ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ದುಬೈ : ಕನ್ನಡಿಗರು ಎಲ್ಲಿಗೆ ಹೋದರೂ ಎನೇ ಕಾರ್ಯಕ್ರಮ ಮಾಡಿದರು ಎಲ್ಲಾ ಕನ್ನಡಿಗರಿ ಒಗ್ಗೂಡಿಸಿ ಒಗ್ಗಟಾಗಿ ಕಾರ್ಯಕ್ರಮ ಮಾಡುತ್ತಾರೆ ಎಂಬುದಕ್ಕೆ ಯುಎಇಯಲ್ಲಿ ಇರುವ ಕನ್ನಡಿಗರ ಸಂಘ- ಸಂಸ್ಥೆಗಳ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಮ್ಮ ನಿಮ್ಮೆಲ್ಲರ ಒಂದೇ ಆಶಯ ದುಬೈನಲ್ಲಿ ಕನ್ನಡ ಭವನ ಎದ್ದು ನಿಲ್ಲಬೇಕೆಂದು.ಇಲ್ಲಿಯ ಕನ್ನಡಿಗರ ಒಗ್ಗಟ್ಟನ್ನು ನೋಡುವಾಗ ಆದಷ್ಟು ಬೇಗ ದುಬೈನಲ್ಲಿ ಕನ್ನಡ ಭವನ ಎದ್ದು ನಿಲ್ಲುತ್ತದೆ ಎಂದು ಮಂಡ್ಯದ ಸಂಸದೆಯಾದ ಶ್ರೀಮತಿ ಸುಮಲತ ಅಂಬರೀಶ್ ರವರು ದುಬೈ ಕರ್ನಾಟಕ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಮ್ಮ ಆಶಾದಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನವಂಬರ್ 26 ರಂದು ಕರ್ನಾಟಕ ಸಂಘ ದುಬೈನ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವನ್ನು ಬಹು ಅದ್ದೂರಿಯಾಗಿ ಆಚರಿಸಲಾಯಿತು.
ಯುಎಇಯಲ್ಲಿ ಇರುವ ಎಲ್ಲಾ ರಾಜ್ಯದ ಸಾವಿರಾರು ಮಂದಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
"ದುಬೈ ಕರ್ನಾಟಕ ರಾಜ್ಯೋತ್ಸವ-2023" ಪ್ರಶಸ್ತಿ
ಸತತ ಹಲವಾರು ವರ್ಷಗಳಿಂದ ಯುಎಇಯಲ್ಲಿ ರಕ್ತದಾನ ಕಾರ್ಯಕ್ರಮದ ಸಂಘಟಕರಾಗಿ ಸಮಾಜ ಸೇವೆ ಮಾಡುತ್ತಿರುವ ಬಾಲಕೃಷ್ಣ ಸಾಲಿಯಾನ್ ಎರ್ಮಾಲ್ ಮತ್ತು ಶ್ರೀಮತಿ ಲಕ್ಷ್ಮಿ ಬಾಲಕೃಷ್ಣ ಸಾಲಿಯಾನ್ ರವರಿಗೆ ಈ ವರ್ಷದ "ದುಬೈ ಕರ್ನಾಟಕ ರಾಜ್ಯೋತ್ಸವ-2023"ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಸದೆ ಶ್ರೀಮತಿ ಸುಮಲತಾ ಅಂಬರೀಶ್, ಚಿತ್ರ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್,ಉಡುಪಿಯ ಶಾಸಕರಾದ ಯಸ್ ಪಾಲ್ ಸುವರ್ಣ,ಶ್ರೀ ವಿಕಾಸ್,ಉದ್ಯಮಿ ಫ್ರಾಂಕ್ ಫೆರ್ನಾಂಡೀಸ್, ಎನ್.ಆರ್,ಐ.ಫಾರಂ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಉದ್ಯಮಿಗಳಾದ ಇಬ್ರಾಹಿಂ ಗಡಿಯಾರ,ಮೊಯ್ದಿನ್ ತುಂಬೆ,ಕನ್ನಡ ಚಿತ್ರರಂಗದ ಶಿವದ್ವಜ್ ಶೆಟ್ಟಿ, ಮದನ್ ಪಟೆಲ್,ಪ್ರಶಾಂತ್ ರೈ,ಕರ್ನಾಟಕ ಸಂಘ ದುಬೈ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,
ಭೀಮ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕರಾದ ಯು.ನಾಗರಾಜ ರಾವ್, ಕಕರ್ನಾಟಕ ಸಂಘ ದುಬೈಯ ಮಹಾ ಪೋಷಕರಾದ ಹರೀಶ್ ಬಂಗೆರ,ರೊನಾಲ್ಡೊ ಮಾರ್ಟಿಸ್,ಬಿ.ಕೆ.ಯುಸುಫ್,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ,RAK ಕರ್ನಾಟಕ ಸಂಘದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ,ಅಲ್ ಐನ್ ಕನ್ನಡ ಸಂಘದ ಹರೀಶ್ ಯು.ಪಿ., ಕರ್ನಾಟಕ ಸಂಘದ ಸಲಹೆಗಾರರಾದ ಜಯಂತ್ ಶೆಟ್ಟಿ,ಉಪಾಧ್ಯಕ್ಷರಾದ ದಯಾ ಕೀರೊಡಿಯನ್,ಕಾರ್ಯದರ್ಶಿ ಮನೋಹರ ಹೆಗ್ಡೆ,ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ,ಕೋಶಾಧಿಕಾರಿ ನಾಗರಾಜ ರಾವ್ ಉಪಸ್ಥಿತರಿದ್ದರು.
ಸಂಸದೆ ಶ್ರೀಮತಿ ಸುಮಲತ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಮತ್ತು ಶಾಸಕರಾದ ಯಸ್ ಪಾಲ್ ಸುವರ್ಣರವರನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಹಾಸ್ಯ ಕಲಾವಿದರಾದ ದಿನೇಶ್ ಕೊಡಪದವು,ದಿನೇಶ್ ರೈ ಕಡಬ,ಕಾಂತರ ಖ್ಯಾತಿಯ ದೀಪಕ್ ರೈ ಪಾನಜೆ,ಮಜಾ ಟಾಕಿಸ್ ನ ನವೀನ್ ಡಿ.ಪಡಿಲ್,ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಟಿ.ಚಂದ್ರಪ್ರಭಾ,ಚಿಲ್ಲರ್ ಮಂಜು,ಕಾರ್ತಿಕ್,ರಾಘವೇಂದ್ರರವರು ಹಾಸ್ಯ ಪ್ರಹಸನಗಳನ್ನು ಪ್ರಸ್ತುತ ಪಡಿಸಿದರು.ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಗಾಯಕಿಯರಾದ ಸಂದೇಶ್ ನೀರುಮಾರ್ಗ,ನದೀರ ಭಾನು,ಯುಎಇಯ ಗಾಯಕರಾದ ನವೀದ್ ಮಾಗುಂಡಿಯವರಿಂದ ಸಂಗೀತ ರಸದೌತನ ನಡೆಯಿತು.ಚಿರಂತನ ಡ್ಯಾನ್ಸ್ ಅಕಾಡೆಮಿ ಬೆಂಗಳೂರು ಇದರ ನೃತ್ಯ ನಿರ್ದೇಶಕರಾದ ಡಾ.ಸಂಜಯ್ ಶಾಂತರಾಮ್ ರವರ ಸಾರಥ್ಯದಲ್ಲಿ ನೂರಾರು ಕಲಾವಿದರಿಂದ "ಕರ್ನಾಟಕ ದರ್ಶನ" ನೃತ್ಯ ರೂಪಕ ಪ್ರಸ್ತುತ ಪಡಿಸಿದರು ಹಾಗೂ ಯುಎಇಯ ಪ್ರಸಿದ್ಧ ನೃತ್ಯ ತಂಡದ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು.
ಕರುನಾಡ ವೈಭವ ಸಂಸ್ಕ್ರತಿಯ ಮೆರವಣಿಗೆಯೊಂದಿಗೆ ಗಣ್ಯತಿ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತ್ತು. ಮೆರವಣಿಗೆಯ ವೈಭವದ ಪರಿಚಯವನ್ನು ಬಿ.ಕೆ.ಗಣೇಶ್ ರೈಯವರು ನಡೆಸಿಕೊಟ್ಟರು.
ಟೀಮ್ ಪಿಲಿ ನಲಿಕೆ ದುಬೈ ಮತ್ತು ಅಪ್ಪೆನ ಮೊಕೆದ ಪಿಲಿಕುಲು ತಂಡದವರಿಂದ ವಿಶೇಷ ಶೈಲಿಯ ಹುಲಿ ಕುಣಿತ ಸೇರಿದ ಕನ್ನಡಿಗರನ್ನು ಮನರಂಜಿಸಿತ್ತು.ಗಲ್ಫ್ ನಾಡಿನ ಕನ್ನಡಿಗರ ಮಕ್ಕಳಗಾಗಿ ಬುಗರಿ ಆಟ,ಪಗಡೆ ಆಟ,ಕುಂಟಾ ಪಿಲ್ಲೆ ಆಟ,ಚೆನ್ನೆ ಮಣೆ ಆಟ,ಗೋಲಿ ಆಟ,ಚೌಕಬಾರ ಆಟ ವಿಶೇಷ ಆಕರ್ಷಣೆಯಾಗಿತ್ತು.
ಡಾ.ರೂಪ ಕಿರಣ್ ರವರ ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು,ಚಿತ್ರನಟಿ ಅಂಕಿತ ಅಮರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ,ಸನ್ಮಾನಿತರ ಪರಿಚಯವನ್ನು ಮಾಡಿದರು. ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡರವರು ಧನ್ಯವಾದವಿತ್ತರು. ಸಹ ಬೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.














0 Comments