ಬದಿಯಡ್ಕ: ಕುಡಿಯುವ ನೀರಿನಲ್ಲಿ ವಿಷ ಮಿಶ್ರಣ ಮಾಡಿರುವ ಬಗ್ಗೆ ದೂರುಂಟಾಗಿದೆ. ಬದಿಯಡ್ಕ ಬಳಿಯ ಪಳ್ಳತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ಉದಯ ಕುಮಾರ್ ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಆದಿತ್ಯವಾರ ಬೆಳಗ್ಗೆ ಎದ್ದು ಮುಖ ತೊಳೆಯಲು ನೀರು ತೆಗೆದಾಗ ಅಸಹ್ಯ ವಾಸನೆ ಹಾಗೂ ಪ್ರತ್ಯೇಕ ಬಣ್ಣ ಕಂಡು ಬಂತು. ಕೂಡಲೇ ಮನೆಯ ಬಲ ಭಾಗದ ಗುಡ್ಡದಲ್ಲಿರುವ ಟ್ಯಾಂಕ್ ನೋಡಿದಾಗ ನೀರು ಬಿಳಿ ಬಣ್ಣಕ್ಕೆ ತಿರುಗಿರುವುದು ಕಂಡು ಬಂತು. ಮಾಹಿತಿ ತಿಳಿದು ಬದಿಯಡ್ಕ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದರು. ಆರೋಗ್ಯ ಆಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.




0 Comments