ದುಬೈ : ಕರ್ನಾಟಕ ಸಂಘ ಶಾರ್ಜ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನವೆಂಬರ್18 ರಂದು ಶಾರ್ಜಾದ ಇವಾನ್ ಹೋಟೆಲ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಯು.ಎ.ಇ. ಮತ್ತು ಭಾರತದ ರಾಷ್ಟ್ರಗೀತೆ ಹಾಗೂ ಕರ್ನಾಟಕದ ನಾಡಗೀತೆ ಹಾಡುವ ಮೂಲಕ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ ಮತ್ತು ಸಲಹೆಗಾರರು, ಪದಾಧಿಕಾರಿಗಳು ಕರ್ನಾಟಕದ ಬಾವುಟವನ್ನು ಹಾರಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಯೂರ ವಿಶ್ವಮಾನ್ಯ ಪ್ರಶಸ್ತಿ ಪ್ರದಾನ:
ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಕನ್ನಡ ಭಾಷೆ,ಕಲೆ,ಸಂಸ್ಕೃತಿ,ಸಾಹಿತ್ಯ, ನಾಟಕ,ಯಕ್ಷಗಾನ, ಕ್ರೀಡೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ವರ್ಷಾಂಪ್ರತಿ ನೀಡಲಾಗುವ "ಮಯೂರ ವಿಶ್ವಮಾನ್ಯ ಕನ್ಮಡಿಗ ಪ್ರಶಸ್ತಿ"ಯನ್ನು 2023-24 ನೇ ಸಾಲಿನ ಪ್ರಶಸ್ತಿಯನ್ನು ಸತತ ಹಲವಾರು ವರ್ಷಗಳ ಕಾಲ ಯುಎಇಯಲ್ಲಿ ಸಮಾಜ ಸೇವೆಯನ್ನು ಮಾಡುತಿರುವ ಮೋಹನ್ ನರಸಿಂಹಮೂರ್ತಿಯವರಿಗೆ ನೀಡಿ ಗೌರವಿಸಲಾಯಿತು. ಶಾರ್ಜಾ ಕರ್ನಾಟಕ ಸಂಘದ ಮಾಹ ಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಹರೀಶ್ ಶೇರಿಗಾರ್,ಮಾರ್ಕ್ ಡೆನ್ನಿಸ್,ಜೋಸೆಫ್ ಮಥಯೀಸ್,ರಾಮಚಂದ್ರ ಹೆಗ್ಡೆಯವರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ರಾಸಲ್ ಕೈಮ (RAK) ಕರ್ನಾಟಕ ಸಂಘದ ಅಧ್ಯಕ್ಷರಾದ ಉದ್ಯಮಿ ಹರೀಶ್ ಬಂಗೆರ ಹಾಗೂ ಶಾರ್ಜಾ ಕರ್ನಾಟಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಹಲವಾರು ವರ್ಷಗಳಿಂದ ಯುಎಇಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಶ್ರೀಮತಿ ಜೆಸ್ಮಿತಾ ವಿವೇಕ್ ದಂಪತಿ, ಶ್ರೀಮತಿ ಆರತಿ ಅಡಿಗ ದಂಪತಿ,ಸುಗಂದರಾಜ್ ಬೇಕಲ್,ಮಾರ್ಕ್ ಡೆನ್ನಿಸ್ ರವರನ್ನು ಶಾಲು ಹೊದಿಸಿ ಫಲ ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ 20 ವರ್ಷಗಳ ಸಾಧನೆಗಳ ಹೆಜ್ಜೆಗುರುತುಗಳ ನೆನಪಿಗಾಗಿ "ಮಯೂರ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಸಂಘದ ಸಲಹೆಗಾರರಾದ ಬಿ.ಕೆ.ಗಣೇಶ್ ರೈ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ ಮಾಹ ಪೋಷಕರಿಗೆ, ಯುಎಇಯ ತುಳು-ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಮಾದ್ಯಮದವರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳೂರಿನ ಖ್ಯಾತ ಗಾಯಕರಾದ ಮಹಮ್ಮದ್ ಇಕ್ಬಾಲ್ ,ದುಬೈಯ ಖ್ಯಾತ ಗಾಯಕ ಗಾಯಕಿಯಾರಾದ ಹರೀಶ್ ಶೇರಿಗಾರ್ ಮತ್ತು ಸನ್ನಿದಿ ವಿಶ್ವನಾಥ ಶೆಟ್ಟಿಯವರಿಂದ ಸಂಗೀತ ರಸದಾರೆ ಜರಗಿತು.ರೂಪ ಕಿರಣ್ ತಂಡ, ಸ್ಮೈಲ್ ಕ್ರೀಯೀಷನ್ ತಂಡ,ಸಿಂಫೊನಿ ಮ್ಯೂಸಿಕ್ ಇನ್ಸ್ಟಿಟ್ಯೂಟ್ ಅಜ್ಮಾನ್,ಬಿಲ್ಲವಾಸ್ ಫ್ಯಾಮಿಲಿ ದುಬೈ,RAK ಕರ್ನಾಟಕ ಸಂಘ,ನೃತ್ಯ ಕಣ್ಮನಿಯರು,ರಮಣ ಲಾಸ್ಯ ತಂಡ ಮತ್ತು ಗೋಲ್ಡನ್ ಸ್ಟಾರ್ ಅಂಡ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ ತಂಡದವರಿಂದ ವಿವಿಧ ಶೈಲಿಯ ನೃತ್ಯ ಕಾರ್ಯಕ್ರಮಗಳು ಕನ್ನಡಿಗರನ್ನು ಮನರಂಜಿಸಿದ್ದವು.ದೀಕ್ಷ ರೈ ಮತ್ತು ಶ್ರೀಮತಿ ಆರತಿ ಅಡಿಗ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ದೇಹರ್ದಾಡ್ಯ ಸ್ಪರ್ಧಾ ವಿಜೇತರು
ಆಕರ್ಷಣೆಯ ಕಾರ್ಯಕ್ರಮವಾಗಿ ಯುಎಇಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಏರ್ಪಡಿಸಿದ್ದ ದೇಹರ್ದಾಡ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಎಳು ಮಂದಿಗಳು ಪಟುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದರು.
"ಮಿ.ಇಂಡಿಯಾ"ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಜಗದೀಶ್ ಪೂಜಾರಿ ಮತ್ತು
"ಮಿ.ಕರ್ನಾಟಕ"ಪ್ರಶಸ್ತಿ ವಿಜೇತ ವಿನೋದ್ ಗೌಡರವರ ತೀರ್ಪುಗಾರರ ಉಪಸ್ಥಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಶಾರ್ಜಾ ಕರ್ನಾಟಕ ಸಂಘದ "ಮಿ.ಮಯೂರ" ಪ್ರಶಸ್ತಿಯನ್ನು ರವಿಕುಮಾರ್ ಪೂಜಾರಿ ತನ್ನದಾಗಿಸಿಕೊಂಡರು.ದ್ವಿತೀಯ ಸ್ಥಾನ ಸುಮಂತ ಆಚಾರ್ಯ,ತೃತೀಯ ಸ್ಥಾನವನ್ನು ಸುಧೀರ್ ವಿಠಲರವರು ಪಡೆದರು.ಬೆಸ್ಟ್ ಪೋಷರಾಗಿ (Best Poser) ರಕ್ಷಿತ್ ಕುಮಾರ್ ಆಯ್ಕೆಯಾದರು.ಕಾರ್ಯಕ್ರಮದ ನಿರೂಪಣೆಯನ್ನು RJ ಎರೋಲ್ ಮಾಡಿದರು.
ಸಲಹಾ ಸಮಿತಿಯ ಸದಸ್ಯರಾದ ನೊಯೇಲ್ ಅಲ್ಮೇಡಾ,ಪ್ರಭಾಕರ ಅಂಬಲತರೆ,ಶಾಂತರಾಮ ಆಚಾರ್ಯ,ಆನಂದ ಬೈಲೂರು, ಎಂ.ಇ.ಮೂಲೂರು,ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಪ್ರದಾನ ಕಾರ್ಯದರ್ಶಿ ವಿಘ್ನೇಶ್ ಕುಂದಪುರ,ಜತೆ ಕಾರ್ಯದರ್ಶಿ ಮಹಮ್ಮದ್ ಅಬ್ರಾರ್ ಉಲ್ಲ,ಕೋಶಾಧಿಕಾರಿ ಸುಗಂದರಾಜ್ ಬೇಕಲ್,ಸಾಂಸ್ಕೃತಿಕ ಕಾರ್ಯದರ್ಶಿ ಅಮರ್ ಉಮೇಶ್, ಕ್ರೀಡಾ ಕಾರ್ಯದರ್ಶಿ ಜೀವನ್ ಕುಕ್ಯಾನ್,ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂದೀಪ್ ರಾವ್,ಅಬ್ದುಲ್ ರಝಕ್,ರಘುರಾಮ ಶೆಟ್ಟಿಗಾರ್,ಸಯ್ಯದ್ ಮಹಮ್ಮದ್ ಅಜ್ಮಾಲ್,ದಿನೇಶ್ ಎಂ.ಸಾಲಿಯಾನ್, ರಿತೇಶ್ ಅಂಚನ್,ಅಮೀತ್ ಕುಮಾರ್ ಎಚ್.ವಿ.,ಪ್ರೇಮನಂದ ಮಾರ್ನಾಡ್ ಹಾಗೂ ಮಹಿಳಾ ಸಮಿತಿಯ ಸದಸ್ಯೆಯರು ಇಷ್ಟು ದೊಡ್ಡ ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.
✒️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ ದುಬೈ












0 Comments