂಕ್ ಫರ್ನಾಂಡೀಸ್, ಜೇಮ್ಸ್ ಮೆಂಡೋನ್ಸಾ,ಕರ್ನಾಟಕ ಸಂಘ ದುಬೈ ಪೋಷಕರಾದ ಹರೀಶ್ ಬಂಗೆರ,ಸಂಘದ ಸಲಹೆಗಾರರಾದ ಜಯಂತ್ ಶೆಟ್ಟಿ ಮತ್ತು ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಮನೋಹರ ಹೆಗ್ಡೆ ಮಾತನಾಡುತ್ತಾ ನವಂಬರ್ 26 ರಂದು ಮಧ್ಯಾಹ್ನ ಎರಡು ಗಂಟೆಯಿಂದ ಅಲ್ ನಾಸರ್ ಲೀಜರ್ ಲ್ಯಾಂಡ್ ಐಸ್ ರಿಂಕ್ ನಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಜರಗಲಿದೆ. ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತ ಅಂಬರೀಷ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಶಿವರಾಮ ತಂಗಡಗಿಯವರು ಆಗಮಿಸಲಿದ್ದರೆ.ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಇಲ್ಲಿಯ ಕನ್ನಡಿಗರನ್ನು ರಂಜಿಸಲು ದ.ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದರಾದ ದಿನೇಶ್ ಕೊಡಪದವು,ದಿನೇಶ್ ಕಡಬ,ನವೀನ್ ಡಿ.ಪಡಿಲ್ , ದೀಪಕ್ ರೈ ಪಾನಜೆ ಮತ್ತು ಬೆಂಗಳೂರಿನ ಹಾಸ್ಯ ಕಲಾವಿದರಾದ ಚಂದ್ರಪ್ರಭ ಜಿ.,ಚಿಲ್ಲರ್ ಮಂಜು,ಕಾರ್ತಿಕ್ ,ರಾಘವೇಂದ್ರ ಹಾಗು ಗಾಯನದ ಮೂಲಕ ಮನರಂಜಿಸಲು ಸಂದೇಶ್ ಮತ್ತು ನದೀರ ಬಾನು ಆಗಮಿಸಲಿದ್ದರೆ. ನೂರಕ್ಕೂ ಅಧಿಕ ಕಲಾವಿದರ ತಂಡದವರಿಂದ ಕರ್ನಾಟಕದ ವೈಭವವನ್ನು ಸಾರುವ ನೃತ್ಯ ಕಾರ್ಯಕ್ರಮಗಳು ಜರಗಲಿದೆ ಎಂದರು.
ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಮಾತನಾಡುತ್ತಾ ಗಲ್ಫ್ ದೇಶಗಳಲ್ಲಿ ಕನ್ನಡ ಭಾಷೆ ಸಂಸ್ಕೃತಿಗಾಗಿ ದುಡಿಯುವ ಒರ್ವನನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮತ್ತು ರಾಜ್ಯೋತ್ಸವದಂದು ಮೆರವಣಿಗೆ ನಡೆಯಲಿದ್ದು ವಿವಿಧ ಸಂಘ ಸಂಸ್ಥೆಗಳ ಕನ್ನಡ ಸಂಸ್ಕೃತಿಯ ಒಳಗೊಂಡಂತಹ ಟ್ಯಾಬ್ಲೊ ಪ್ರದರ್ಶಕ್ಕೆ ಅವಕಾಶ ನೀಡಲಾಗುವುದು ಎಂದರು.
KNRI ಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ ಕನ್ನಡ ಚಿತ್ರರಂಗದ ಪ್ರಸಿದ್ದ ನಟ ಈ ರಾಜ್ಯೋತ್ಸವಕ್ಕೆ ಆಗಮಿಸುವ ಸಾದ್ಯತೆ ಇದೆ. ಆ ನಟನಲ್ಲಿ ಈ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಮಾತನಾಡುವ ಪ್ರಕ್ರಿಯೆ ನಡೆಯುತ್ತಿದ್ದು ಸದ್ಯದಲ್ಲಿಯೇ ಯಾರೆಂದು ತಿಳಿಸಲಿದ್ದೆವೆ ಎಂದರು.
ಉದ್ಯಮಿಗಳಾದ ರೊನಾಲ್ಡೊ ಮಾರ್ಟಿಸ್,ಫ್ರಾಂಕ್ ಫರ್ನಾಂಡೀಸ್, ಜೇಮ್ಸ್ ಮೆಂಡೋನ್ಸಾ ಚಿತ್ರ ನಿರ್ಮಾಪಕರಾದ ಈಶ್ವರಿದಾಸ್ ಶೆಟ್ಟಿ, ದೀಪಕ್ ಎಸ್.ಪಿ ,ಬಾಲಕೃಷ್ಣ ಸಾಲಿಯಾನ್,ಅಲ್ವಿನ್ ಫಿಂಟೋ ಮತ್ತು ವಿವಿಧ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡುತ್ತಾ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ತಿಳಿಸಿದರು.
ರಾಜ್ಯೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಗಳನ್ನು ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಮುಖ್ಯ ಅತಿಥಿಗಳ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಸಂದ್ಯಾ ಕ್ರಿಯೇಷನ್ ನ ಶೋಧನ್ ಪ್ರಸಾದ್, ನಿತ್ಯಾನಂದ ಬಸ್ಕೂರು,ಮಲ್ಲಿಕಾರ್ಜುನ ಹವಾಲ್ದರ್,ಶ್ರೀಮತಿ ಮೇಘನ ಶೆಟ್ಟರ್,ಶ್ರೀಮತಿ ರೂಪ ಶಶಿಧರ್ ಡಾ. ರಶ್ಮಿ ನಂದಕಿಶೋರ್, ಅನಿಲ್ ಪೂಜಾರ್,ಸೆಂತಿಲ್ ಬೆಂಗಳೂರು, ಇಕ್ರಂ,ಮಹೇಶ್ ಅತ್ತಾವರ್,ಆನಂದ ವಲಾಲ್ ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಉಪಾಧ್ಯಕ್ಷರಾದ ದಯಾ ಕಿರೋಡಿಯಾನ್ ಸ್ವಾಗತಿಸಿ,ಕೋಶಾಧಿಕಾರಿ ನಾಗರಾಜ ರಾವ್ ಉಡುಪಿ ಧನ್ಯವಾದವಿತ್ತರು.
✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)












0 Comments